ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಂಬೂಸವಾರಿಗೆ ಸದ್ದಿಲ್ಲದೆ ಅಣಿಯಾದ ಮಲ್ಲಿಗೆ ನಗರಿ, 42 ಸ್ತಬ್ಧಚಿತ್ರಗಳು ಸಿದ್ಧ

|
Google Oneindia Kannada News

ಮೈಸೂರು, ಅಕ್ಟೋಬರ್. 17 : ಜಂಬೂಸವಾರಿಗೆ ಸದ್ದಿಲ್ಲದೆ ಮಲ್ಲಿಗೆ ನಗರಿ ಅಣಿಯಾಗುತ್ತಿದ್ದು, ಒಟ್ಟು 42 ಸ್ತಬ್ಧಚಿತ್ರಗಳು ನಾಲ್ಕು ಆಶಯಗಳಲ್ಲಿ ಈ ಬಾರಿಯ ವೈಭವವನ್ನು ಇಮ್ಮಡಿಗೊಳಿಸಲಿವೆ.

ಕಲೆ, ಸಂಸ್ಕೃತಿ ಹಾಗೂ ವಾಸ್ತುಶಿಲ್ಪ', ಅಂತರ್ಜಲ ಸಂರಕ್ಷಣೆ, ಅರಣ್ಯೀಕರಣ', ಜಾನಪದ ಹಬ್ಬಗಳ ಪರಂಪರೆ' ಹಾಗೂ ನಾಡು- ನುಡಿಗೆ ಶ್ರಮಿಸಿದ ಯಶೋಗಾಥೆ' ಆಶಯಗಳೊಂದಿಗೆ ಸ್ತಬ್ಧ ಚಿತ್ರಗಳು ಮೂಡುತ್ತಿವೆ.

ಮೈಸೂರು ದಸರಾ - ವಿಶೇಷ ಪುರವಣಿ

ಕಾನೂನು ಸೇವಾ ಪ್ರಾಧಿಕಾರ ಹಾಗೂ ಎನ್‍ಸಿಸಿ ಬೆಟಾಲಿಯನ್ ಗಳು ಜಂಬೂಸವಾರಿಯಲ್ಲಿ ಇದೇ ಮೊದಲ ಬಾರಿಗೆ ಹೆಜ್ಜೆ ಹಾಕುತ್ತಿರುವುದು ವಿಶೇಷ. ರಾಜ್ಯದ 30 ಜಿಲ್ಲೆಗಳ ಜಿಲ್ಲಾ ಪಂಚಾಯಿತಿಗಳು ತಲಾ ಒಂದು ಹಾಗೂ ವಿವಿಧ ಇಲಾಖೆಗಳ 12 ಸ್ತಬ್ಧಚಿತ್ರಗಳು ದಸರಾ ಮೆರವಣಿಗೆಯಲ್ಲಿ ನೋಡುಗರ ಗಮನ ಸೆಳೆಯಲಿವೆ.

ಮೈಸೂರು ದಸರಾ ನೋಡಲು ಬರುತ್ತಿದೆ ಪ್ರವಾಸಿಗರ ದಂಡು, ಹೋಟೆಲ್ ಮಾಲೀಕರು ಹೇಳೋದೇನು?ಮೈಸೂರು ದಸರಾ ನೋಡಲು ಬರುತ್ತಿದೆ ಪ್ರವಾಸಿಗರ ದಂಡು, ಹೋಟೆಲ್ ಮಾಲೀಕರು ಹೇಳೋದೇನು?

15 ದಿನಗಳಿಂದ ಬಂಡಿಪಾಳ್ಯದ ಎಪಿಎಂಸಿ ಆವರಣದಲ್ಲಿ ಸ್ತಬ್ಧಚಿತ್ರಗಳ ತಯಾರಿ ನಡೆಯುತ್ತಿದ್ದು, ತಮಿಳು ನಾಡು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳ 500 ರಿಂದ 600 ಕಲಾವಿದರು ನಿರಂತರ ತಯಾರಿಕೆ ಕಾರ್ಯದಲ್ಲಿ ತೊಡಗಿದ್ದಾರೆ. ಅ.18ರ ಸಂಜೆಯೊಳಗೆ ಎಲ್ಲವೂ ಅರಮನೆ ಆವರಣಕ್ಕೆ ಸೇರಲಿವೆ. ಈ ಕುರಿತ ವರರಿ ಇಲ್ಲಿದೆ ನೋಡಿ...

ತುಮಕೂರಿನಿಂದ ಶಿವಕುಮಾರ ಸ್ವಾಮೀಜಿ

ತುಮಕೂರಿನಿಂದ ಶಿವಕುಮಾರ ಸ್ವಾಮೀಜಿ

ಮೈಸೂರಿನಿಂದ ಗೋಲ್ಡನ್ ಟೆಂಪಲ್', ಉಡುಪಿಯಿಂದ ಪರಶುರಾಮನ ಸೃಷ್ಟಿಯ ತುಳುನಾಡು', ಧಾರಾವಾಡದಿಂದ ದ.ರಾ.ಬೇಂದ್ರೆ ಕಂಡ ಸಾಂಸ್ಕೃತಿಕ ನಗರಿ', ಹಾವೇರಿಯಿಂದ ರಾಣೆಬೆನ್ನೂರು ಅಭಯಾರಣ್ಯ- ಬಂಕಾಪುರ ನವಿಲುಧಾಮ', ಕಾರವಾರದ ಸಿದ್ದಿ ಬುಡಕಟ್ಟು', ತುಮಕೂರಿನಿಂದ ಶಿವಕುಮಾರ ಸ್ವಾಮೀಜಿ', ಚಾಮರಾಜನಗರ ಜಿಲ್ಲೆಯಿಂದ ಹಿಮವದ್ ಗೋಪಾಲಸ್ವಾಮಿ ಬೆಟ್ಟ', ಮಂಡ್ಯದಿಂದ ಕೃಷ್ಣರಾಜಸಾಗರ ಅಣೆಕಟ್ಟು' ಬಿಂಬಿಸುವ ಸ್ತಬ್ಧ ಚಿತ್ರಗಳು ಮೆರಣಿಗೆಯಲ್ಲಿ ಪ್ರದರ್ಶನಗೊಳ್ಳಲಿವೆ.

 ವಿಜಾಪುರದಿಂದ ಗೋಲ್ ಗುಂಬಜ್'

ವಿಜಾಪುರದಿಂದ ಗೋಲ್ ಗುಂಬಜ್'

ವಿಜಾಪುರ ದಿಂದ ಗೋಲ್ ಗುಂಬಜ್', ಗದಗ್ ನಿಂದ ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ ಮರದ ಮರು ಬಿತ್ತನೆ', ಬೀದರ್ ಜಿಲ್ಲೆಯಿಂದ ಬಸವಣ್ಣ ನವರ ಅನುಭವ ಮಂಟಪ', ರಾಯಚೂರಿನಿಂದ ಶಾಖೋತ್ಪನ್ನ ವಿದ್ಯುತ್ ಘಟಕ' ಬಳ್ಳಾರಿಯಿಂದ ತುಂಗಭದ್ರಾ ಅಣೆಕಟ್ಟು', ಬೆಳಗಾವಿಯಿಂದ ಕಿತ್ತೂರು ರಾಣಿ ಚೆನ್ನಮ್ಮನ ಸ್ವಾತಂತ್ರ್ಯ ಸಂಗ್ರಾಮ, ಬಾಗಲಕೋಟೆಯಿಂದ ಪಟ್ಟದಕಲ್ಲು ಹಾಗೂ ಕೂಡಲ ಸಂಗಮ', ಬೆಂಗಳೂರು ಗ್ರಾಮಾಂತರದಿಂದ ದೇವನಹಳ್ಳಿ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ' ಬಿಂಬಿಸುವ ಸ್ತಬ್ಧ ಚಿತ್ರಗಳು ಮೆರಣಿಗೆಯಲ್ಲಿ ಪ್ರದರ್ಶನಗೊಳ್ಳಲಿವೆ.

ಈ ಬಾರಿ ಜಂಬೂ ಸವಾರಿ ವೀಕ್ಷಕರು ಟೋಪಿಯನ್ನು ಧರಿಸಲೇಬೇಕು!ಈ ಬಾರಿ ಜಂಬೂ ಸವಾರಿ ವೀಕ್ಷಕರು ಟೋಪಿಯನ್ನು ಧರಿಸಲೇಬೇಕು!

 ಕೊಡಗಿನಿಂದ ಪ್ರವಾಸೋದ್ಯಮ'

ಕೊಡಗಿನಿಂದ ಪ್ರವಾಸೋದ್ಯಮ'

ಬೆಂಗಳೂರು ನಗರ ತ್ಯಾಜ್ಯ ವಿಲೇವಾರಿ ನಂತರದ ಸ್ವಚ್ಛತೆ', ಚಿಕ್ಕಮಗಳೂರಿನಿಂದ ಭೂತಾಯಿ ಕಾಫಿ ಕನ್ಯೆ', ಕಲಬುರ್ಗಿಯಿಂದ ನೂತನ ವಿಮಾನ ನಗರಿ' ದಾವಣಗೆರೆಯಿಂದ ಸ್ಮಾರ್ಟ್ ಸಿಟಿ ಹಾಗೂ ಗ್ಲಾಸ್ ಹೌಸ್', ಯಾದವಗಿರಿಯಿಂದ ಬಂಜಾರ ಸಂಸ್ಕೃತಿ ಅನಾವರಣ, ಕೋಲಾರದಿಂದ ಗ್ರಾಮೀಣದೆಡೆಗೆ ಎಲ್ಲರ ನಡೆ', ಚಿತ್ರದುರ್ಗದಿಂದ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಸ್ಥಾನ', ರಾಮನಗರದಿಂದ ರಾಮನಗರ ರಾಮರ ಗುಡ್ಡವನ್ನು ಒಳಗೊಂಡ ಕೆಂಪೇಗೌಡ, ಕೊಪ್ಪಳ ಕನಕ ಚಲಪತಿ', ಮಂಗಳೂರಿನಿಂದ ಕಡಲ ದೇವರ ಸವಾರಿ', ಚಿಕ್ಕಬಳ್ಳಾಪುರದಿಂದ ವಿದುರಾಶ್ವಥ ಪುಣ್ಯಕ್ಷೇತ್ರ', ದಕ್ಷಿಣ ಕನ್ನಡ ಕೋಟೆ ಚೆನ್ನಯ್ಯ ತುಳುನಾಡ ವೀರರು', ಹಾಸನ ಹೊಯ್ಸಳ ನಾಡಿನ ಬೇಲೂರು ಶಿಲ್ಪಗಳ 900ರ ಸಂಭ್ರಮ', ಉತ್ತರ ಕನ್ನಡ ಸಿದ್ದಿ ಜನಾಂಗ ಹಾಗೂ ಪ್ರವಾಸಿತಾಣ ಯಾನ', ಕೊಡಗಿನಿಂದ ಪ್ರವಾಸೋದ್ಯಮ' ಬಿಂಬಿಸುವ ಸ್ತಬ್ಧ ಚಿತ್ರಗಳು ಮೆರಣಿಗೆಯಲ್ಲಿ ಪ್ರದರ್ಶನಗೊಳ್ಳಲಿವೆ.

 ಡಿಜಿಟಲ್ ತಂತಜ್ಞಾನದ ಶಿಕ್ಷಣ ಕುರಿತು ಸ್ತಬ್ಧಚಿತ್ರ

ಡಿಜಿಟಲ್ ತಂತಜ್ಞಾನದ ಶಿಕ್ಷಣ ಕುರಿತು ಸ್ತಬ್ಧಚಿತ್ರ

ಉನ್ನತ ಶಿಕ್ಷಣ ಇಲಾಖೆಯ 8 ವಿಶ್ವ ವಿದ್ಯಾನಿಲಯಗಳು ಸೇರಿ ಡಿಜಿಟಲ್ ತಂತಜ್ಞಾನದ ಶಿಕ್ಷಣ ಕುರಿತು ಸ್ತಬ್ಧಚಿತ್ರ ನೀಡುತ್ತಿದೆ. ಮೈಸೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಿ ಕಾನೂನು ಸೇವೆ'ಗಳ ಕುರಿತ ಮಾಹಿತಿ ನೀಡುತ್ತಿದೆ. ಸರ್ಕಾರದ ಸಾಧನೆಯೊಂದಿಗೆ ಕೃಷಿಗೆ ಉತ್ತೇಜನ ನೀಡಿರುವ ಆಶಯಗಳನ್ನು ವಾರ್ತಾ ಇಲಾಖೆ ಪರಿಚಯಿಸಲಿದೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಬ್ದುಲ್ ಕಲಾಂರನ್ನು ಒಳಗೊಂಡ ಸ್ತಬ್ಧಚಿತ್ರ ಸಾದರಪಡಿಸಲಿದೆ. ಸ್ತಬ್ಧಚಿತ್ರ ಉಪಸಮಿತಿಯೂ ಅಂಬೇಡ್ಕರ್ ಅವರನ್ನು ಒಳಗೊಂಡ ಆಡಳಿತ ವಿಕೇಂದ್ರಿಕರಣ ಸ್ತಬ್ಧಚಿತ್ರ ರೂಪಿಸಲಿದೆ. ಕಾವೇರಿ ನೀರಾವರಿ ನಿಗಮ ನಾವು ಜಲವನ್ನು ಉಳಿಸಿದರೆ, ಜಲ ನಮ್ಮನ್ನು ಉಳಿಸಲಿದೆ' ಎಂಬ ಆಶಯ ತಿಳಿಸಲಿದೆ.

ಕನ್ನಡ ಸಂಸ್ಕೃತಿ ಇಲಾಖೆ ಆನೆಗಾಡಿಯ ಮಾದರಿಯನ್ನು ಪ್ರದರ್ಶಿಸಲಿದೆ. ಉಳಿದಂತೆ ಶಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳಿಂದಲೂ ಸ್ತಬ್ಧಚಿತ್ರಗಳು ಇರಲಿವೆ.

ನೋಡ ಬನ್ನಿ ಪಾರಂಪರಿಕ ನಗರಿಯ ಝಗಮಗಿಸುವ ದೀಪಾಲಂಕಾರದ ಸೊಬಗುನೋಡ ಬನ್ನಿ ಪಾರಂಪರಿಕ ನಗರಿಯ ಝಗಮಗಿಸುವ ದೀಪಾಲಂಕಾರದ ಸೊಬಗು

English summary
Mysore city is ready for Jamboo Savari. This time there are a few attractions in the Dasara procession. Here is a brief report about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X