• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು ಅರಮನೆ ವೆಬ್ ಸೈಟ್ ತಾತ್ಕಲಿಕವಾಗಿ ಸ್ಥಗಿತ: ಇನ್ನೊಂದು ವಾರದೊಳಗೆ ರೆಡಿ

By ಮೈಸೂರು ಪ್ರತಿನಿಧಿ
|

ಮೈಸೂರು, ಆಗಸ್ಟ್.3 : ಖಾಸಗಿಯಾಗಿ ನಿರ್ವಹಣೆಯಾಗುತ್ತಿದ್ದ ವಿಶ್ವವಿಖ್ಯಾತ ಮೈಸೂರು ಅರಮನೆಯ ವೆಬ್ ಸೈಟ್ ಇನ್ನು ರಾಜ್ಯ ಸರ್ಕಾರದ ಇ-ಗವರ್ನೆನ್ಸ್ ಹಾಗೂ ಸರ್ಕಾರಿ ಸ್ವಾಮ್ಯದ ಎಸ್ ಬಿಐ ಮೂಲಕ ನಿರ್ವಹಣೆಯಾಗಲಿದೆ. ಇದರಿಂದ ಅರಮನೆ ಮಂಡಳಿಗೆ ವಾರ್ಷಿಕ ವೆಚ್ಚದಲ್ಲಿ 1 ಲಕ್ಷ ರೂ. ಉಳಿತಾಯವಾಗಲಿದೆ.

ಈವರೆಗೆ ಕಾರ್ಯ ನಿರ್ವಹಿಸುತ್ತಿದ್ದ ಮೈಸೂರು ಪ್ಯಾಲೇಸ್ ವೆಬ್‍ಸೈಟ್ ಸ್ಥಗಿತಗೊಂಡಿದೆ. ಎರಡು ದಿನಗಳಿಂದಲೇ http://www.mysorepalace.gov.in ವೆಬ್‌ಸೈಟ್‌ ಕಾರ್ಯನಿರ್ವಹಿಸುತ್ತಿಲ್ಲ. ಹೊರರಾಜ್ಯ ಹಾಗೂ ವಿದೇಶದಿಂದ ಬರುವ ಪ್ರವಾಸಿಗರು ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸುತ್ತಾರೆ.

ಯಕ್ಷಗಾನ ಪ್ರಿಯರೆ, ವೆಬ್‌ಸೈಟ್‌ಲ್ಲಿ ಸಿಗಲಿವೆ 5 ಸಾವಿರ ಯಕ್ಷಗಾನ ಪ್ರಸಂಗ

ಆದರೆ, ಅವರೀಗ ಸರತಿ ಸಾಲಿನಲ್ಲೇ ನಿಂತು ಟಿಕೆಟ್ ಖರೀದಿಸಬೇಕಿದೆ. ಈ ವೆಬ್‌ಸೈಟ್‌ ನಿರ್ವಹಣೆಗೆಂದು ಖಾಸಗಿ ಸಂಸ್ಥೆಯೊಂದರ ಜೊತೆ ಅರಮನೆ ಮಂಡಳಿಯು ಒಪ್ಪಂದ ಮಾಡಿಕೊಂಡಿದೆ. ಒಪ್ಪಂದ ನವೀಕರಿಸದ ಕಾರಣ ಆ ಸಂಸ್ಥೆಯು ವೆಬ್‌ಸೈಟ್‌ ಸ್ಥಗಿತಗೊಳಿಸಿದೆ ಎಂಬುದು ತಿಳಿದುಬಂದಿದೆ.

ರಾಜ್ಯ ಸರ್ಕಾರದ ಇ-ಗವರ್ನೆನ್ಸ್ ಗೆ ಅಪ್‍ಲೋಡ್ ಆಗುತ್ತಿದ್ದು, ಹೊಸ ರೂಪ ಹಾಗೂ ವಿನ್ಯಾಸದಲ್ಲಿ ಸಾರ್ವಜನಿಕರಿಗೆ ಒಂದೆರಡು ದಿನಗಳಲ್ಲಿ ಲಭ್ಯವಾಗಲಿದೆ ಎಂದು ಹೇಳಲಾಗಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಅಧ್ಯಕ್ಷರಾಗಿರುವ ಅರಮನೆ ಆಡಳಿತ ಮಂಡಳಿಯಲ್ಲಿ ತೆಗೆದುಕೊಂಡ ತೀರ್ಮಾನ ಇದಾಗಿದೆ.

ಇದರಿಂದ ಸರ್ಕಾರದ ಹಣ ಉಳಿತಾಯವಾಗುವುದರ ಜೊತೆಗೆ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡುವವರ ಹಣ ಅವರ ಬ್ಯಾಂಕ್ ಖಾತೆಯಿಂದ ಅದೇ ದಿನ ಅರಮನೆ ಮಂಡಳಿ ಖಾತೆಗೆ ಸಂದಾಯವಾಗಲಿದೆ. ಎಸ್‍ಬಿಐನವರು ಈ ಬಗ್ಗೆ ಹಲವು ದಿನಗಳಿಂದ ಸಲಹೆ ನೀಡುತ್ತಿದ್ದರು.

ಅವರು ಇ- ಪೇಜ್ ಮೂಲಕ ಹಣ ವರ್ಗಾವಣೆ ಮಾಡಲಿದ್ದಾರೆ. ಇದರ ಗುತ್ತಿಗೆ ತಪ್ಪಿದ ಹಿನ್ನೆಲೆಯಲ್ಲಿ ಖಾಸಗಿಯವರು ಅಪಪ್ರಚಾರ ಮಾಡುತ್ತಿದ್ದಾರೆ. 2 ದಿನಗಳಲ್ಲಿ ವೆಬ್ ಸೈಟ್ ಸರಿಹೋಗಲಿದ್ದು, ಪ್ರವಾಸಿಗರಿಗೆ ಮಾಹಿತಿಗಳು ಮತ್ತೆ ಲಭ್ಯವಾಗಲಿವೆ ಎನ್ನುತ್ತಾರೆ ಅರಮನೆ ಆಡಳಿತ ಮಂಡಳಿ.

ಒಂದು ವರ್ಷದಲ್ಲಿ 35 ಲಕ್ಷಕ್ಕೂ ಹೆಚ್ಚು ಮಂದಿ ಅರಮನೆಗೆ ಭೇಟಿ ನೀಡಿದ್ದು, 5 ಸಾವಿರ ಮಂದಿ ಮಾತ್ರ ಆನ್ ಲೈನ್ ಮೂಲಕ ಟಿಕೆಟ್ ಬುಕ್ ಮಾಡಿದ್ದಾರೆ. ಹೀಗಾಗಿ ಆನ್ ಲೈನ್ ನಲ್ಲಿ ಟಿಕೆಟ್ ಖರೀದಿಸುವವರಿಗೆ ಯಾವುದೇ ತೊಂದರೆಯಾಗಿಲ್ಲ. ಅಧಿಕೃತ ಬ್ಯಾಂಕರ್ ಎಸ್ ಬಿಐ ಮೂಲಕ ಟಿಕೆಟ್ ಖರೀದಿಗೆ ಈಗಲೂ ಅವಕಾಶವಿದೆ ಎಂದಿದ್ದಾರೆ.

ಅರಮನೆ ವೆಬ್ ಸೈಟ್ ಸಸ್ಪೆಂಡ್ ಆಗಿದೆ. ವಿಶ್ವದ ಜನರನ್ನು ತನ್ನತ್ತ ಸೆಳೆಯತ್ತಿದ್ದ ಮೈಸೂರು ಇತಿಹಾಸಕ್ಕೆ ಮಸಿ ಬಳಿಯುವ ಕೆಲಸ ನಡೆದಿದೆ ಎನ್ನಲಾಗಿದ್ದು, ನಿಜಕ್ಕೂ ಮೈಸೂರು ಅರಮನೆ ವೆಬ್‍ಸೈಟ್ ಸೇಫ್ ಆಗಿದೆಯಾ? ಎನ್ನುವ ಪ್ರಶ್ನೆ ಸಾರ್ವಜನಿಕರನ್ನು ಕಾಡಿದೆ.

ಇ-ಟಿಕೆಟ್' ಬುಕ್ಕಿಂಗ್ ಗಾಗಿ ಪವಾಸಿಗರು ಪರದಾಟ ನಡೆಸುತ್ತಿದ್ದಾರೆ. ವೆಬ್‍ಸೈಟ್ ಅರಮನೆಯ ಅಧಿಕೃತ ಮಾಹಿತಿ ನೀಡುತ್ತಿತ್ತು. ವೀಕ್ಷಕರ ಸಂಖ್ಯೆ, ಪ್ರಮುಖರ ಭೇಟಿ ಫಡಿಯೋ ತೋರಿಸುತಿತ್ತು. ನಿತ್ಯವೂ ಸಾವಿರಾರು ಮಂದಿ ವೆಬ್ ವೀಕ್ಷಿಸುತ್ತಿದ್ದರು. ಈಗ ದೊರಕುತ್ತಿಲ್ಲ.

ಮೈಸೂರು ಅರಮನೆ ಮಾಹಿತಿಗಾಗಿ ಅಂತರ್ಜಾಲದಲ್ಲಿ ಹುಡುಕಾಟ ನಡೆಸಿದರೆ ಸಸ್ಪೆಂಡೆಡ್ ಎಂದು ತೋರಿಸುತ್ತಿದೆ. ಈ ಹಿಂದೆಯೂ ವೆಬ್‌ಸೈಟ್‌ ಬಗ್ಗೆ ಪ್ರವಾಸೋದ್ಯಮಿಗಳು ಹಲವಾರು ಸಭೆಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಅರಮನೆಯ ಇತಿಹಾಸ ಹಾಗೂ ಹಳೆಯ ಛಾಯಾಚಿತ್ರಗಳನ್ನು ಬಿಟ್ಟರೆ ನಿತ್ಯದ ಚಟುವಟಿಕೆಗಳ ಬಗ್ಗೆ ವೆಬ್‌ಸೈಟ್‌ನಲ್ಲಿ ಮಾಹಿತಿಯೇ ಸಿಗುವುದಿಲ್ಲ. ಸರಿಯಾಗಿ ಪರಿಷ್ಕೃತಗೊಳ್ಳುತ್ತಿರಲಿಲ್ಲ ಎಂದು ದೂರಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The world-famous Mysore Palace web site is temporarily has stopped. Next will be managed by the Government owned SBI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more