ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ಮೈಸೂರಿನ 14 ಮಂದಿ ಸುರಕ್ಷಿತ

|
Google Oneindia Kannada News

ಮೈಸೂರು, ಏಪ್ರಿಲ್ 23:ಶ್ರೀಲಂಕಾದಲ್ಲಿ ಚರ್ಚ್ ಮೇಲೆ ನಡೆದ ದಾಳಿಯಲ್ಲಿ ನೂರಾರು ಮಂದಿ ಹತರಾಗಿದ್ದಾರೆ. ರಾಜ್ಯದ 8 ಪ್ರವಾಸಿಗರು ಸಹ ದುರ್ಮರಣ ಹೊಂದಿದ್ದಾರೆ. ಇದರ ಬೆನ್ನಲ್ಲೇ ಮೈಸೂರಿನಿಂದ ಪ್ರವಾಸಕ್ಕೆ ತೆರಳಿದ್ದ ಐದು ಮಂದಿ ಭೂಗರ್ಭಶಾಸ್ತ್ರಜ್ಞರು ಸೇರಿದಂತೆ ಒಟ್ಟು 14 ಮಂದಿ ಸುರಕ್ಷಿತವಾಗಿದ್ದಾರೆ ಎಂಬ ಸುದ್ದಿ ಬಂದಿದೆ.

ದಿವಾನ್ಸ್ ರಸ್ತೆಯಲ್ಲಿರುವ ಥಾಮಸ್ ಕುಕ್(ಇಂಡಿಯಾ) ಟ್ರಾವೆಲ್ಸ್ ಮೂಲಕ 6 ದಿನಗಳ ಶ್ರೀಲಂಕಾ ಪ್ರವಾಸಕ್ಕೆ ಇವರು ತೆರಳಿದ್ದರು.ಇವರಲ್ಲಿ ಪ್ರತಿಷ್ಠಿತ ಭೂಗರ್ಭಶಾಸ್ತ್ರಜ್ಞರಾದ ಎಂ.ವಿ.ರವಿಶಂಕರ್ ಕೆ.ವಿ.ವೇದಮೂರ್ತಿ, ಚನ್ನಬಸಪ್ಪ, ವಿನಯ್ ರಂಗನಾಥ್, ಹೆಚ್.ಎನ್. ಉಮೇಶ್ ಸೇರಿದಂತೆ ಈ ಐವರ ಕುಟುಂಬ ಸದಸ್ಯರಾದ ಶೈಲಾ, ಮೌನಾ ಉಮೇಶ್, ಪೂರ್ಣಿಮಾ ರವಿಶಂಕರ್, ಅನುಪ್ ರವಿಶಂಕರ್, ಬಿ.ಎಸ್.ಶಾಲಿನಿ, ಸ್ವರೂಪ, ಗೌತಮಿ ವೇದಮೂರ್ತಿ ಹಾಗೂ ಸನತ್ ರಂಗನಾಥ್ ಸದ್ಯ ಸರಣಿ ಬಾಂಬ್ ಸ್ಫೋಟ ಸಂಭವಿಸಿರುವ ಕೊಲಂಬೋದಿಂದ 40 ಕಿಮೀ ದೂರದಲ್ಲಿರುವ ಬೆಂಟೋಟಾದ ಹಿಬಿಸ್ಕಸ್ ಹೋಟೆಲ್ ನಲ್ಲಿ ಸುರಕ್ಷಿತವಾಗಿರುವುದು ಖಚಿತವಾಗಿದೆ.

ರೀಲಂಕಾ ಸ್ಫೋಟ: 7 ಮಂದಿ ಶಂಕಿತರ ಬಂಧನ, ಸಂಜೆಯಿಂದ ಕರ್ಫ್ಯೂ ಜಾರಿರೀಲಂಕಾ ಸ್ಫೋಟ: 7 ಮಂದಿ ಶಂಕಿತರ ಬಂಧನ, ಸಂಜೆಯಿಂದ ಕರ್ಫ್ಯೂ ಜಾರಿ

ಕಳೆದ ಏ.19ರಂದು ಮುಂಜಾನೆ ಬೆಂಗಳೂರಿನಿಂದ ವಿಮಾನದ ಮೂಲಕ ಶ್ರೀಲಂಕಾದ ಕೊಲಂಬೋ ತಲುಪಿದ ಇವರು, ಪಿನ್ನವಾಲಾಕ್ಕೆ ತೆರಳಿ, ಕ್ಯಾಂಡಿಯಲ್ಲಿ ವಾಸ್ತವ್ಯ ಹೂಡಿದ್ದರು. ಏ.20ರಂದು ನುವಾರ ಇಲಿಯಾದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ, ವಾಪಸ್ಸು ಕ್ಯಾಂಡಿಗೆ ಮರಳಿದ್ದರು.

Mysore tourists safe from Srilanka bomb blast incident

ಕ್ಯಾಂಡಿಯಿಂದ ಬೆಂಟೋಟಾಗೆ ಪ್ರಯಾಣ ಬೆಳೆಸಿ, ಅಲ್ಲಿನ ಹಿಬಿಸ್ಕಸ್ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು. ಪ್ರವಾಸ ಪಟ್ಟಿಯಂತೆ ಇಂದು ಬೆಂಟೋಟಾದಿಂದ ಗಲ್ಲೇಗೆ ಇಂದು ಕೊಲೊಂಬೋಗೆ ತೆರಳಿ, ಏ.24ಕ್ಕೆ ಬೆಂಗಳೂರಿಗೆ ವಾಪಸ್ಸಾಗಬೇಕಿತ್ತು. ಆದರೆ ಕೊಲಂಬೋದಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ್ದರಿಂದ ಬೆಂಟೋಟಾ ದಿಂದ ಪ್ರವಾಸ ಮುಂದುವರೆಸಲು ಸಾಧ್ಯವಾಗಿಲ್ಲ. ಅದೃಷ್ಟವಶಾತ್ ಯಾವುದೇ ಅಪಾಯಕ್ಕೆ ಸಿಲುಕಿಲ್ಲ.

 ಶ್ರೀಲಂಕಾ ಸ್ಫೋಟದಲ್ಲಿ ರಾಮಲಿಂಗಾ ರೆಡ್ಡಿ ಸಂಬಂಧಿ ನಾಗರಾಜ ರೆಡ್ಡಿ ಸಾವು ಶ್ರೀಲಂಕಾ ಸ್ಫೋಟದಲ್ಲಿ ರಾಮಲಿಂಗಾ ರೆಡ್ಡಿ ಸಂಬಂಧಿ ನಾಗರಾಜ ರೆಡ್ಡಿ ಸಾವು

ಫಿಲೋಮಿನಾ ಚರ್ಚ್ ಗೆ ಭಿಗಿ ಭದ್ರತೆ
ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ನಗರ ಪೊಲೀಸರು ಇಲ್ಲಿನ ಮೈಸೂರಿನ ಸೇಂಟ್ ಫಿಲೋಮಿನಾ ಚರ್ಚ್ ಗೆ ಬಿಗಿ ಭದ್ರತೆ ಒದಗಿಸಿದ್ದಾರೆ. ಲೋಹಶೋಧಕ ಯಂತ್ರಗಳು, ಶ್ವಾನದಳದಿಂದ ತಪಾಸಣೆ ನಡೆಸಲಾಯಿತು. 12 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. 2 ಗರುಡ ವಾಹನಗಳು, ಇಬ್ಬರು ಸಹಾಯಕ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್, ಹೆಡ್‌ಕಾನ್‌ಸ್ಟೆಬಲ್‌ಗಳು ಮತ್ತು 8 ಮಂದಿ ಕಾನ್‌ಸ್ಟೆಬಲ್‌ಗಳು ಭದ್ರತೆಯ ಹೊಣೆ ಹೊತ್ತಿದ್ದಾರೆ. ಬಸ್‌ ನಿಲ್ದಾಣ ಹಾಗೂ ರೈಲು ನಿಲ್ದಾಣಗಳಲ್ಲಿಯೂ ನಿಗಾ ವಹಿಸಲಾಗಿದೆ.

English summary
Mysore tourists are safe from Sri Lanka bomb blast incident.Tight security is also given to Mysuru Philomena church.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X