ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ಮುಂದೆ ಮೈಸೂರು- ಬೆಂಗಳೂರು ಶತಾಬ್ದಿ ರೈಲುಗಳ ವೇಗ ಹೆಚ್ಚಳ

|
Google Oneindia Kannada News

ಮೈಸೂರು, ಜುಲೈ 1: ಇನ್ನು ಮುಂದೆ ದಿನನಿತ್ಯ ಮೈಸೂರು- ಬೆಂಗಳೂರು ನಡುವೆ ಸಂಚರಿಸುವ ರೈಲು ಪ್ರಯಾಣಿಕರಿಗೆ ಸಂತಸದ ವಿಚಾರವಿದೆ. ಇಂದಿನಿಂದ ಮೈಸೂರು - ಬೆಂಗಳೂರು ನಡುವೆ ಸಂಚರಿಸುವ ಶತಾಬ್ದಿ ಎಕ್ಸ್ ಪ್ರೆಸ್ ರೈಲಿನ ವೇಗವನ್ನು ಹೆಚ್ಚಿಸಲಾಗುತ್ತಿದ್ದು, 1 ಗಂಟೆ 55 ನಿಮಿಷಗಳಲ್ಲಿ ಬೆಂಗಳೂರನ್ನು ತಲುಪಲಿದೆ.

 ರೈಲ್ವೆ ಪ್ಲ್ಯಾಟ್‌ಫಾರಂಗಳ ನಡುವೆ ಸಿಲುಕಿದ್ದ ವ್ಯಕ್ತಿ ಪವಾಡ ರೀತಿಯಲ್ಲಿ ಪಾರು ರೈಲ್ವೆ ಪ್ಲ್ಯಾಟ್‌ಫಾರಂಗಳ ನಡುವೆ ಸಿಲುಕಿದ್ದ ವ್ಯಕ್ತಿ ಪವಾಡ ರೀತಿಯಲ್ಲಿ ಪಾರು

ನೈಋತ್ಯ ರೈಲ್ವೆ ಪ್ರಕಟಿಸಿದ ಪರಿಷ್ಕೃತ ವೇಳಾಪಟ್ಟಿ ಪ್ರಕಾರ, ಈ ರೈಲು ಬೆಂಗಳೂರು - ಮೈಸೂರು ಅಂತರವನ್ನು ಬಹುಬೇಗ ಕ್ರಮಿಸಲಿದೆ. ಮೈಸೂರಿನಿಂದ ಮಧ್ಯಾಹ್ನ 2.15ಕ್ಕೆ ಹೊರಡುವ ರೈಲು ಸಂಜೆ 4.10ಕ್ಕೆ ಬೆಂಗಳೂರು ತಲುಪಲಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ 2 ಗಂಟೆ ಹೆಚ್ಚು ಅವಧಿಯನ್ನು ಶತಾಬ್ದಿ ತೆಗೆದುಕೊಳ್ಳುತ್ತಿತ್ತು. ಕೆಲವೊಮ್ಮೆ 15-20 ನಿಮಿಷಗಳಿಗೂ ಹೆಚ್ಚಾಗುತ್ತಿತ್ತು. ಜೋಡಿ ರೈಲು ಮಾರ್ಗ ಹಾಗೂ ವಿದ್ಯುದೀಕರಣದ ನಂತರ ರೈಲಿನ ವೇಗವನ್ನು ಹೆಚ್ಚಿಸಲಾಗಿದೆ. ಇಂದಿನಿಂದ ಶತಾಬ್ದಿ ಎಕ್ಸ್ ಪ್ರೆಸ್ ಮಾತ್ರವೇ ಅಲ್ಲ, ಇನ್ನೂ ಕೆಲವು ರೈಲುಗಳ ವೇಗ ಹೆಚ್ಚಲಿದೆ.

Mysuru Bengaluru Shatabdi trains speed increased

ಚೆನ್ನೈ-ಮೈಸೂರು ವೀಕ್ಲಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ವೇಗವನ್ನು ಗಂಟೆಗೆ 10 ನಿಮಿಷಗಳಷ್ಟು ಹೆಚ್ಚಿಸಲಾಗಿದೆ. ಹುಬ್ಬಳ್ಳಿ - ಬೆಂಗಳೂರು ಎಕ್ಸ್ ಪ್ರೆಸ್ ವೇಗವನ್ನು 15 ನಿಮಿಷ ಹೆಚ್ಚಿಸಲಾಗಿದೆ. ಹೊಸದಾಗಿ ಆರಂಭಿಸಲಾದ ಕಾಚಿಗುಡ ಎಕ್ಸ್ ಪ್ರೆಸ್, ಮೈಸೂರು ಮತ್ತು ಬೆಂಗಳೂರು ನಡುವೆ 15 ನಿಮಿಷಗಳಷ್ಟು ವೇಗ ಹೆಚ್ಚಿಸಿಕೊಳ್ಳಲಿದೆ. ಹಳೆ ಕಾಮಗಾರಿ ಮತ್ತು ವಿದ್ಯುದೀಕರಣ ಸೇರಿದಂತೆ ಹಲವು ಸುಧಾರಣೆ ಕೆಲಸದ ಬಳಿಕ ರೈಲುಗಳ ವೇಗವನ್ನು ಹೆಚ್ಚಿಸಲಾಗಿದೆ ಎಂದು ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

English summary
Mysuru-Bengaluru Shatabdi trains speed will increase from today. The train will take 1 hour and 55 minutes between mysuru to bangaluru. several other trains also increased speed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X