ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಕೊವಿಡ್-19 ಭಯದಲ್ಲಿ ಸೋಂಕಿತ ಆತ್ಮಹತ್ಯೆ

|
Google Oneindia Kannada News

ಮೈಸೂರು, ಜುಲೈ.24: ಕೊರೊನಾವೈರಸ್ ಸೋಂಕಿಗೆ ಆತ್ಮವಿಶ್ವಾಸವೇ ಮದ್ದು ಎಂದು ಸಾಂಕ್ರಾಮಿಕ ರೋಗತಜ್ಞರ ಆದಿಯಾಗಿ ವಿಜ್ಞಾನಿಗಳೆಲ್ಲ ಸಲಹೆ ನೀಡುತ್ತಿದ್ದಾರೆ. ಆತ್ಮವಿಶ್ವಾಸ ಮತ್ತು ರೋಗ ನಿರೋಧಕ ಶಕ್ತಿ ಉಳ್ಳವರು ಕೊರೊನಾವೈರಸ್ ನಿಂದ ಗುಣಮುಖರಾಗುತ್ತಾರೆ.

Recommended Video

40 ಸಾವಿರ ಸೈನಿಕರಿಗೆ ಶಸ್ತ್ರಾಸ್ತ್ರ ಕೊಟ್ಟು ಕಳುಹಿಸಿದ ಚೀನಾ | Oneindia Kannada

ಕೊರೊನಾವೈರಸ್ ಸೋಂಕಿತರ ಒಟ್ಟು ಪ್ರಮಾಣದಲ್ಲಿ ಶೇ.63ಕ್ಕಿಂತ ಹೆಚ್ಚು ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಆದರೆ ಮೈಸೂರಿನಲ್ಲಿ ಕೊರೊನಾವೈರಸ್ ಸೋಂಕು ಅಂಟಿಕೊಂಡಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮೈಸೂರಿನ ಎನ್.ಆರ್ ಕ್ಷೇತ್ರದಲ್ಲಿ ಮೂರು ಕೋವಿಡ್ ಕೇಂದ್ರ ಆರಂಭಮೈಸೂರಿನ ಎನ್.ಆರ್ ಕ್ಷೇತ್ರದಲ್ಲಿ ಮೂರು ಕೋವಿಡ್ ಕೇಂದ್ರ ಆರಂಭ

ಮೈಸೂರಿನ ಜೆ.ಕೆ.ಟಯರ್ಸ್ ನಲ್ಲಿ ಕೊರೊನಾವೈರಸ್ ಸೋಂಕಿನ ತಪಾಸಣೆ ನಡೆಸಿದ ಸಂದರ್ಭದಲ್ಲಿ ಉದ್ಯೋಗಿಗೆ ಸೋಂಕು ತಗಲಿರುವುದು ದೃಢಪಟ್ಟಿತ್ತು. ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯು ಮನೆಯಲ್ಲೇ ಚಿಕಿತ್ಸೆ ಪಡೆಯುವುದಾಗಿ ನಿನ್ನೆಯಷ್ಟೇ ಆಸ್ಪತ್ರೆಯಿಂದ ವಾಪಸ್ ಆಗಿದ್ದರು.

Mysore: A Infected Man Suicide Due To Covid-19 Fear


ಕಳೆದ ರಾತ್ರಿ ಮನೆಯಲ್ಲಿ ನೇಣಿಗೆ ಶರಣು:

ಮೈಸೂರಿನ ಗೋಕುಲಂ ನಿವಾಸಕ್ಕೆ ಕಳೆದ ರಾತ್ರಿ ಆಸ್ಪತ್ರೆಯಿಂದ ವಾಪಸ್ಸಾದ ಕೊರೊನಾವೈರಸ್ ಸೋಂಕಿತ ವ್ಯಕ್ತಿಯು ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು, ಮೃತ ವ್ಯಕ್ತಿಯ ನಿವಾಸಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮೈಸೂರಿನ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Mysore: A Infected Man Suicide Due To Coronavirus Fear.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X