ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

10 ತಿಂಗಳಲ್ಲಿ ಬರೋಬ್ಬರಿ 3.31 ಕೋಟಿ ರೂ.ದಂಡ ಸಂಗ್ರಹಿಸಿದ ಮೈಸೂರು ಟ್ರಾಫಿಕ್ ಪೊಲೀಸರು

|
Google Oneindia Kannada News

ಮೈಸೂರು, ನವೆಂಬರ್. 22: ಇತ್ತೀಚೆಗೆ ಮೈಸೂರಿನಲ್ಲಿ ಸಂಚಾರ ಪೊಲೀಸರು, ಸಂಚಾರ ನಿಯಮ ಉಲ್ಲಂಘನೆ ಸಂಬಂಧ ತಪಾಸಣೆ ತೀವ್ರಗೊಳಿಸಿದ್ದಾರೆ.

ಎಫ್‍ಟಿವಿಆರ್ (ಫೀಲ್ಡ್ ಟ್ರಾಫಿಕ್ ವಯಾಲೇಷನ್ ರಿಪೋರ್ಟ್)ನಡಿ 2018ರ ಜನವರಿ 1ರಿಂದ ನವೆಂಬರ್ 16ರವರೆಗೆ ಸಂಚಾರ ಪೊಲೀಸರ ತಪಾಸಣೆಯಿಂದ ಒಟ್ಟು 3,31,27, 200 ರೂ.ಗಳ ದಂಡ ಸಂಗ್ರಹಿಸಲಾಗಿದೆ. ಪ್ರಮುಖ ಸರ್ಕಲ್ ಗಳು, ಜಂಕ್ಷನ್ ಗಳು ಹಾಗೂ ಮುಖ್ಯರಸ್ತೆಗಳಲ್ಲಿ ನಿಂತು ಕಾರ್ಯಾಚರಣೆ ಮಾಡುವುದನ್ನು ತೀವ್ರಗೊಳಿಸಲಾಗಿದೆ.

ಕಲಬುರಗಿ ಎಸ್‌ಪಿಗೆ ಬಿತ್ತು 10 ಸಾವಿರ ದಂಡಕಲಬುರಗಿ ಎಸ್‌ಪಿಗೆ ಬಿತ್ತು 10 ಸಾವಿರ ದಂಡ

ಅದರ ಜೊತೆಗೆ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಮಾಲೀಕರ ಹೆಸರಿಗೆ ನೋಟೀಸ್ ಗಳನ್ನು ಅಂಚೆ ಮೂಲಕ ತಲುಪಿಸಲಾಗುತ್ತಿದೆ.

Mysore traffic police collected Rs 3.31 crore fine

ಎಫ್‍ಟಿವಿಆರ್ ಮತ್ತು ಸಿಸಿ ಕ್ಯಾಮರಾ ಮೂಲಕ ಸರಾಸರಿ ದಿನಕ್ಕೆ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಅಕ್ಟೋಬರ್ ಮಾಹೆ ಒಂದರ ಅಂಕಿ -ಅಂಶಗಳ ಪ್ರಕಾರ ಎಫ್‍ಟಿವಿಆರ್ ನಲ್ಲಿ 17.29 ಲಕ್ಷ ರೂಗಳ ದಂಡ ವಿಧಿಸಲಾಗಿದೆ. ಆದರೆ, ಸಿಸಿ ಕ್ಯಾಮರಾಗಳ ಮೂಲಕ ನೋಟೀಸ್ ಜಾರಿ ಮಾಡಿ ಸಂಗ್ರಹಿಸಿದ ದಂಡದ ಮೊತ್ತ 43 ಲಕ್ಷ ರೂ.ಗಳಾಗಿವೆ.

 ರಸ್ತೆ ಅಪಘಾತದಿಂದ ನೊಂದವರನ್ನು ನೆನಸಿಕೊಳ್ಳಲು ವಾಕಾಥಾನ್ ರಸ್ತೆ ಅಪಘಾತದಿಂದ ನೊಂದವರನ್ನು ನೆನಸಿಕೊಳ್ಳಲು ವಾಕಾಥಾನ್

ಈ ಮಾಹಿತಿ ಪ್ರಕಾರ ರಸ್ತೆಗಿಳಿದು ಪೊಲೀಸರು ಕಾರ್ಯಾಚರಣೆ ನಡೆಸಿ ಸಂಗ್ರಹಿಸಿದ ದಂಡದ ಮೊತ್ತಕ್ಕಿಂತ ತಂತ್ರಜ್ಞಾನ ಬಳಸಿ, ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡದೆ ನೋಟೀಸ್ ಜಾರಿ ಮಾಡಿ ಸಂಗ್ರಹಿಸಿದ ದಂಡದ ಮೊತ್ತವೇ ಹೆಚ್ಚಾಗಿದೆ.

 ಕೆಟ್ಟ ಕೈಬರಹ ಎಂಬ ಕಾರಣಕ್ಕೆ ಮೂವರು ವೈದ್ಯರಿಗೆ ತಲಾ ಐದು ಸಾವಿರ ದಂಡ ಕೆಟ್ಟ ಕೈಬರಹ ಎಂಬ ಕಾರಣಕ್ಕೆ ಮೂವರು ವೈದ್ಯರಿಗೆ ತಲಾ ಐದು ಸಾವಿರ ದಂಡ

ಸಂಚಾರ ಪೊಲೀಸರನ್ನು ಹೆಲ್ಮೆಟ್ ತಪಾಸಣೆಗೆ ನಿಯೋಜಿಸುವುದರಿಂದ ವಾಹನ ಸವಾರರಿಗೆ ಅನಗತ್ಯ ಕಿರಿಕಿರಿ ಉಂಟಾಗುವುದಲ್ಲದೆ, ನಿಂತು ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಹಲವರು ಅಪಘಾತ ಮಾಡಿ ತಮ್ಮ ಹಾಗೂ ಇತರರ ಪ್ರಾಣ ಹಾನಿ-ನೋವಿಗೂ ಕಾರಣರಾಗುತ್ತಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ಈಗಾಗಲೇ ರಸ್ತೆ, ಜಂಕ್ಷನ್ ಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳ ಮೂಲಕವೇ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನೋಟೀಸ್ ಜಾರಿ ಮೂಲಕ ದಂಡ ಸಂಗ್ರಹಿಸಬಹುದು. ಅದಕ್ಕೆ ಸಂಚಾರ ಪೊಲೀಸರನ್ನು ಬಳಸುವ ಬದಲು ಸುಗಮ ಸಂಚಾರ ವ್ಯವಸ್ಥೆಗೆ ಉಪಯೋಗಿಸಬಹುದು ಎಂಬ ಸಲಹೆ ಕೂಡ ಜನರಿಂದ ಕೇಳಿ ಬರುತ್ತಿದೆ.

English summary
Mysore traffic police collected Rs 3.31 crore fine in 10 months.Per day more than 5,000 cases are recorded through FTVR and CC camera.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X