ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು- ಬೆಂಗಳೂರು- ಚೆನ್ನೈ ಹೈಸ್ಪೀಡ್ ರೈಲು ಸರ್ವೆ; ಡಿಪಿಆರ್‌ಗೆ ಕೇಂದ್ರ ಸಮ್ಮತಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 12: ಬಹುನಿರೀಕ್ಷಿತ ಮೈಸೂರು- ಬೆಂಗಳೂರು- ಚೆನ್ನೈ ಹೈಸ್ಪೀಡ್ ರೈಲು ಯೋಜನೆ ಸರ್ವೆ ಹಾಗೂ ಡಿಪಿಆರ್ ಪ್ರಕ್ರಿಯೆಗೆ ಕೇಂದ್ರ ಸರಕಾರ ಹಸಿರು ನಿಶಾನೆ ತೋರಿದೆ. ಈ ಯೋಜನೆ ಯಶಸ್ವಿಯಾದರೆ ಮೈಸೂರು- ಚೆನ್ನೈ ಪ್ರಯಾಣದ ಅವಧಿ ಕೇವಲ 2.30 ತಾಸಿಗೆ ಇಳಿಕೆಯಾಗಲಿದೆ.

ಈ ಕುರಿತು ಹೇಳಿಕೆ ನೀಡಿರುವ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ, ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಯೋಜನೆ ಕುರಿತು ವಿಶೇಷ ಆಸಕ್ತಿ ತೋರಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ್ದಾರೆ.

ಏನಿದು ಯೋಜನೆ?
ಮೈಸೂರು- ಬೆಂಗಳೂರು- ಚೆನ್ನೈ ರೈಲಿನಲ್ಲಿ ಕೇವಲ 40 ನಿಮಿಷಗಳಲ್ಲಿ ಮೈಸೂರಿನಿಂದ ಬೆಂಗಳೂರಿಗೆ ತಲುಪಬಹುದಾಗಿದೆ. ಅದೇ ರೀತಿ ಮೈಸೂರು- ಚೆನ್ನೈ ನಡುವೆ ಕೇವಲ 2.30 ತಾಸಿನಲ್ಲಿ ಪ್ರಯಾಣಿಸಬಹುದಾಗಿದೆ. 435 ಕಿ.ಮೀ ದೂರದ ಈ ಮಾರ್ಗದಲ್ಲಿ ರೈಲು ಗಂಟೆಗೆ 320 ಕಿ.ಮೀ ವೇಗದಲ್ಲಿ ಚಲಿಸಲಿದೆ. ಇದರಿಂದಾಗಿ ಈಗಿನ ಪ್ರಯಾಣದ ಅವಧಿಯಲ್ಲಿ ಒಟ್ಟು 7 ತಾಸುಗಳು ಕಡಿತವಾಗಲಿವೆ. ಯೋಜನೆಯ ಅಂದಾಜು ವೆಚ್ಚ 1 ಲಕ್ಷ ಕೋಟಿ ರೂ. ಆಗಿದೆ.

Mysuru-Bengaluru-Chennai High Speed ​​Rail Survey; Central Govt Consent To DPR

'ಒಡೆಯರ್ ಎಕ್ಸ್‌ಪ್ರೆಸ್' ನಾಮಕರಣಕ್ಕೆ ಮನವಿ
ಟಿಪ್ಪು ಎಕ್ಸ್‌ಪ್ರೆಸ್ ಬದಲು ಮೈಸೂರಿಗೆ ರೈಲು ಸಂಪರ್ಕ ತಂದ ಮಹಾರಾಜರ ಕೊಡುಗೆಯ ಪ್ರತೀಕವಾಗಿ ಮೈಸೂರು- ಬೆಂಗಳೂರು- ಚೆನ್ನೈ ಹೈಸ್ಪೀಡ್ ರೈಲಿಗೆ 'ಒಡೆಯರ್ ಎಕ್ಸ್‌ಪ್ರೆಸ್' ಎಂದು ನಾಮಕರಣ ಮಾಡುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ.

Recommended Video

Karnataka hijab ban: America ನೀಡಿದ Hijab ಹೇಳಿಕೆಗೆ ತಿರುಗೇಟು ಕೊಟ್ಟ ಭಾರತ | Oneindia Kannada

ಮಂಗಳೂರಿಗೆ ನಿತ್ಯ ರೈಲು
ವಾರದಲ್ಲಿ 3 ದಿನದ ಬದಲಾಗಿ ಮೈಸೂರಿನಿಂದ ಮಂಗಳೂರಿಗೆ ನಿತ್ಯ ರೈಲು ಸಂಪರ್ಕ ಕಲ್ಪಿಸಲು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ. ''ಮೈಸೂರಿನಿಂದ ಕಾರವಾರ/ ಕಣ್ಣೂರಿಗೆ ನಿತ್ಯ ರೈಲು ಸೇವೆಗಳನ್ನು ಮರು- ಪರಿಚಯಿಸಲು ರೈಲ್ವೆಯೊಂದಿಗೆ ಪ್ರಸ್ತಾಪಿಸಿ ಒತ್ತಾಯಿಸಿದ್ದೇನೆ. ಆದರೆ ಇದುವರೆಗೂ ಯಾವುದೇ ಪ್ರಗತಿಯಾಗಿಲ್ಲ,'' ಎಂದು ಪ್ರತಾಪ ಸಿಂಹ ತಿಳಿಸಿದ್ದಾರೆ.

English summary
Central Government Consent To DPR to Mysuru- Bengaluru- Chennai High Speed ​​Rail Project Survey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X