ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗತಕಾಲದ ಕಥೆ ಹೇಳುತ್ತಿರುವ ಮೈಸೂರಿನ ಗೊಂಬೆಗಳು

|
Google Oneindia Kannada News

ಮೈಸೂರು, ಅ.10 : ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಜಂಜೂ ಸವಾರಿ ಎಲ್ಲರ ಗಮನ ಸೆಳೆಯುತ್ತದೆ. ಹಾಗೆಯೇ ಗೊಂಬೆ ಪ್ರದರ್ಶನ ಸಹ ಆಕರ್ಷಕವಾಗಿರುತ್ತದೆ. ನಗರದ ಮನೆಮನೆಗಳಲ್ಲಿ ಬೊಂಬೆಗಳನ್ನು ಕೂರಿಸುವುದು ಮಹಾರಾಜರ ಕಾಲದಿಂದ ಬೆಳೆದು ಬಂದ ಸಂಪ್ರದಾಯವಾಗಿದೆ.

ನಗರದಲ್ಲಿ ಅರಮನೆ, ಕೋಟೆ, ಪಾರಂಪರಿಕ ಕಟ್ಟಡಗಳು, ಅಂಗಡಿ ಮಳಿಗೆಗಳು, ರಸ್ತೆಗಳು ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದ್ದರೆ, ಮನೆಮನೆಗಳಲ್ಲಿ ಬಣ್ಣಬಣ್ಣದ ಬೊಂಬೆಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತವೆ.

ಪ್ರತಿ ಮನೆಯಲ್ಲಿ ವಿವಿಧ ಬೊಂಬೆಗಳನ್ನು ಕೂರಿಸಿ ಮಹಿಳೆಯರು ಆರತಿ ಬೆಳಗುತ್ತಾರೆ. ಈ ಬೊಂಬೆಗಳು ಮನೆಗೂ ಮನಸ್ಸಿಗೂ ಮುದ ನೀಡುವುದಲ್ಲದೆ, ದಸರಾ ಹಬ್ಬದ ಸಂಭ್ರಮಕ್ಕೂ ತಮ್ಮ ಕಾಣಿಕೆ ನೀಡುತ್ತವೆ. ಆದ್ದರಿಂದ ದಸರಾದಲ್ಲಿ ಗೊಂಬೆಗಳ ಪ್ರದರ್ಶನಕ್ಕೆ ಹೆಚ್ಚಿನ ಮಹತ್ವವಿದೆ.

ಮೈಸೂರಿನಲ್ಲಿ ಆಡಳಿತ ನಡೆಸಿದ ಮಹಾರಾಜರು ತಮ್ಮ ಆರಾಧನೆಯಲ್ಲಿ ಗೊಂಬೆಗೂ ಒಂದು ಮಹತ್ವದ ಸ್ಥಾನ ನೀಡಿ ನಾಡಹಬ್ಬ ನವರಾತ್ರಿಯಲ್ಲಿ ದಸರಾ ಮೆರವಣಿಗೆಯಂತೆಯೇ ಬೊಂಬೆಗೂ ವಿಶೇಷ ಸ್ಥಾನ ಕಲ್ಪಿಸಿದ್ದರು. ಅರಮನೆಯಲ್ಲಿ ವಿವಿಧ ಗೊಂಬೆಗಳನ್ನು ಸಾಲಾಂಕೃತವಾಗಿ ಜೋಡಿಸಿ, ಪೂಜಿಸಿ ಪ್ರದರ್ಶಿಸುವುದು ಅಂದಿನಿಂದ ನಡೆದು ಬಂದ ಸಂಪ್ರದಾಯವಾಗಿದೆ.

ಗೊಂಬೆಗಳಿಗಾಗಿ ತೊಟ್ಟಿಮನೆ'

ಗೊಂಬೆಗಳಿಗಾಗಿ ತೊಟ್ಟಿಮನೆ'

ಅರಮನೆಯಲ್ಲಿ ದರ್ಬಾರ್ ಹಾಲ್, ಚಿತ್ರಶಾಲೆ, ವಿವಾಹ ಮಂಟಪ, ಭೋಜನ ಶಾಲೆ ಇರುವಂತೆ ಬೊಂಬೆಗಳ ಪ್ರದರ್ಶನಕ್ಕಾಗಿ 'ತೊಟ್ಟಿಮನೆ' ಇದೆ. ದಂತ, ಶ್ರೀಗಂಧದ ಮರ ಸೇರಿದಂತೆ ಬೆಲೆಬಾಳುವ ಮರಗಳಿಂದ ಕೆತ್ತಿದ ಅಪೂರ್ವ ಬೊಂಬೆಗಳನ್ನು ಇಲ್ಲಿ ಕಾಣಬಹುದು. ಕಲಾವಿದರನ್ನು ಪ್ರೋತ್ಸಾಹಿಸಲು ರಾಜರು ಇಂತಹ ಸಂಪ್ರದಾಯ ಪ್ರಾರಂಭಿಸಿದ್ದರು.

ಗೊಂಬೆ ಪ್ರದರ್ಶನ ಯಾವಾಗ?

ಗೊಂಬೆ ಪ್ರದರ್ಶನ ಯಾವಾಗ?

ನವರಾತ್ರಿ ಆರಂಭವಾದ ದಿನವೇ ಮನೆಮನೆಗಳಲ್ಲಿ ವಿವಿಧ ಬಣ್ಣದ ವಿವಿಧ ನಮೂನೆಯ ಗೊಂಬೆಗಳನ್ನು ಕೂರಿಸಲಾಗುತ್ತದೆ. ಅವುಗಳಿಗೆ ಅಲಂಕಾರ ಮಾಡಿ, ಮುತೈದೆಯರು ಆರತಿ ಬೆಳಗುವ ಮೂಲಕ ಪೂಜೆ ಸಲ್ಲಿಸುತ್ತಾರೆ. ಇದು ಒಂಭತ್ತು ದಿನವೂ ನಡೆಯುತ್ತದೆ.

ರಾಜ-ರಾಣಿಗೆ ಮೊದಲ ಸ್ಥಾನ

ರಾಜ-ರಾಣಿಗೆ ಮೊದಲ ಸ್ಥಾನ

ಸಾಮಾನ್ಯವಾಗಿ ಗೊಂಬೆ ಪ್ರದರ್ಶನದಲ್ಲಿ ರಾಜ-ರಾಣಿಯರದ್ದೇ ದರ್ಬಾರು. ರಾಜರಿಗೆ ಗೌರವ ಸೂಚಿಸುವ ಪ್ರತೀಕವಾಗಿ ಅವರ ಗೊಂಬೆ ಮೊದಲ ಸಾಲಿನಲ್ಲಿ ಇಡಲಾಗುತ್ತದೆ. ಉಳಿದಂತೆ ಅಂಬಾರಿ ಹೊತ್ತ ಆನೆ, ಪದಾತಿದಳ, ಕುದುರೆ, ಒಂಟೆಗಳ ಸಾಲು, ಮೈಸೂರು ಅರಮನೆ ಸೇರಿದಂತೆ ಹಲವು ಗೊಂಬೆಗಳು ಪ್ರದರ್ಶನದಲ್ಲಿರುತ್ತವೆ.

ಪುರಾತನ ಸಂಪ್ರದಾಯ

ಪುರಾತನ ಸಂಪ್ರದಾಯ

ಹಿಂದಿನ ಕಾಲದಲ್ಲಿ ಮಕ್ಕಳು ಮನೋರಂಜನೆ ಪಡೆಯಲು ಗೊಂಬೆಗಳ ಜೊತೆಗೆ ಆಟವಾಡುತ್ತಿದ್ದರು. ಅಲ್ಲದೆ, ಬಾಲ್ಯವಿವಾಹವೂ ನಡೆಯುತ್ತಿದ್ದ ಕಾಲದಲ್ಲಿ ಹೆತ್ತವರು ಮಗಳಿಗೆ ಗೊಂಬೆಗಳನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಆಗ ಅವರು, ಗೊಂಬೆಗಳಿಗೆ ಪ್ರತಿ ವರ್ಷ ಪೂಜೆ ಸಲ್ಲಿಸುತ್ತಿದ್ದರು ಎಂಬ ಸಂಪ್ರದಾಯವೂ ಇದೆ.

ದಸರಾದಲ್ಲಿ ಪ್ರೋತ್ಸಾಹ

ದಸರಾದಲ್ಲಿ ಪ್ರೋತ್ಸಾಹ

ಗೊಂಬೆಗಳನ್ನು ಇಡುವ ಮನೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮೈಸೂರು ದಸರಾ ಸಾಂಸ್ಕೃತಿಕ ಸಮಿತಿ ದಸರಾ ಬೊಂಬೆ ಪ್ರದರ್ಶನವನ್ನು ಏರ್ಪಡಿಸುತ್ತದೆ. ಉತ್ತಮ ಪ್ರದರ್ಶನ ನೀಡಿದ ಮನೆಗಳಿಗೆ ಬಹುಮಾನ ನೀಡಿ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುತ್ತಿದೆ.

ಜನರಿಗೆ ಮುಕ್ತ ಅವಕಾಶ

ಜನರಿಗೆ ಮುಕ್ತ ಅವಕಾಶ

ಮೈಸೂರಿನ ಹಲವು ಮನೆಗಳಲ್ಲಿ ಬೊಂಬೆಗಳನ್ನು ಕೂರಿಸಲಾಗುತ್ತದೆ. ಕೆಲವು ಮನೆಗಳಲ್ಲಿ ಸಾರ್ವಜನಿಕರಿಗೂ ವೀಕ್ಷಿಸಲು ಅವಕಾಶ ಕಲ್ಪಿಸುತ್ತಾರೆ. ಮೃಗಾಲಯದ ಮುಂಭಾಗದಲ್ಲಿರುವ ರಾಮ್‌ಸನ್ ಪ್ರತಿಷ್ಠಾನದಲ್ಲಿ ಪ್ರತೀ ವರ್ಷ ಬೊಂಬೆಗಳ ಪ್ರದರ್ಶನ ಏರ್ಪಡಿಸಲಾಗುತ್ತದೆ.

ಕರ್ನಾಟಕದ ಇತರ ಕಡೆಯೂ ಇದೆ

ಕರ್ನಾಟಕದ ಇತರ ಕಡೆಯೂ ಇದೆ

ದಸರೆಯ ಸಂದರ್ಭ ಮನೆಮನೆಗಳಲ್ಲಿ ಬೊಂಬೆ ಕೂರಿಸಿ, ಪೂಜಿಸುವ ಸಂಪ್ರದಾಯ ಕರ್ನಾಟಕದ ಇತರ ಜಿಲ್ಲೆಗಳಲ್ಲೂ ಇದೆ. ಆದರೆ, ಮೈಸೂರಿನಲ್ಲಿ ದಸರಾ ಸಂಭ್ರಮದೊಂದಿಗೆ ಗೊಂಬೆಗಳು ಸೇರುವುದರಿಂದ ಹೆಚ್ಚಿನ ಪ್ರಾಮುಖ್ಯತೆ ದೊರಕಿದೆ.

English summary
Mysore Dasara puppet show is traditional event at 10 days Mysore Dasara celebration. In Mysore palace and houses of city will organize puppet show in ten days dasara. Maharajas begins this event to support to artist in Mysore Dasara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X