ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾ: ಆಹಾರ ಮೇಳದಲ್ಲಿ ಬಾಯಲ್ಲಿ ನೀರೂರಿಸುವ ನೂರಾರು ಬಗೆಯ ತಿಂಡಿ, ತಿನಿಸು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್‌, 27: ದಸರಾದಲ್ಲಿ ಹೆಚ್ಚಿನ ಜನರು ಸೇರುವ ಜಾಗಗಳಲ್ಲಿ ಆಹಾರ ಮೇಳವೂ ಒಂದಾಗಿದೆ. ಸದ್ಯ ಆಹಾರ ಮೇಳದಲ್ಲಿ ಮೇಲುಕೋಟೆ ಪುಳಿಯೊಗರೆ, ಉತ್ತರ ಕರ್ನಾಟಕದ ಖಡಕ್ ರೊಟ್ಟಿ , ಶೇಂಗಾ ಚಟ್ನಿ, ದಾವಣೆಗೆರೆ ಬೆಣ್ಣೆ ದೋಸೆ, ಬಿಸಿಬಿಸಿ ಮಟ್ಕಾ ಬಿರಿಯಾನಿ, ಲೆಗ್ ಪೀಸ್, ಜೊತೆಗೆ ಸಿರಿಧಾನ್ಯಗಳ ತಿನಿಸುಗಳು ಬಾಯಲ್ಲಿ ನೀರು ತರಿಸುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ತನ್ನತ್ತ ಕರೆಯುತ್ತಿದೆ.

ನಗರದ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ದಸರಾ ಆಹಾರ ಮೇಳವನ್ನು ಆಯೋಜಿಸಲಾಗಿದೆ. ಮೇಳದಲ್ಲಿ ಬುಡಕಟ್ಟು ಆಹಾರ ಪದ್ಧತಿ (ಬೊಂಬು ಬಿರಿಯಾನಿ), ಜಾನಪದ ಪದ್ಧತಿ, ಮೈಸೂರು, ಕೊಡಗು, ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ, ಉತ್ತರ ಭಾರತ, ಕೇರಳ, ಆಂಧ್ರ ಶೈಲಿ, ಕರಾವಳಿ ಶೈಲಿ, ತೆಲಂಗಾಣ, ಮಹಾರಾಷ್ಟ್ರ, ಚೈನೀಸ್, ಐಸ್ ಕ್ರೀಮ್, ಬಂಗಾರಪೇಟೆ ಹಾಗೂ ಬಾಂಬೆ ಚಾಟ್ಸ್‌, ಬೇಕರಿ, ಬಿಸ್ಕತ್ತುಗಳು, ಹಣ್ಣು ಮತ್ತು ಹಣ್ಣಿನ ರಸಗಳು, ಸಾಂಪ್ರದಾಯಿಕ ಸಿಹಿ ತಿನಿಸು, ತಂಪು ಪಾನೀಯಗಳು, ಚಾಟ್ಸ್, ಔಷಧಿ ಆಹಾರ ಶೈಲಿಯ ತಿಂಡಿ ತಿನಿಸುಗಳು, ಸಿರಿಧಾನ್ಯದ ಜೊತೆಗೆ ಸಾವಯವ ಆಹಾರಗಳು ಭೋಜನ ಪ್ರಿಯರನ್ನು ಆಕರ್ಷಿಸುತ್ತಿದೆ.

ಮೈಸೂರು ದಸರಾ 2022: ದಸರಾ ಬೆಳಕಿನ ವೈಭವಕ್ಕೆ ಚಾಲನೆಮೈಸೂರು ದಸರಾ 2022: ದಸರಾ ಬೆಳಕಿನ ವೈಭವಕ್ಕೆ ಚಾಲನೆ

ಬೊಂಬು ಬಿರಿಯಾನಿಗೆ ಹೆಚ್ಚಿದ ಬೇಡಿಕೆ
ಕಳೆದ ಎಂಟು ವರ್ಷದಿಂದ ಆದಿವಾಸಿಗಳು ಬೊಂಬು ಬಿರಿಯಾನಿ ಹಾಗೂ ಬಿದಿರು ಅಕ್ಕಿ ಪಾಯಸವನ್ನು ಆಹಾರ ಮೇಳದಲ್ಲಿ ಮಾರಾಟ ಮಾಡುತ್ತಾರೆ. ಆದರೆ ಈ ವರ್ಷ ಬುಡಕಟ್ಟು ಮಹಿಳೆ ರಾಷ್ಟ್ರಪತಿ ಆಗಿದ್ದು, ದಸರಾ ಉದ್ಘಾಟನೆ ನೆರವೇರಿಸಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬೊಂಬು ಬಿರಿಯಾನಿ ಬಗ್ಗೆ ವಿಚಾರಿಸುತ್ತಿದ್ದಾರೆ.

Mysore Dasara: Hundreds types of snacks and food at food fair

ಆಹಾರ ಮೇಳದಲ್ಲಿ ಮಳಿಗೆಗಳ ಸಂಖ್ಯೆ?
ಪ್ರತಿವರ್ಷದಂತೆ ಈ ವರ್ಷವೂ ಆಹಾರ ಮೇಳ ಸ್ಕೌಟ್ಸ್ ಅಂಡ್ ಗೈಡ್ಸ್ ಹಾಗೂ ಲಲಿತಮಹಲ್ ಸಮೀಪದ ಮುಡಾ ಮೈದಾನದಲ್ಲಿ ನಡೆಯುತ್ತಿದೆ. ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ 118 ಆಹಾರ ಮಳಿಗೆಗಳಿದ್ದರೆ, ಲಲಿತಮಹಲ್ ಸಮೀಪ ಸ್ಥಳದಲ್ಲಿ 74 ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ. ಎಲ್ಲಾ ಕಡೆ ನೀರಿನ ವ್ಯವಸ್ಥೆ ಹಾಗೂ ಕಸ ಸಂಗ್ರಹಕ್ಕೆ ಡಬ್ಬಿಗಳನ್ನು ಇಡಲಾಗಿದ್ದು, ಸ್ವಚ್ಛತೆಗೆ ಹೆಚ್ಚಿನದಾಗಿ ಆದ್ಯತೆ ನೀಡಲಾಗಿದೆ.

Mysore Dasara: Hundreds types of snacks and food at food fair

''ಆಧುನಿಕ ಆಹಾರ ಅಭ್ಯಾಸಗಳಿಂದ ಜನರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಸಹಜ, ನೈಸರ್ಗಿಕ, ಸಾವಯವ ಕೃಷಿಯಲ್ಲಿ ಬೆಳೆದ ಆಹಾರ ಧ್ಯಾನಗಳು, ಹಣ್ಣು-ಹಂಪಲು, ತರಕಾರಿ, ಸಿರಿಧಾನ್ಯಗಳಿಂದ ತಯಾರಿಸಿದ ಅಡುಗೆಗಳು ಈ ಬಾರಿ ಜನರನ್ನು ಹೆಚ್ಚು ಆಕರ್ಷಿಸುತ್ತದೆ. ನಿತ್ಯ ಸಂಜೆ ಸಾಂಸ್ಕೃತಿಕ ಅಥವಾ ಸಂಗೀತ ಕಾರ್ಯಕ್ರಮ ಇರುತ್ತದೆ. ಅಡುಗೆಗೆ ಸಂಬಂಧಪಟ್ಟ ಸ್ಪರ್ಧೆ ಹಾಗೂ ನುರಿತ ಆಹಾರ ತಜ್ಞರಿಂದ ಉಪನ್ಯಾಸ ಕಾರ್ಯಕ್ರಮವೂ ಇರಲಿದೆ,'' ಎಂದು ಆಹಾರ ಮೇಳ ಉಪ ಸಮಿತಿ ಕಾರ್ಯಾಧ್ಯಕ್ಷೆ ಕುಮುದಾ ತಿಳಿಸಿದ್ದಾರೆ.

ಇನ್ನು ಮೈಸೂರು ನಗರದ ಅರಮನೆಯ ಮುಂಭಾಗದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ವಿಶ್ವ ಪ್ರವಾಸೋದ್ಯಮದ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಚಾಲನೆ ನೀಡಿದರು.

ವಿಶ್ವ ಪ್ರವಾಸೋದ್ಯಮ ಜಾಥಾಕ್ಕೆ ಚಾಲನೆ ಬಳಿಕ ಮಾತನಾಡಿದ ಸಚಿವರು, ಟ್ರಾವೆಲ್ಸ್ ಅಸೋಸಿಯೇಷನ್, "ಹೋಟೆಲ್ ಮಾಲೀಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿರುವ ಈ ಮೆರವಣಿಗೆ ಪ್ರವಾಸಿಗರನ್ನು ಸೆಳೆಯಲು ಸಹಕಾರಿಯಾಗಲಿದೆ. ಈ ಬಾರಿ ಅದ್ದೂರಿಯಾಗಿ ದಸರಾ ಆಚರಣೆ ಮಾಡುತ್ತಿರುವುದರಿಂದ ಪ್ರವಾಸೋದ್ಯಮಕ್ಕೆ ಚೇತರಿಕೆ ಸಿಗಲಿದೆ. ದೇಶ ವಿದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಾಲನೆ ನೀಡುತ್ತಿರುವುದಕ್ಕೆ ತುಂಬಾ ಖುಷಿ ಆಗುತ್ತಿದೆ. ಗೋಲ್ಡ್ ಪಾಸ್ ಬಗ್ಗೆ ರೂಪುರೇಷೆಗಳನ್ನು ಮಾಡಿದ ನಂತರ ಸಭೆಯಲ್ಲಿ ತಿರ್ಮಾನ ಕೈಗೊಂಡು ತಿಳಿಸಲಾಗುವುದು," ಎಂದರು.

English summary
Mysore dasara food fair organized at mysuru Scouts and Guides Ground, wide variety foods attracting tourists. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X