ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾಲಿಕೆ ಸಭೆಗೆ ಸಹೋದರನ ಕರೆತಂದು ವಿವಾದ ಸೃಷ್ಟಿಸಿದ ಮೈಸೂರು ಮೇಯರ್

|
Google Oneindia Kannada News

ಮೈಸೂರು, ಜೂನ್ 3: ಇಂದಿನ ಆಡಳಿತದಲ್ಲಿ ಕೆಲವೆಡೆ ಮಹಿಳಾ ರಾಜಕಾರಣಿಗಳು ತಮ್ಮ ಗಂಡನನ್ನೋ, ಸಹೋದರನನ್ನೋ ತಾವು ನಿರ್ವಹಿಸುವ ಕರ್ತವ್ಯದ ಸ್ಥಳಕ್ಕೆ ಕರೆದುಕೊಂಡು ಹೋಗುವುದು ಆಗಾಗ ವರದಿ ಆಗುತ್ತವೆ. ಸರ್ಕಾರ ಮಹಿಳೆಯರಿಗೂ ಆಡಳಿತದಲ್ಲಿ ಸೂಕ್ತ ಪ್ರಾತಿನಿಧ್ಯ ಕೊಡಬೇಕೆಂದು ಮಾಡಿದ ಮಹಿಳಾ ಮೀಸಲಾತಿಯನ್ನು, ಮಹಿಳೆಯರೇ ಪುರುಷರನ್ನು ಕರೆತರುವ ಮೂಲಕ ಮೂಲ ಉದ್ದೇಶವನ್ನೇ ಬುಡಮೇಲು ಮಾಡುತ್ತಿದ್ದಾರೆ.

ಮಹಿಳಾ ರಾಜಕಾರಣಿಗಳು ಕರೆತರುವ ಆ ಪುರುಷರು ಅಧಿಕಾರಿಗಳ ಮೇಲೆ ದರ್ಬಾರ್‌ ತೋರಿಸಿಕೊಂಡು ಮಹಿಳೆಯರ ಪರವಾಗಿ ತಾವೇ ಸಭೆಗಳಲ್ಲಿ ಭಾಗವಹಿಸಿ ಮಾತನಾಡುವುದು ಇದೆ. ಆ ಸಾಲಿಗೆ ಇದೀಗ ಮೈಸೂರು ಮಹಾ ಪೌರರಾದ ತಸ್ನೀಂ ಅವರು ಸೇರ್ಪಡೆಯಾಗಿರುವುದು ನಗರದ ಜನತೆಯಲ್ಲಿ ಅಸಮಾಧಾನ ಸೃಷ್ಟಿಸಿದೆ. ಮೇಯರ್ ರಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಅನಗತ್ಯವಾಗಿ ತಮ್ಮ ಸಂಬಂಧಿಯನ್ನು ಸಭೆಗೆ ಕರೆತರುವ ಮೂಲಕ ನಿಯಮವನ್ನು ಉಲ್ಲಂಘಿಸಿದ್ದಾರೆ. ಮಹಾಪೌರರ ವರ್ತನೆಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಮೈಸೂರು: ಸ್ಥಗಿತಗೊಂಡಿದ್ದ ಇರ್ವಿನ್ ರಸ್ತೆ ಕಾಮಗಾರಿ ಕೆಲಸ ಶುರುಮೈಸೂರು: ಸ್ಥಗಿತಗೊಂಡಿದ್ದ ಇರ್ವಿನ್ ರಸ್ತೆ ಕಾಮಗಾರಿ ಕೆಲಸ ಶುರು

ಕಂದಾಯ ಅಧಿಕಾರಿಗಳು ಹಾಗೂ ನಗರ ಪಾಲಿಕೆ ಸದಸ್ಯರು ಭಾಗಿ

ಕಂದಾಯ ಅಧಿಕಾರಿಗಳು ಹಾಗೂ ನಗರ ಪಾಲಿಕೆ ಸದಸ್ಯರು ಭಾಗಿ

ಲಾಕ್‌ ಡೌನ್‌ ಸಡಿಲಗೊಂಡ ಕಾರಣ ನಗರ ಪಾಲಿಕೆಯ ಕೆಲಸಗಳಿಗೆ ಚಾಲನೆ ದೊರಕಿದೆ. ಅದರಂತೆ ಮೈಸೂರು ಮಹಾಪೌರರಾದ ತಸ್ನೀಂ ಅವರು ಆಯುಕ್ತ ಗುರುದತ್ ಹೆಗಡೆ ಅವರ ಜೊತೆಗೂಡಿ ವಲಯವಾರು ನಗರ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ವಾರ್ಡ್ ಗಳ ಅಭಿವೃದ್ಧಿ ಸಂಬಂಧ ಸಭೆ ನಡೆಸಲು ತೀರ್ಮಾನಿಸಿದ್ದರು.

ಸೋಮವಾರ ಸಂಜೆ 7 ಕ್ಕೆ ವಲಯ ಕಚೇರಿ ಸಂಬಂಧಿಸಿದಂತೆ ನಗರ ಪಾಲಿಕೆಯ ನವೀಕೃತ ಸಭಾಂಗಣದಲ್ಲಿ ಆಯುಕ್ತರು, ಮಹಾಪೌರರು, ಕಂದಾಯ ಅಧಿಕಾರಿಗಳು ಹಾಗೂ ನಗರ ಪಾಲಿಕೆ ಸದಸ್ಯರು ಪಾಲ್ಗೊಂಡಿದ್ದರು.

ಅಧಿಕಾರಿಗಳು ಸದಸ್ಯರ ಮಾತುಗಳನ್ನು ಕೇಳುತ್ತಿಲ್ಲ

ಅಧಿಕಾರಿಗಳು ಸದಸ್ಯರ ಮಾತುಗಳನ್ನು ಕೇಳುತ್ತಿಲ್ಲ

ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು ತಮ್ಮ ವಾರ್ಡ್ ಗಳ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು. ಈ ನಡುವೆ ತಸ್ನೀಂ ಅವರ ಸಹೋದರನೆಂದು ಹೇಳಿಕೊಂಡ ಸಲೀಂ ಎಂಬುವರು ಸದಸ್ಯರಲ್ಲದಿದ್ದರೂ ಸಭೆಯಲ್ಲಿ ಭಾಗವಹಿಸಿದ್ದರು. ಸದಸ್ಯರು ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿರುವ ಸಂದರ್ಭದಲ್ಲಿಯೇ ಎದ್ದು ನಿಂತ ಸಲೀಂ, ಅಧಿಕಾರಿಗಳು ಸದಸ್ಯರ ಮಾತುಗಳನ್ನು ಕೇಳುತ್ತಿಲ್ಲ. ಅವರ ವರ್ತನೆ ಸರಿ ಇಲ್ಲ ಎಂದು ಆರೋಪಿಸಿದ್ದಾರೆ.

ಮೈಮುಲ್ ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲ: ಅಧ್ಯಕ್ಷ ಸಿದ್ದೇಗೌಡಮೈಮುಲ್ ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲ: ಅಧ್ಯಕ್ಷ ಸಿದ್ದೇಗೌಡ

ಸಭೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತಿಲ್ಲ

ಸಭೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತಿಲ್ಲ

ಮುಂದುವರೆದು ಮಾತನಾಡಿ, ನಗರ ಪಾಲಿಕೆ ಆಯುಕ್ತರು ಕೂಡಾ ಇಂತಹ ಅಧಿಕಾರಿಗಳ ಕಡೆಗೆ ಗಮನ ಹರಿಸುತ್ತಿಲ್ಲ ಎಂದೂ ಹೇಳಿದ್ದಾರೆ. ಇದನ್ನು ಗಮನಿಸಿದ ಆಯುಕ್ತರು, ನೀವು ಸಭೆಗೆ ಬಂದಿದ್ದಾದರೂ ಹೇಗೆ ಎಂದು ತಿಳಿಯುತ್ತಿಲ್ಲ. ಇದು ಅಧಿಕಾರಿಗಳು ಮತ್ತು ಸದಸ್ಯರಿಗೆ ಸೀಮಿತವಾಗಿರುವ ಸಭೆ. ಸಾರ್ವಜನಿಕರು ಭಾಗವಹಿಸುವಂತಿಲ್ಲ. ಹೀಗಾಗಿ ಸುಮ್ಮನೆ ಇಲ್ಲಸಲ್ಲದ ಆರೋಪ ಮಾಡಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಮಾತ್ರ ಅವಕಾಶ

ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಮಾತ್ರ ಅವಕಾಶ

ಮುಂದಿನ ದಿನಗಳಲ್ಲಿ ಸಂಬಂಧಪಡದ ವ್ಯಕ್ತಿಗಳನ್ನು ಸಭೆಗೆ ಸೇರಿಸಬೇಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಈ ಕುರಿತು ಒನ್ಇಂಡಿಯಾ ಕನ್ನಡದೊಂದಿಗೆ ಮಾತನಾಡಿದ ಆಯುಕ್ತ ಗುರುದತ್‌ ಅವರು, ""ನಗರ ಪಾಲಿಕೆಯ ಯಾವುದೇ ಸಭೆಗಳಿಗೆ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಸರ್ಕಾರವೇ ನಿಷೇಧಿಸಿದ್ದು, ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಮಾತ್ರ ಅವಕಾಶವಿದೆ. ಮೇಯರ್ ಅವರಿಗೆ ಈಗಾಗಲೇ ಈ ಕುರಿತು ತಿಳಿಸಲಾಗಿದೆ ಎಂದರು.

English summary
Mysore Mayor Tasneem, violated the rule by bringing her Brother to the Council meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X