ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಮೂಲದ ಟೆಕ್ಕಿ ಅಮೆರಿಕದಲ್ಲಿ ಸಾವು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 04; ಅಮೆರಿಕದಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮೈಸೂರು ಮೂಲದ ಟೆಕ್ಕಿಯೊಬ್ಬರು ಮೃತಪಟ್ಟಿದ್ದಾರೆ. ಶುಕ್ರವಾರ ಮೃತದೇಹವನ್ನು ಮೈಸೂರಿಗೆ ತರಲಾಗುತ್ತದೆ.

ಮೈಸೂರು ನಗರದ ನಿವಾಸಿಯಾದ ನಿವೃತ್ತ ಇಂಜಿನಿಯರ್ ತುಕಾರಾಮ್ ಎಂಬುವರ ಪುತ್ರ ಪ್ರತೀಕ್ ತೇಲ್ಕರ್ (28) ಮೃತಪಟ್ಟವರು. ಅಮೆರಿಕದ ಅಯೋವಾದಲ್ಲಿ ಫೆಬ್ರವರಿ 26ರಂದು ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ.

ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಟಿಸಿಎಸ್ ಟೆಕ್ಕಿ ಆತ್ಮಹತ್ಯೆಗೆ ಶರಣು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಟಿಸಿಎಸ್ ಟೆಕ್ಕಿ ಆತ್ಮಹತ್ಯೆಗೆ ಶರಣು

ಪ್ರತೀಕ್ ಉನ್ನತ ಶಿಕ್ಷಣ ಪಡೆಯಲು ಅಮೆರಿಕಕ್ಕೆ ತೆರಳಿದ್ದರು. ವಿದ್ಯಾಭ್ಯಾಸ ಮುಗಿದ ಬಳಿಕ ಅಲ್ಲಿಯೇ ಸಾಫ್ಟ್​ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮಾರ್ಚ್ 5ರಂದು ಪ್ರತೀಕ್ ತೇಲ್ಕರ್ ಪಾರ್ಥಿವ ಶರೀರವನ್ನು ಮೈಸೂರಿಗೆ ತರಲಾಗುತ್ತದೆ ಎಂದು ಕುಟುಂಬದವರು ಹೇಳಿದ್ದಾರೆ.

ಟೆಕ್ಕಿ ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ ಟೆಕ್ಕಿ ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ

 Mysuru Based Techie Dies In America

ಮಾರ್ಚ್‌ನಲ್ಲಿ ಭಾರತಕ್ಕೆ ವಾಪಸ್ ಆಗಿ ಇಲ್ಲಿಯೇ ಉದ್ಯೋಗ ಹುಡುಕುವುದಾಗಿ ಪ್ರತೀಕ್ ಹೇಳಿದ್ದರು. ಕುಟುಂಬದವರು ಅವರ ಮದುವೆಗಾಗಿ ಚಿಂತನೆಯನ್ನು ಸಹ ನಡೆಸಿದ್ದರು. ಆದರೆ, ಪ್ರತೀಕ್ ಹೃದಯಾಘಾತದಿಂದಾಗಿ ಮೃತಪಟ್ಟಿದ್ದಾರೆ.

ಹೆಂಡತಿ ತವರೂರಿಗೆ, ಗೆಳತಿ ಮನೆಗೆ - ಕಳ್ಳಾಟ ಆಡಿ ಸಿಕ್ಕಿ ಬಿದ್ದ ಟೆಕ್ಕಿ ! ಹೆಂಡತಿ ತವರೂರಿಗೆ, ಗೆಳತಿ ಮನೆಗೆ - ಕಳ್ಳಾಟ ಆಡಿ ಸಿಕ್ಕಿ ಬಿದ್ದ ಟೆಕ್ಕಿ !

ಪ್ರತೀಕ್ ತೇಲ್ಕರ್ ತಂದೆ ಎನ್. ಬಿ. ತುಕಾರಾಮ್ ಕಾಡಾ ಕಚೇರಿಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಕಾರ್ಯ ನಿರ್ವಹಣೆ ಮಾಡಿ ನಿವೃತ್ತರಾಗಿದ್ದಾರೆ. ಎನ್. ಬಿ. ತುಕಾರಾಮ್ ಪತ್ನಿ ಎನ್. ಶಾಲಿನಿ ಜೊತೆ ಶಾರದದೇವಿ ನಗರದಲ್ಲಿ ವಾಸಿಸುತ್ತಿದ್ದಾರೆ.

English summary
Mysuru based 28 year old Prathek Telkar who working as software engineer in America died due to heart attack. Dead body brought to Mysuru on March 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X