ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಶಸ್ವಿಯಾದ ಆಪರೇಷನ್ ಕಾವೇರಿ ಎಕ್ಸ್‌ಪ್ರೆಸ್:ಮೂವರ ಬಂಧನ

|
Google Oneindia Kannada News

ಮೈಸೂರು, ಮಾರ್ಚ್ 19 : ಆಭರಣ ವ್ಯಾಪಾರಿ ಬೆಂಗಳೂರಿನ ನವೀನ್‌ಕುಮಾರ್ ಅವರನ್ನು ಕಾವೇರಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆದರಿಸಿ 2 ಕೆ.ಜಿ. ಚಿನ್ನಾಭರಣಗಳನ್ನು ದರೋಡೆ ಮಾಡಿದ್ದ ತಂಡವನ್ನು ರೈಲ್ವೆ ಪೊಲೀಸರು ಪತ್ತೆ ಹಚ್ಚಿ ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ 45 ಲಕ್ಷ ಮೌಲ್ಯದ ಒಂದೂವರೆ ಕೆ.ಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಏನಿದು ಘಟನೆ?

ಚಿನ್ನಾಭರಣ ವ್ಯಾಪಾರಿ ನವೀನ್ ಕುಮಾರ್ ಹಲವು ವರ್ಷಗಳಿಂದ ಮುಂಬೈನಿಂದ ಚಿನ್ನಾಭರಣಗಳನ್ನು ಖರೀದಿಸಿ, ಮೈಸೂರಿನ ವಿವಿಧ ಮಳಿಗೆ ಗಳಿಗೆ ಮಾರಾಟ ಮಾಡುತ್ತಿದ್ದರು. ಹಾಗೆಯೇ 2018ರ ಅ.1ರಂದು 2ಕೆಜಿ 300ಗ್ರಾಂ ಆಭರಣದೊಂದಿಗೆ ಬೆಂಗಳೂರಿಗೆ ವಾಪಸ್ಸಾಗಲು ರೈಲು ನಿಲ್ದಾಣಕ್ಕೆ ಬಂದಿದ್ದರು.

ಗುಜರಾತ್ ಮಾಜಿ ಸಿಎಂ ಮನೆಯಲ್ಲಿ ಕಳ್ಳತನ, ಚೌಕೀದಾರ್‌ ಮೇಲೆ ಅನುಮಾನ!ಗುಜರಾತ್ ಮಾಜಿ ಸಿಎಂ ಮನೆಯಲ್ಲಿ ಕಳ್ಳತನ, ಚೌಕೀದಾರ್‌ ಮೇಲೆ ಅನುಮಾನ!

ಅಂದು ರಾತ್ರಿ 8 ಗಂಟೆ ವೇಳೆಗೆ ಪ್ಲಾಟ್ ಫಾರಂ 6ರಲ್ಲಿ ನಿಂತಿದ್ದ ಕಾವೇರಿ ಎಕ್ಸ್ ಪ್ರೆಸ್ ರೈಲಿನ ಎಸ್-7 ಬೋಗಿಯಲ್ಲಿ ಕುಳಿತಿದ್ದರು. ಬೋಗಿಯಲ್ಲಿ ಇನ್ಯಾರು ಪ್ರಯಾಣಿಕರಿರಲಿಲ್ಲ. ಆ ವೇಳೆಗೆ ಆಗಮಿಸಿದ ಇಬ್ಬರು ಆಸಾಮಿಗಳು, ನವೀನ್ ಕುಮಾರ್ ಅವರನ್ನು ಬೆದರಿಸಿ, ಚಿನ್ನಾಭರಣವಿದ್ದ ಬ್ಯಾಗ್ ಕಿತ್ತು ಕೊಂಡು, ನಿಮಿಷಾರ್ಧದಲ್ಲಿ ಪರಾರಿಯಾದರು. ಇಬ್ಬರು ಖದೀಮರು ಕಿತ್ತುಕೊಂಡ ಬ್ಯಾಗನ್ನು ಪೂರ್ವಯೋಜನೆಯಂತೆ ಒಬ್ಬರಿಂದೊಬ್ಬರಿಗೆ ಪಾಸ್ ಮಾಡಿಕೊಂಡು ಕಣ್ಮರೆಯಾಗಿದ್ದರು.

Mysore railway police arrested three Burglars

ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದ ನವೀನ್ ಕುಮಾರ್, ರೈಲಿನಿಂದ ಇಳಿದು ಬರುವಷ್ಟರಲ್ಲಿ ಖದೀಮರೆಲ್ಲಾ ಪರಾರಿಯಾಗಿದ್ದರು. ಏನು ಮಾಡುವುದೆಂದು ತೋಚದೆ, ಅಲೆದಾಡುತ್ತಿದ್ದಾಗ ಸ್ವಲ್ಪ ದೂರದಲ್ಲಿ ಪೊಲೀಸರು ಕಾಣಿಸಿದ್ದಾರೆ. ಕೂಡಲೇ ಅವರ ಬಳಿ ತೆರಳಿ, ಚಿನ್ನಾಭರಣ ದರೋಡೆ ಮಾಡಿದ್ದನ್ನು ತಿಳಿಸಿದ್ದಾರೆ.

 ಕ್ರೈಂ ಸೀರಿಯಲ್ ನೋಡಿ ಕಳ್ಳತನ ಕಲಿತ ಚಾಲಾಕಿ ಕಳ್ಳಿ ಕದ್ದಿದ್ದೆಷ್ಟು ಗೊತ್ತಾ? ಕ್ರೈಂ ಸೀರಿಯಲ್ ನೋಡಿ ಕಳ್ಳತನ ಕಲಿತ ಚಾಲಾಕಿ ಕಳ್ಳಿ ಕದ್ದಿದ್ದೆಷ್ಟು ಗೊತ್ತಾ?

ಬಳಿಕ ಪ್ರಕರಣ ದಾಖಲಿಸಿಕೊಂಡು, ಸಿಸಿಟಿವಿ ಫೂಟೇಜ್ ವೀಕ್ಷಿಸಿದಾಗ ಖದೀಮರು ಬ್ಯಾಗ್ ನೊಂದಿಗೆ ಪರಾರಿಯಾಗಿದ್ದು ಸ್ಪಷ್ಟವಾಗಿದೆ. ಅಲ್ಲದೇ ಅವರೆಲ್ಲಾ ಹೊರರಾಜ್ಯದವರು ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದರು.

Mysore railway police arrested three Burglars

 ಮತ್ತೊಮ್ಮೆ ಪೊಲೀಸರ ಸೋಗಿನಲ್ಲಿ ಮೈಸೂರಿನಲ್ಲಿ ಕಳ್ಳತನ ಮತ್ತೊಮ್ಮೆ ಪೊಲೀಸರ ಸೋಗಿನಲ್ಲಿ ಮೈಸೂರಿನಲ್ಲಿ ಕಳ್ಳತನ

ಈ ಪ್ರಕರಣವನ್ನು ತನಿಖೆ ನಡೆಸಲು ಎಎಸ್ ಪಿ ಎನ್.ಟಿ.ಶ್ರೀನಿವಾಸರೆಡ್ಡಿ ಅವರ ನೇತೃತ್ವದಲ್ಲಿ 'ಆಪರೇಷನ್ ಕಾವೇರಿ ಎಕ್ಸ್‌ಪ್ರೆಸ್' ಕಾರ್ಯಾಚರಣೆ ಕೈಗೊಳ್ಳಲಾಯಿತು. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಸಿಕ್ಕ ಆರೋಪಿಗಳ ಮುಖಚರ್ಯೆಯ ಜಾಡು ಹಿಡಿದ ಪೊಲೀಸರು ಕೊನೆಗೆ ತಲುಪಿದ್ದು ಮಹಾರಾಷ್ಟ್ರಕ್ಕೆ. ಅಲ್ಲಿನ ಪೊಲೀಸರು ಈ ಆರೋಪಿಗಳ ಗುರುತು ಪತ್ತೆ ಹಚ್ಚಿ ಮಾಹಿತಿ ನೀಡಿದರು.

English summary
Mysore railway police arrested three Burglars. A few months ago these thieves had stolen gold jewelry worth Rs 45 lakh. It was operated under the name Operation Cauvery Express.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X