ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಚ್ಛ ನಗರಿ ಪಟ್ಟಕ್ಕೇರಲು ಮೈಸೂರು ಮೇಯರ್ ರಿಂದ ಮಾಸ್ಟರ್ ಪ್ಲಾನ್

By Yashaswini
|
Google Oneindia Kannada News

ಮೈಸೂರು, ನವೆಂಬರ್ 8: ಮೈಸೂರು ನಗರಕ್ಕೆ ಕಳೆದ ಬಾರಿ ಕೈ ತಪ್ಪಿದ ಸ್ವಚ್ಛನಗರಿ ಪಟ್ಟ ಬಾರಿ ನಂ.1ರ ಸ್ಥಾನಕ್ಕೇರಿಸಲೇಬೇಕು ಎಂದು ಪಣ ತೊಟ್ಟಿರುವ ಮೈಸೂರು ನಗರ ಪಾಲಿಕೆ ಆ ನಿಟ್ಟಿನಲ್ಲಿ ಈಗಲೇ ಕಾರ್ಯೋನ್ಮುಖವಾಗಿದೆ.

ಸ್ವಚ್ಛ ನಗರಿ ಪಟ್ಟ ಕೈ ತಪ್ಪಿದ್ದೇಕೆ? ಹೀಗಿದೆ ಜನಪ್ರತಿನಿಧಿಗಳ ಉತ್ತರಸ್ವಚ್ಛ ನಗರಿ ಪಟ್ಟ ಕೈ ತಪ್ಪಿದ್ದೇಕೆ? ಹೀಗಿದೆ ಜನಪ್ರತಿನಿಧಿಗಳ ಉತ್ತರ

ಪೌರ ಕಾರ್ಮಿಕರನ್ನು ಬಳಸಿಕೊಂಡು ನಗರದಾದ್ಯಂತ ಪತೀ ದಿನ ಕಸ ವಿಲೇವಾರಿ ಮಾಡುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡುತ್ತಿದೆ. ಮೈಸೂರು ನಗರ ಸತತ ಎರಡು ಬಾರಿ ದೇಶ ದಲ್ಲಿಯೇ ನಂ.1 ಸ್ವಚ್ಛ ನಗರಿ ಎಂದು ಬಿರುದು ಪಡೆದು ಬೀಗಿತ್ತು. ಆದರೆ, ಕೆಲವು ತಪ್ಪುಗಳಿಂದ ಮೂರನೇ ಬಾರಿ ನಂ.1 ಸ್ಥಾನ ಸಿಗದೆ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳ ಬೇಕಾಯಿತು. ಹೀಗಾಗಿ ನಗರಪಾಲಿಕೆ ಆಯುಕ್ತ ಜಿ.ಜಗದೀಶ್ ಅವರು ಹಿಂದಿನ ತಪ್ಪುಗಳನ್ನು ಪಟ್ಟಿ ಮಾಡಿಟ್ಟುಕೊಂಡು ಅದಕ್ಕೆ ಸೂಕ್ತ ಪರಿಹಾರ ಒದಗಿಸುವ ಮೂಲಕ ನಗರವನ್ನು ಮತ್ತೊಮ್ಮೆ ಸ್ವಚ್ಛತೆಯಲ್ಲಿ ನಂ.1 ಆಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ಅವರ ಈ ಕಾರ್ಯಕ್ಕೆ ಬಹುಮುಖ್ಯವಾಗಿ ಪೌರ ಕಾರ್ಮಿಕರು ಸಾಥ್ ನೀಡುತ್ತಿದ್ದಾರೆ.

Mysore city is now getting ready to regain 1st rank in cleanest city list in India.

ಮುಂಜಾನೆ 5 ಗಂಟೆಗೇ ನಗರ ವ್ಯಾಪ್ತಿಯ ಎಲ್ಲ ಬಡಾವಣೆಗಳಲ್ಲಿ ರಸ್ತೆಗಿಳಿಯುವ ಮೂಲಕ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗುವ ಪೌರ ಕಾರ್ಮಿಕರು ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿ ನಂತರ ಸಂಗ್ರಹಿಸಿದ ಕಸವನ್ನು ಒಂದೆಡೆ ಸೇರಿಸಿ ಘನ ತಾಜ್ಯ ನಿರ್ವಹಣಾ ಘಟಕಗಳಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಸ್ವಚ್ಛತಾ ಕಾರ್ಯದಲ್ಲಿ ಸಾರ್ವಜನಿಕರ ಸಹಭಾಗಿತ್ವದ ಕೊರತೆ ನಗರದ ಅನೇಕ ಕಡೆಗಳಲ್ಲಿ ಕಾಣಸಿಗುತ್ತದೆ.
ಇದು ನಮ್ಮ ನಗರ, ನಮ್ಮ ಮನೆಗಳ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂಬ ಜವಾಬ್ದಾರಿ ಇನ್ನೂ ಜನರಲ್ಲಿ ಮೂಡಿಲ್ಲ. ಪೌರ ಕಾರ್ಮಿಕರು ಕಸ ಸಂಗ್ರಹಣೆಗೆ ಮನೆಯ ಮುಂದೆಯೇ ಬಂದರೂ ಕಸ ನೀಡಲು ಸೋಮಾರಿತನ ತೋರುವ ಜನರು ತಾವು ಕಚೇರಿಗೆ ಅಥವಾ ಬೇರೆಲ್ಲಿಗಾದರೂ ತೆರಳುವ ಸಂದರ್ಭದಲ್ಲಿ ಸ್ಕೂಟರ್ ಅಥವಾ ಕಾರಿನಲ್ಲಿ ಕಸವನ್ನು ಹೊತ್ತೊಯ್ದು ರಸ್ತೆ ಬದಿಯಲ್ಲಿ ಎಸೆಯುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಸಾರ್ವಜನಿಕರು ಇಂತಹ ಪ್ರವೃತ್ತಿಯನ್ನು ಬಿಟ್ಟು ಸ್ವಚ್ಛತೆಗೆ ಸ್ಪಂದಿಸಿ, ಸಹಕರಿಸಿದರೆ ಸ್ಪರ್ಧೆ ವೇಳೆ ಮೈಸೂರು ನಗರ ಮತ್ತಷ್ಟು ಹೆಚ್ಚು ಅಂಕಗಳನ್ನು ಗಳಿಸಬಹುದು ಇದು ನಗರಪಾಲಿಕೆ ಸದಸ್ಯರಿಂದಾಗಬಹುದು ಎಂಬುದು ಬಹುತೇಕ ಸಾರ್ವಜನಿಕರ ಅನಿಸಿಕೆ

ಸ್ವಚ್ಛತಾ ಆ್ಯಪ್ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ:
ನಗರದ ಅನೇಕ ಬಡಾವಣೆ ಗಳಲ್ಲಿನ ಜನರಿಗೆ ಸ್ವಚ್ಛತಾ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಬಳಸುವುದು ಹೇಗೆ ಎಂಬುದೇ ಬಹುತೇಕ ಜನರಿಗೆ ತಿಳಿದಿಲ್ಲ. ಈ ಸಂಬಂಧ ಸ್ಥಳೀಯ ಜನಪತಿನಿಧಿಗಳು ಆ್ಯಪ್ ಬಳಕೆ ಬಗ್ಗೆ ಹಾಗೂ ಅದರಿಂದಾಗುವ ಅನುಕೂಲಗಳ ಬಗ್ಗೆ ಜನರಿಗೆ ಅರಿವು ಮೂಡಿಸಿದಲ್ಲಿ ಮತ್ತಷ್ಟು ಅಂಕಗಳನ್ನು ಪಡೆದುಕೊಳ್ಳಬಹುದು.

ಯುವ ಜನತೆ ಸ್ಪಂದಿಸಬೇಕಿದೆ:
ಸದಾ ಫೇಸ್‍ಬುಕ್, ವಾಟ್ಸಪ್ ಎಂದು ಅಂತರ್ಜಾಲ ದಲ್ಲಿ ಮುಳುಗುವ ಯುವಜನರಿಗೆ ಸ್ವಚ್ಛತಾ ಆ್ಯಪ್ ಬಗ್ಗೆ ನಿರಾಸಕ್ತಿ ಏಕೆ ಎಂಬುದೇ ಅರ್ಥವಾಗುತ್ತಿಲ್ಲ. ಅವರು ಮನಸ್ಸು ಮಾಡಿದಲ್ಲಿ ಆ್ಯಪ್ ಬಳಸುವ ಮೂಲಕ ಸ್ವಚ್ಛತಾ ಸ್ಪರ್ಧೆಗೆ ತಮ್ಮ ಕೊಡುಗೆಯನ್ನು ನೀಡಬಹುದು. ತಮ್ಮ ಬಡಾವಣೆಯಲ್ಲಿ ಸಾರ್ವ ಜನಿಕರು ಕಸ ಎಸೆದು ಹೋಗುವ ಫೋಟೋ ಕ್ಲಿಕ್ಕಿಸಿ ಆ್ಯಪ್ ಮೂಲಕ ನಗರಪಾಲಿಕೆ ಅಧಿಕಾರಿ ಗಳ ಗಮನಕ್ಕೆ ತರಬೇಕು. ಆ ಮೂಲಕ ಆ್ಯಪ್ ಬಳಕೆಗೆ ಮುಂದಾಗಬೇಕಿದೆ ಎಂದು ಆಯುಕ್ತರು ಹೇಳಿದ್ದಾರೆ.

English summary
Mysore city is now getting ready to regain 1st rank in cleanest city list in India. Civic workers are trying hard get the title back to the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X