ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದ್ಯುತ್ ತಂತಿ ತುಂಡು: ತಡವಾಗಿ ಸಂಚರಿಸಿದ ರೈಲುಗಳು

|
Google Oneindia Kannada News

ಮೈಸೂರು, ಮೇ 14:ಚನ್ನಪಟ್ಟಣ ತಾಲೂಕಿನ ಶೆಟ್ಟಿಹಳ್ಳಿ ಹಾಗೂ ಮದ್ದೂರು ತಾಲೂಕಿನ ನಿಡಘಟ್ಟ ನಡುವಿನ ರೈಲು ಮಾರ್ಗದಲ್ಲಿ ಮೇ.13ರಂದು ಸಂಜೆ ವಿದ್ಯುತ್ ತಂತಿ ತುಂಡಾದ ಪರಿಣಾಮ ರಾತ್ರಿ ವೇಳೆ ಸಂಚರಿಸುವ ಎಲ್ಲಾ ರೈಲುಗಳ ಸಂಚಾರ ವ್ಯತ್ಯಯವಾಯಿತು.

ರಾತ್ರಿ 7.30ರ ಸುಮಾರಿಗೆ ಬಿರುಗಾಳಿ ಸಹಿತ ಮಳೆ ಸುರಿದಿದ್ದು, ಈ ಸಂದರ್ಭ ರೈಲು ಮಾರ್ಗದ ವಿದ್ಯುತ್ ತಂತಿಯು ತುಂಡಾಗಿ ಹಳಿಗಳ ಮೇಲೆ ಬಿತ್ತು. ಕೂಡಲೇ ಎಚ್ಚೆತ್ತ ಸಿಬ್ಬಂದಿ ಬೆಂಗಳೂರು- ಮೈಸೂರು ನಡುವಿನ ಎಲ್ಲಾ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಿದರು.

ನೈಋತ್ಯ ರೈಲ್ವೆ ನಿಲ್ದಾಣಗಳಲ್ಲಿ 2 ಸಾವಿರ ಮಕ್ಕಳ ರಕ್ಷಣೆನೈಋತ್ಯ ರೈಲ್ವೆ ನಿಲ್ದಾಣಗಳಲ್ಲಿ 2 ಸಾವಿರ ಮಕ್ಕಳ ರಕ್ಷಣೆ

ಘಟನೆಯಿಂದಾಗಿ ಈ ಮಾರ್ಗದಲ್ಲಿ ರಾತ್ರಿ ವೇಳೆ ಸಂಚರಿಸುವ ಎಲ್ಲಾ ರೈಲುಗಳ ಸೇವೆಯಲ್ಲಿ ವ್ಯತ್ಯಯವಾಗಿದ್ದು, ಪ್ರಯಾಣಿಕರು ಪರದಾಡಿದರು. ಚಾಮುಂಡಿ ಎಕ್ಸ್‌ಪ್ರೆಸ್‌, ವಿಶ್ವಮಾನವ, ಹಂಪಿ ಸೇರಿದಂತೆ ವಿವಿಧ ರೈಲುಗಳು ಚನ್ನಪಟ್ಟಣ, ಮದ್ದೂರು ಹಾಗೂ ಮಂಡ್ಯ ನಿಲ್ದಾಣಗಳಲ್ಲಿ ನಿಂತಿದ್ದವು.

Mysuru – Bangalore train delayed for one hour

ನೈರುತ್ಯ ರೈಲ್ವೆ ಕಾಮಗಾರಿ:1 ಗಂಟೆ ತಡವಾಗಿ ಸಂಚರಿಸಲಿವೆ ರೈಲುಗಳುನೈರುತ್ಯ ರೈಲ್ವೆ ಕಾಮಗಾರಿ:1 ಗಂಟೆ ತಡವಾಗಿ ಸಂಚರಿಸಲಿವೆ ರೈಲುಗಳು

ಮಳೆಯ ಪರಿಣಾಮ ತಡ ರಾತ್ರಿಯವರೆಗೂ ಸಹ ಅನೇಕ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಸಹ ಉಂಟಾಯಿತು. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು.

English summary
On the reason of electric wire broken at Chennapattana –Nidagatta cross. Mysuru – Bangalore train delayed for one hour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X