ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಷಾಸುರ ಪ್ರಿಯ ಕೆ.ಎಸ್.ಭಗವಾನ್‌ಗೆ ದೊರೆತಿದೆ ಹೊಸ ಬಿರುದು!

|
Google Oneindia Kannada News

ಮೈಸೂರು, ಅಕ್ಟೋಬರ್ 06: ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿ ಮಾಡುವ ವಿಚಾರವಾದಿ ಕೆ.ಎಸ್.ಭಗವಾನ್‌ಗೆ ವಿನೂತನ ಬಿರುದೊಂದನ್ನು ನೀಡಲು ಮೈಸೂರಿನ ಬೆಳಕು ಸಂಸ್ಥೆ ನಿರ್ಧಿಸಿದೆ.

ಮಹಿಷ ರಾಕ್ಷಸ ಎಂಬುದು ಸುಳ್ಳು ಎಂದ ಪ್ರೊ. ಕೆಎಸ್ ಭಗವಾನ್

ಮಹಿಷಾಸುರ ದಸರಾದ ಆಚರಿಸುವ ಬಗ್ಗೆ ಮಾತನಾಡುತ್ತಿರುವ ಕೆ.ಎಸ್. ಭಗವಾನ್ ರವರನ್ನು 2018ರ ಅಭಿನವ ಮೈಷಾ'ಅಸುರ' ರಾಷ್ಟ್ರೀಯ ಅಣಕು ಪ್ರಶಸ್ತಿಗೆ ಆಯ್ಕೆಮಾಡಿದ್ದು ಸಂಸ್ಥೆಯ ಅಧ್ಯಕ್ಷ ಕೆ.ಎಂ. ನಿಶಾಂತ್ ರವರು ಈ ಅಣಕು ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಕೆ.ಎಸ್. ಭಗವಾನ್ ಅವರಿಗೆ ಆಹ್ವಾನ ಸಹ ನೀಡಿದ್ದಾರೆ.

ದಸರಾ ಉದ್ಘಾಟನೆ - ಸಾಮಾನ್ಯಳಿಗೆ ಸಿಕ್ಕ ದೊಡ್ಡ ಸನ್ಮಾನ : ಸುಧಾ ಮೂರ್ತಿದಸರಾ ಉದ್ಘಾಟನೆ - ಸಾಮಾನ್ಯಳಿಗೆ ಸಿಕ್ಕ ದೊಡ್ಡ ಸನ್ಮಾನ : ಸುಧಾ ಮೂರ್ತಿ

ಅಕ್ಟೋಬರ್ 7 ರಂದು ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಭಗವಾನ್ ರವರ ಮನೆಯ ವಿಶಾಸಕ್ಕೆ ಅಂಚೆಯ ಮೂಲಕ ಕಳುಹಿಸಲಾಗಿದೆ.

ಮೈಸೂರು ಅರಸರು ಚಾಮುಂಡೇಶ್ವರಿಯನ್ನೇಕೆ ಪೂಜಿಸುತ್ತಾರೆ ? ಮೈಸೂರು ಅರಸರು ಚಾಮುಂಡೇಶ್ವರಿಯನ್ನೇಕೆ ಪೂಜಿಸುತ್ತಾರೆ ?

ನಾವು 400ಕ್ಕೂ ಹೆಚ್ಚು ವರ್ಷಗಳಿಂದ ಮೈಸೂರು ದಸರಾವನ್ನು ನಾಡ ಹಬ್ಬವೆಂದು ಆಚರಿಸುತ್ತಿದ್ದೇವೆ. ಅದಕ್ಕೆ ತನ್ನದೇ ಆದ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನಲೆ ಇದೆ. ದೇವತೆಗಳಿಂದ ಸೃಷ್ಠಿಯಾದ ಆದಿಶಕ್ತಿ ಚಾಮುಂಡೇಶ್ವರಿ ದುಷ್ಟಶಕ್ತಿ ಮಹಿಷಾಸುರನನ್ನು ಕೊಂದ ದಿನವನ್ನ ನಾವು ವಿಜಯದಶಮಿ ಎಂದು ಅತ್ಯಂತ ಸಂಭ್ರಮದಿಂದ ಆಚರಿಸುತ್ತೇವೆ. ಇಂತಹ ಪವಿತ್ರವಾದ ದಸರಾ ಹಬ್ಬಕ್ಕೂ ಬುದ್ದಿಜೀವಿಗಳು ಖ್ಯಾತೆ ತೆಗೆದಿದ್ದಾರೆ ಎಂದು ಸಂಘದ ನಿಶಾಂತ್ ಹೇಳಿದರು.

ಭಗವಾನ್ ಅಸಂಬದ್ಧ ಹೇಳಿಕೆ ಕೊಡುವುದನ್ನು ನಿಲ್ಲಿಸಲಿ: ಪೇಜಾವರ ಶ್ರೀಭಗವಾನ್ ಅಸಂಬದ್ಧ ಹೇಳಿಕೆ ಕೊಡುವುದನ್ನು ನಿಲ್ಲಿಸಲಿ: ಪೇಜಾವರ ಶ್ರೀ

ಭಗವಾನ್‌ ಇಂದ ಹಿಂದೂ ಭಾವನೆಗೆ ಧಕ್ಕೆ

ಭಗವಾನ್‌ ಇಂದ ಹಿಂದೂ ಭಾವನೆಗೆ ಧಕ್ಕೆ

ಚಾಮುಂಡಿಯ ದಸರಾಗೆ ವಿರೋಧಿಸಿ ಪ್ರೋ. ಕೆ.ಎಸ್. ಭಗವಾನ್ ರವರು ಮಹಿಷ ದಸರಾವನ್ನು ಆಚರಿಸಲು ಮುಂದಾಗಿರುವುದು ನಮ್ಮೆಲ್ಲರ ಭಾವನೆಗೆ ಧಕ್ಕೆತಂತಾಗಿರುವುದಲ್ಲದೆ ವೈಧೀಕ ಆಗಮ ಶಾಸ್ತ್ರದ ಆಚರಣೆಯಾದ ದಸರಾವನ್ನು ಭೌಧ್ಧರ ಹೆಸರಿನಲ್ಲಿ ಆಚರಿಸುತ್ತಿರುವುದು ಬುಧ್ಧ ಗುರುಗಳಿಗೆ ಮತ್ತು ಡಾ. ಬಿ.ಆರ್ ಅಂಬೇಡ್ಕರ್ ರವರಿಗೆ ಮಾಡುತ್ತಿರುವ ಅಪಮಾನವಾಗಿದೆ ಇದನ್ನು ಪ್ರತಿಯೊಬ್ಬ ಭೌಧ್ಧನು ಖಂಡಿಸಬೇಕಾಗಿದೆ ಎಂದು ಅವರು ಹೇಳಿದರು.

ಮಹಿಷಾಸುರ ಬೌದ್ಧ ಎನ್ನುವುದು ಸುಳ್ಳು

ಮಹಿಷಾಸುರ ಬೌದ್ಧ ಎನ್ನುವುದು ಸುಳ್ಳು

ರಾಕ್ಷಸ ಮಹಿಷಾಸುರನಿಗೆ ಶಾಂತ ಸ್ವರೂಪಿ, ಜನಾನುರಾಗಿ, ಬುದ್ಧನ ಅನುಯಾಯಿ ಅಂತೆಲ್ಲ ಸುಳ್ಳು ಕಥೆ ಕಟ್ಟಿ ಅವನು ಜನರ ಕಲ್ಯಾಣಕ್ಕಾಗಿ ಕೆಲಸವನ್ನು ಮಾಡಿದ್ದರಿಂದ ಮಹಿಷಾಸುರನ ಹೆಸರನನ್ನು ಮೈಸೂರಿಗೆ ಇಡಲಾಗಿದೆ ಅಂತೆಲ್ಲಾ ಹೊಗಳಿ ಚಾಮುಂಡಿ ಎನ್ನುವುದು ಕಾಲ್ಪನಿಕ ಮಹಿಳಾ ಪಾತ್ರ ಎಂದು ಆಧಾರ ರಹಿತವಾಗಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಹಿಷನ ಹೆಸರು ಮೈಸೂರಿಗೆ ಇಟ್ಟಿಲ್ಲ

ಮಹಿಷನ ಹೆಸರು ಮೈಸೂರಿಗೆ ಇಟ್ಟಿಲ್ಲ

ಮಹಿಷಾಸುರನ ಹೆಸರನ್ನು ಮೈಸೂರಿಗೆ ಇಡಲಾಗಿದೆ ಎನ್ನುವುದು ಅಪ್ಪಟ ಸುಳ್ಳು. ಮಹಿಷ ಎಂದರೆ ಕಾಡೆಮ್ಮೆ, ಮೈಸೂರು ಪ್ರಾಂತ್ಯದಲ್ಲಿ ನೋಡಬಹುದಾದ ಕಾಡೆಮ್ಮೆಯನ್ನು ಬೇರೆಲ್ಲೂ ನೋಡಲು ಸಾದ್ಯವಿಲ್ಲ, ಆದ್ದರಿಂದ ಈ ಪ್ರದೇಶಕ್ಕೆ ಮಹಿಷ ಮಂಡಲ ಎಮ್ಮೆಗಳಿರುವ ನಾಡು ಎಂದು ಕರೆಯುತ್ತಿದ್ದರು, ಅದು ಈಗ ಮೈಸೂರು ಆಗಿದೆ. ಈ ಪ್ರಾಂತ್ಯದಲ್ಲಿದ್ದ ರಾಕ್ಷಸನಿಗೆ ಮಹಿಷಾಸುರ ಎಂದು ಹೆಸರು ಬಂತು ಎಂದು ಮಾಹಿತಿ ನೀಡಿದರು.

ಭಗವಾನ್ ಕಟ್ಟು ಕತೆ ಹೇಳುತ್ತಿದ್ದಾರೆ

ಭಗವಾನ್ ಕಟ್ಟು ಕತೆ ಹೇಳುತ್ತಿದ್ದಾರೆ

ಕೆ.ಎಸ್. ಭಗವಾನ್ ಅವರ ಪ್ರಕಾರ ಅಶೋಕ ಚಕ್ರವರ್ತಿ ಬೌಧ್ಧ ಧರ್ಮದ ಪ್ರಚಾರಕ್ಕಾಗಿ ತನ್ನ ಪುತ್ರಿ ಸಂಘಮಿತ್ರೆಯ ಜೊತೆ ಮಹಾದೇವಾ ಎಂಬಾತನನ್ನ ಮೈಸೂರಿಗೆ ಕಳುಹಿಸಿದ್ದ ಆ ಮಹಾದೇವನೇ ಈ ಮಹಿಷ, ಅವನಿಗೆ ಉದ್ದೇಶ ಪೂರ್ವಕವಾಗಿ ರಾಕ್ಷಸನ ಪಟ್ಟವನ್ನು ಹೇರಲಾಗಿದೆ ಎಂದು. ಆದರೇ ಈ ದಸರಾ ಆಚರಣೆ ಕೇವಲ ಮೈಸೂರಿಗೆ ಸೀಮಿತವಾದದ್ದಲ್ಲ ದಸರಾ ಸಂಧರ್ಭದಲ್ಲಿ ಮಹಿಷ ಮರ್ಧಿನಿ ಚಾಮುಂಡೇಶ್ವರಿಯನ್ನೂ ದೇಶ ಮತ್ತು ವಿದೇಶಗಳಲ್ಲೂ ಪೂಜಿಸುತ್ತಾರೆ ಆಚರಿಸುತ್ತಾರೆ ಆದ್ದರಿಂದ ಇದು ಸತ್ಯಕ್ಕೆ ದೂರವಾದ ಮಾತು ಎಂದು ಅವರು ಹೇಳಿದರು.

ಭಗವಾನ್ ಮಾತುಗಳು ಹಾಸ್ಯಾಸ್ಪದ

ಭಗವಾನ್ ಮಾತುಗಳು ಹಾಸ್ಯಾಸ್ಪದ

ಕಳೆದ ವರ್ಷ ಮಹಿಷ ದಸರವೆಂದು ರಾಕ್ಷಸ ಸ್ವರೂಪದ ಮಹಿಷಾಸುರನ ಭಾವಚಿತ್ರವನ್ನು ಪೂಜಿಸಿ, ಮೆರವಣಿಗೆ ಮಾಡಿದ ಕೆ.ಎಸ್. ಭಗವಾನ್ ಈಗ ಚಾಮುಂಡಿ ಬೆಟ್ಟದ ಮೇಲಿರುವ ರಾಕ್ಷಸ ಸ್ವರೂಪದ ಮಹಿಷಾಸುರನ ಪ್ರತಿಮೆಯನ್ನು ತೆಗೆದು ಬೌದ್ಧ ಬಿಕ್ಕುವಿನ ರೂಪದ ಮಹಿಷನ ಪ್ರತಿಮೆ ಸ್ತಾಪಿಸಬೇಕು ಎನ್ನುತ್ತಿರುವುದು ಹಾಸ್ಯಾಸ್ಪದ ಮತ್ತು ಇದರ ಹಿಂದೆ ದೇಶದ್ರೋಹಿಗಳ ದೊಡ್ಡ ಷಡ್ಯಂತ್ರ ಅಡಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಭಗವಾನ್ ಮಹಿಷಾಸುರನ ಅವತಾರ

ಭಗವಾನ್ ಮಹಿಷಾಸುರನ ಅವತಾರ

ಇದೆಲ್ಲವನ್ನೂ ನೋಡಿದರೆ ಪ್ರೋ. ಕೆ.ಎಸ್. ಭಗವಾನ್ ರವರು 20ನೇ ಶತಮಾನದಲ್ಲಿ ಜನಿಸಿದ ಮಹಿಷಾಸುರನ ಅವತಾರ ಪುರುಷ ಎನ್ನುವುದರಲ್ಲಿ ಸಂಶಯವೇಯಿಲ್ಲ ಎಂದು ವೆಂಗ್ಯವಾಡಿದರು. ಮಹಿಷಾಸುರನ ಮೇಲೆ ಕೆ.ಎಸ್. ಭಗವಾನ್ ರವರಿಗೆ ಇರುವ ಪ್ರೀತಿಯ ಆಳವನ್ನು ಗಮನಿಸಿ ನಮ್ಮ ಸಂಸ್ಥೆಯ ವತಿಯಿಂದ ಅವರಿಗೆ ಈ ಅಣಕು ಪ್ರಶಸ್ತಿಯನ್ನು ನೀಡುತಿದ್ದೇವೆ ಎಂದು ತಿಳಿಸಿದರು.

English summary
KS Bhagawan demanding to make 'Mahishasur Dasara' instead of Chamundi Dasara. So a organization called Belaku planing to give a funny title to Bhagawan as 'Mahi Asura' which means devil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X