ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಣ ಮರದ ರೆಂಬೆ ಕತ್ತರಿಸಲು ರಾಜ್ಯಕ್ಕೆ ಮೊದಲ ಬಾರಿಗೆ ದಾಂಗುಡಿಯಿಟ್ಟ ಹೈಡ್ರಾಲಿಕ್ ಮೆಷಿನ್

|
Google Oneindia Kannada News

ಮೈಸೂರು, ಜನವರಿ 23: ನಾವು ಸಾಮಾನ್ಯವಾಗಿ ರಸ್ತೆಗಳಲ್ಲಿ ನಡೆದು ಹೋಗುವಾಗ ಅಥವಾ ವಾಹನಗಳಲ್ಲಿ ಚಲಿಸುವಾಗ ಅಕ್ಕಪಕ್ಕ ಇರುವ ಬೃಹತ್ ಮರಗಳ ಒಣ ರೆಂಬೆ ಕೊಂಬೆಗಳು ಯಾವ ಕ್ಷಣದಲ್ಲಾದರೂ ಕೆಳಗೆ ಬೀಳಬಹುದು ಎಂಬ ಆತಂಕ ಕಾಡದೆ ಇರಲಾರದು. ಅದರಲ್ಲಿಯೂ ಗಾಳಿ ಏನಾದರೂ ಜೋರಾಗಿ ಬೀಸಿದರೆ ಅಲ್ಲಿ ಸಂಚರಿಸುವ ಬಹುತೇಕರು ಜೀವ ಭಯದಿಂದ ಹೆದರುವುದೇ ಸರಿ. ಅಂತಹ ಭೀತಿಯನ್ನು ನಿವಾರಿಸುವ ನಿಟ್ಟಿನಲ್ಲಿ ಮೈಸೂರು ಮಹಾನಗರ ಪಾಲಿಕೆ ದಿಟ್ಟ ಹೆಜ್ಜೆಯನ್ನಿಟ್ಟಿದೆ.

ಹೌದು, ಹಳೆಯ ಅಥವಾ ದೊಡ್ಡ ಮರಗಳು, ಒಣಗಿದ ರೆಂಬೆ - ಕೊಂಬೆಗಳನ್ನು ಅಪಾಯವಿಲ್ಲದೆ ತೆರವುಗೊಳಿಸುವುದಕ್ಕಾಗಿ ಅತ್ಯಾಧುನಿಕ ಹೈಡ್ರಾಲಿಕ್ ಯಂತ್ರವನ್ನು ಮೈಸೂರು ನಗರ ಪಾಲಿಕೆ ಖರೀದಿಸಿದೆ. ಇಂತಹ ಯಂತ್ರ ಬಳಕೆ ಇಡೀ ರಾಜ್ಯದಲ್ಲಿ ಬೇರೆ ಯಾವುದೇ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇಲ್ಲ ಎಂಬುದು ಗಮನಾರ್ಹ. ಹಾಗಾಗಿ ನಗರಪಾಲಿಕೆಯಲ್ಲಿ ಇದೊಂದು ವಿನೂತನ ಪ್ರಯೋಗವೇ ಸರಿ.

ಮಂಗಳೂರಿನಲ್ಲಿ ಬುಡಸಮೇತ ಮರ ಸ್ಥಳಾಂತರಕ್ಕೆ ಭಾರೀ ಪ್ರಶಂಸೆಮಂಗಳೂರಿನಲ್ಲಿ ಬುಡಸಮೇತ ಮರ ಸ್ಥಳಾಂತರಕ್ಕೆ ಭಾರೀ ಪ್ರಶಂಸೆ

ಈ ಯಂತ್ರವನ್ನು ಒಬ್ಬನೇ ವ್ಯಕ್ತಿ ನಿರ್ವಹಿಸಬಹುದು ಎಂಬುದು ಇನ್ನೊಂದು ವಿಶೇಷ. ಈ ಯಂತ್ರದಿಂದ ರೆಂಬೆಗಳನ್ನು ಯಾರಿಗೂ ಅಪಾಯವಿಲ್ಲದಂತೆ ಕತ್ತರಿಸಬಹುದು. ಇದರಿಂದ ಗರಿಷ್ಠ 30 ಅಡಿ ಎತ್ತರ ಇರುವ ವೃಕ್ಷದ ಕೊಂಬೆಗಳನ್ನು ನಿರಾಯಾಸವಾಗಿ ತೆರವುಗೊಳಿಸುವುದು ಸಾಧ್ಯ. ಜನನಿಬಿಡ ಸ್ಥಳಗಳಲ್ಲಿ ಮರಗಳ ಒಣ ಕೊಂಬೆಗಳನ್ನು ಕೂಡ ಅಪಾಯವಿಲ್ಲದೆ ಕತ್ತರಿಸಬಹುದು. ಇದಲ್ಲದೆ ಹೆಚ್ಚು ಎತ್ತರ ಇರುವ ಕಟ್ಟಡಗಳನ್ನು ಸ್ವಚ್ಛಗೊಳಿಸುವುದಕ್ಕೆ ಈ ಯಂತ್ರವನ್ನು ಬಳಸಬಹುದು.

Mysore city corporation has purchased a sophisticated hydraulic machine

ಸದ್ಯಕ್ಕೆ ಯಂತ್ರದ ಬಿಡಿಭಾಗಗಳನ್ನು ಮಾತ್ರ ಸಂಯೋಜಿಸಲಾಗಿದೆ. ಅತೀ ಶೀಘ್ರದಲ್ಲೇ ಕಾರ್ಯಾರಂಭವಾಗಲಿದೆ. ಇದೀಗ ಸ್ವಚ್ಛ ಸರ್ವೇಕ್ಷಣ ಸಂದರ್ಭದಲ್ಲೇ ಈ ಹೈಡ್ರಾಲಿಕ್ ಯಂತ್ರ ಬಂದಿದ್ದು, ಅದರ ಕಾರ್ಯವೂ ಸ್ವಚ್ಛ ಮೈಸೂರು ಪ್ರಶಸ್ತಿ ಗಳಿಸುವ ನಿಟ್ಟಿನಲ್ಲಿ ಉಪಯುಕ್ತವಾಗಲಿದೆ. ಏಕೆಂದರೆ, ಒಣಗಿದ ರೆಂಬೆಗಳನ್ನು ಕತ್ತರಿಸಿ ತೆಗೆಯುವುದರಿಂದ ಸ್ವಚ್ಛತಾ ಕಾರ್ಯಕ್ಕೂ ಕೈ ಜೋಡಿಸಿದಂತಾಗಲಿದೆ.

ಈ ಯಂತ್ರವು 360 ಡಿಗ್ರಿ ಕೋನದಲ್ಲಿ ಸಲೀಸಾಗಿ ತಿರುಗುವ ಸಾಮರ್ಥ್ಯ ಹೊಂದಿದೆ. ಇದನ್ನು ನಿಯಂತ್ರಿಸುವ ವ್ಯಕ್ತಿಯೇ ಯಂತ್ರದ ಸಹಾಯದಿಂದ ಮೇಲಕ್ಕೆ ತೆರಳಿ ಕೊಂಬೆಯನ್ನು ತೆರವುಗೊಳಿಸಲು ಅನುಕೂಲವಾಗುವಂತೆ ಯಂತ್ರವನ್ನು ತಯಾರಿಸಲಾಗಿದೆ.

ನಗರ ಪಾಲಿಕೆಯ ವಾಹನಗಳ ಕೆಲ ಚಾಲಕರಿಗೆ ಮಾತ್ರ ಚಾಲನೆ ಮತ್ತು ನಿರ್ವಹಣಾ ತರಬೇತಿಯನ್ನು ನೀಡಲಾಗುವುದು. ಸದ್ಯ ಯಂತ್ರವನ್ನು ಸರಬರಾಜು ಮಾಡಿರುವ ಕಂಪನಿಯ ಸಿಬ್ಬಂದಿಯೇ ಅದನ್ನು ನಿರ್ವಹಿಸುತ್ತಿದ್ದಾರೆ. ಯಂತ್ರ ದುರಸ್ತಿ ಮತ್ತು ನಿರ್ವಹಣೆ ಎರಡು ವರ್ಷಗಳವರೆಗೆ ಸದರಿ ಕಂಪನಿಯ ಜವಾಬ್ದಾರಿಯಾಗಿರುತ್ತದೆ. ಈ ಹೈಡ್ರಾಲಿಕ್ ಯಂತ್ರವನ್ನು ಗುಜರಾತ್ ರಾಜ್ಯದ ರಾಜ್ ಕೋಟ್ ನಿಂದ ತರಲಾಗಿದ್ದು, ಇದನ್ನು ಶಕ್ತಿಮಾನ್ ಮಲ್ಟಿ ಪರ್ಪಸ್ ಫ್ಲಾಟ್ ಫಾರಂ ಕಂಪನಿ ತಯಾರಿಸಿದೆ. ಯಂತ್ರದ ಅಧಿಕೃತ ಹೆಸರು ಅದೇ ಆಗಿದೆ. ಯಂತ್ರದ ಒಟ್ಟು ಮೊತ್ತ 21 ಲಕ್ಷವಾಗಿದೆ.

English summary
Mysore city corporation has purchased a sophisticated hydraulic machine to clear the old or large trees, dried twigs - branches without risk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X