ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು-ಬಾಗಲಕೋಟೆ ಬಸವ ಎಕ್ಸ್‌ಪ್ರೆಸ್ ರೈಲು ರದ್ದು

|
Google Oneindia Kannada News

ಮೈಸೂರು, ಸೆಪ್ಟೆಂಬರ್ 20 : ಮೈಸೂರು-ಬಾಗಲಕೋಟೆ-ಮೈಸೂರು ನಡುವೆ ಸಂಚಾರ ನಡೆಸುವ ಪ್ರತಿದಿನದ ರೈಲನ್ನು ರದ್ದುಗೊಳಿಸಲಾಗಿದೆ. ಅಕ್ಟೋಬರ್ 6ರ ತನಕ ರೈಲು ಸಂಚಾರವಿಲ್ಲ ಎಂದು ಪ್ರಕಟಣೆ ಹೇಳಿದೆ.

ನೈಋತ್ಯ ರೈಲ್ವೆ ಶುಕ್ರವಾರ ಈ ಕುರಿತು ಪ್ರಕಟಣೆ ಹೊರಡಿಸಿದೆ. ಮೈಸೂರು-ಬಾಗಲಕೋಟೆ-ಮೈಸೂರು ನಡುವೆ ಸಂಚಾರ ನಡೆಸುವ ಬಸವ ಎಕ್ಸ್‌ಪ್ರೆಸ್ ರೈಲನ್ನು ಅಕ್ಟೋಬರ್ 6ರ ತನಕ ರದ್ದುಗೊಳಿಸಲಾಗಿದೆ.

ದಕ್ಷಿಣ ಕೋಸ್ಟಲ್ ರೈಲ್ವೆ ವಲಯಕ್ಕೆ ರಾಯಚೂರು ಸೇರಿಸಲು ವಿರೋಧದಕ್ಷಿಣ ಕೋಸ್ಟಲ್ ರೈಲ್ವೆ ವಲಯಕ್ಕೆ ರಾಯಚೂರು ಸೇರಿಸಲು ವಿರೋಧ

ಸೆಂಟ್ರಲ್ ರೈಲ್ವೆಯ ಸೊಲ್ಲಾಪುರ ವಿಭಾಗದಲ್ಲಿ ದ್ವಿಪಥ ಹಳಿ ಜೋಡಣೆಗಾಗಿ ಕಾಮಗಾರಿ ಕೈಗೊಳ್ಳಲಾಗುತ್ತದೆ. ಸೊಲ್ಲಾಪುರ-ವಾಡಿ ವಿಭಾಗದ ಕಲಬುರಗಿ-ಸವಲ್ಗಿ ರೈಲ್ವೆ ನಿಲ್ದಾಣಗಳ ನಡುವೆ ಇಂಟರ್ ಲಾಕಿಂಗ್ ಕೆಲಸ ನಡೆಯುತ್ತಿದೆ.

ಸೆ.21ರಿಂದ ಹೊಸಪೇಟೆ-ಕೊಟ್ಟೂರು ಪ್ಯಾಸೆಂಜರ್ ರೈಲು ಸಂಚಾರಸೆ.21ರಿಂದ ಹೊಸಪೇಟೆ-ಕೊಟ್ಟೂರು ಪ್ಯಾಸೆಂಜರ್ ರೈಲು ಸಂಚಾರ

Mysuru Bagalkot Mysuru Train Cancelled Till October 6

ಈ ಕಾಮಗಾರಿಗಳಿಗೆ ಅಡಚಣೆ ಉಂಟಾಗಬಾರದು ಎಂದು ಬಸವ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಅಕ್ಟೋಬರ್ 6ರ ತನಕ ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ಹೇಳಿದೆ.

ಹುಬ್ಬಳ್ಳಿ-ಚೆನ್ನೈ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ, ವೇಳಾಪಟ್ಟಿಹುಬ್ಬಳ್ಳಿ-ಚೆನ್ನೈ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ, ವೇಳಾಪಟ್ಟಿ

ಸಮಯ ಬದಲಾವಣೆ : ವಾಸ್ಕೋಡಗಾಮ-ಹಜರತ್ ನಿಜಾಮುದ್ದೀನ್-ವಾಸ್ಕೋಡಗಾಮ ಎಕ್ಸ್‌ಪ್ರೆಸ್ ರೈಲು ಸಂಚಾರದ ಸಮಯ ಇಂದಿನಿಂದ ಬದಲಾವಣೆಯಾಗಿದೆ. ವಾಸ್ಕೋಡಗಾಮಾದಿಂದ ಮಧ್ಯಾಹ್ನ 3.10ರ ಬದಲು 3 ಗಂಟೆಗೆ ರೈಲು ಹೊರಡಲಿದೆ. ವಾಸ್ಕೋಡಗಾಮಾ ನಿಲ್ದಾಣಕ್ಕೆ ಬೆಳಗ್ಗೆ 6.30ರ ಬದಲು 6.45ಕ್ಕೆ ತಲುಪಲಿದೆ.

English summary
In a statement South Western railway said that Mysuru-Bagalkot-Mysuru basava express daily train cancelled till October 6, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X