ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ವಿವಿ ಸಬ್ ಡೊಮೈನ್ ಹ್ಯಾಕ್ ಗೆ ವಿಫಲ ಯತ್ನ

|
Google Oneindia Kannada News

ಮೈಸೂರು, ಮೇ 15: ಮೈಸೂರು ವಿಶ್ವವಿದ್ಯಾಲಯದ ದೂರಶಿಕ್ಷಣ ವಿಭಾಗದ ವೆಬ್ ಸೈಟ್‌ ಮೇ.14ರಂದು ಮಂಗಳವಾರ ಕೆಲಕಾಲ ಹ್ಯಾಕ್ ಆದ ಸುದ್ದಿ ಕೇಳಿ ಬಂದಿತ್ತು.ವಿ.ವಿ.ಯ ವೆಬ್‌ಸೈಟ್ ಅನ್ನು ಮಧ್ಯಾಹ್ನ 2ರ ವೇಳೆಗೆ ತೆರೆದಾಗ, ಹ್ಯಾಕ್ಡ್ ಬೈ ಕ್ರ್ಯಾಷ್ ರೂಲರ್ಸ್, ಪಾಕಿಸ್ತಾನ್ ಜಿಂದಾಬಾದ್ ಎಂಬ ಸಂದೇಶ ಬರುತ್ತಿತ್ತು. ಇದರಿಂದ ಎಚ್ಚೆತ್ತುಕೊಂಡ ಮೈಸೂರು ವಿ.ವಿ. ಕಂಪ್ಯೂಟರ್ ವಿಜ್ಞಾನ ವಿಭಾಗದ ಸಿಬ್ಬಂದಿ, ವೆಬ್‌ಸೈಟ್ ಅನ್ನು ಕೆಲಕಾಲ ಸ್ಥಗಿತಗೊಳಿಸಿ, ನಿರ್ವಹಣಾ ಕಾರ್ಯ ನಡೆಸಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಈ ಕುರಿತು ಮಾತನಾಡಿದ ವಿವಿ ಕುಲಪತಿಗಳ ವಿಶೇಷಾಧಿಕಾರಿ ಹಾಗೂ ಕಂಪ್ಯೂಟರ್ ತಜ್ಞ ಡಾ. ಚೇತನ್ ಅವರು, ವಿವಿ ವೆಬ್ ಸೈಟ್ ಗೆ ಯಾವುದೇ ಸಮಸ್ಯೆ ಇಲ್ಲ. ಅದು ಎಂದಿನಂತೆ ಕಾರ್ಯನಿರ್ವಹಿಸಿದೆ. ವೆಬ್ ಸೈಟ್ ಗೆ ಅತ್ಯುತ್ತಮವಾದ ಗುಣಮಟ್ಟ ಫೈರ್ ವಾಲ್ ಅಳವಡಿಕೆ ಮಾಡಲಾಗಿದೆ. ಹಾಗಾಗಿ ಇದನ್ನು ಹ್ಯಾಕಿಂಗ್ ಮಾಡುವುದು ಅಸಾಧ್ಯ. ಆದರೆ ವಿವಿಯ ಸಬ್ ಡೊಮೈನ್ ವೆಬ್ ಸೈಟನ್ನು ಕಿಡಿಗೇಡಿಗಳು ಹ್ಯಾಕ್ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಮೈಸೂರು ವಿವಿಯಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಶುಲ್ಕ ಕಡಿತಮೈಸೂರು ವಿವಿಯಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಶುಲ್ಕ ಕಡಿತ

Mysore university subdomain has been hacked

ಮೈಸೂರು ವಿವಿಯ ದೂರಶಿಕ್ಷಣ ಸಂಬಂಧಿಸಿದ ಪ್ರವೇಶಾತಿಗೆಂದು ಆರಂಭಿಸಿದ ವೆಬ್ ಸೈಟ್ ಅನ್ನು ಹ್ಯಾಕ್ ಮಾಡಲು ವಿಫಲ ಯತ್ನ ನಡೆದಿದೆ. ಈ ಬಗ್ಗೆ ನಮಗೆ ಅಲರ್ಟ್ ಮೆಸೇಜ್ ಬರುತ್ತಿದ್ದಂತೆ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಂಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇನ್ನು ವೆಬ್ ಸೈಟನ್ನು ಡೌನ್ ಮಾಡಿ ರಿಪೇರಿ ಕಾರ್ಯಕೈಗೊಳ್ಳಲಾಯಿತು. ಸಮಸ್ಯೆಗೆ ತಕ್ಷಣವೇ ಪರಿಹಾರ ಸೂಚಿಸಿ ರಾತ್ರಿ ವೇಳೆಗೆ ಸಮಸ್ಯೆ ಬಗೆಹರಿಸಲಾಯಿತು ಎಂದು ತಿಳಿಸಿದ್ದಾರೆ.

English summary
Famous Mysuru university subdomain has been hacked by hackers yesterday. University officials repaired that at night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X