ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ಲಾಸ್ಟಿಕ್ ಮುಕ್ತ ನಗರವಾಗುವತ್ತ ಮೈಸೂರಿನ ಮತ್ತೊಂದು ಹೆಜ್ಜೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 13: ಸ್ವಚ್ಛ ನಗರ, ಪ್ಲಾಸ್ಟಿಕ್ ಮುಕ್ತ ನಗರವಾಗುವತ್ತ ಮೈಸೂರು ಮತ್ತೊಂದು ಹೆಜ್ಜೆ ಇಟ್ಟಿದೆ. ಇದಕ್ಕೆ ತಂತ್ರಜ್ಞಾನವನ್ನೂ ಜೊತೆಯಾಗಿಸಿಕೊಂಡಿದೆ. "ಮೈ ಕ್ಲೀನ್ ಸಿಟಿ" ಎಂಬ ಆಪ್ ನ ಹೊಸ ಆವೃತ್ತಿಯನ್ನು ಪರಿಚಯಿಸಲಾಗಿದ್ದು, ಮಹಾ ನಗರ ಪಾಲಿಕೆಯ ಕಚೇರಿ ಸಭಾಂಗಣದಲ್ಲಿ ಮೇಯರ್ ತಸ್ನೀಂ ಆಪ್ ನ ಹೊಸ ಆವೃತ್ತಿಯನ್ನು ಇಂದು ಬಿಡುಗಡೆ ಮಾಡಿದರು.

"ಆಡಳಿತವನ್ನು ಇನ್ನಷ್ಟು ಪಾರದರ್ಶಕ ಮತ್ತು ಜನಸ್ನೇಹಿಯಾಗಿಸಬೇಕೆಂಬುದು ಮಹಾನಗರ ಪಾಲಿಕೆಯ ಉದ್ದೇಶ. ಇದನ್ನು ಸಾಕಾರಗೊಳಿಸಲು ಹೊಸ ಆವೃತ್ತಿ ಬಿಡುಗಡೆ ಮಾಡಲಾಗುತ್ತಿದೆ. ಈ ಮೇಲ್ದರ್ಜೆಯ ಆಪ್‌ ಮುಖಾಂತರ ಜನರು ಅತೀ ಶೀಘ್ರವಾಗಿ ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ" ಎಂದು ಮಾಹಿತಿ ನೀಡಿದರು.

ಮೈಸೂರು 'ಸ್ವಚ್ಛನಗರಿ' ಪಟ್ಟ ಪಡೆಯಲು ಎಲ್ಲರೂ ಸಹಕರಿಸಿ:ಯಶ್ಮೈಸೂರು 'ಸ್ವಚ್ಛನಗರಿ' ಪಟ್ಟ ಪಡೆಯಲು ಎಲ್ಲರೂ ಸಹಕರಿಸಿ:ಯಶ್

ಈ ಸಂದರ್ಭ ಪಾಲಿಕೆಯ ಆಯುಕ್ತ ಗುರುದತ್ ಹೆಗಡೆ ಮಾತನಾಡಿ, "ಗೂಗಲ್ ಪ್ಲೇ ಸ್ಟೋರ್ ಮೂಲಕ My Clean City-Mysuru ಆಪ್ ಡೌನ್ ಲೋಡ್ ಮಾಡಿಕೊಳ್ಳಬಹುದು. ಹೊಸ ಆವೃತ್ತಿಯಲ್ಲಿ ಹಲವು ಜನಸ್ನೇಹಿ ಅಂಶಗಳನ್ನು ಸೇರ್ಪಡೆಗೊಳಿಸಲಾಗಿದೆ. ಹಿಂದಿನ ಆವೃತ್ತಿಯಲ್ಲಿ ಗುಂಡಿ ಬಿದ್ದಿರುವ ರಸ್ತೆ, ಘನತ್ಯಾಜ್ಯ ವಿಲೇವಾರಿ, ಬೀದಿ ದೀಪಗಳ ಸಮಸ್ಯೆ, ಕುಡಿಯುವ ನೀರಿನ ಪೈಪ್ ಲೈನ್ ದುರಸ್ತಿ, ಫುಟ್ ಪಾತ್ ಅಥವಾ ಪಾಲಿಕೆ ಆಸ್ತಿ ಒತ್ತುವರಿ, ಪ್ರಾಣಿಗಳ ಹಾವಳಿ ಕುರಿತು ದೂರುಗಳನ್ನು ನೀಡಬಹುದಿತ್ತು. ಇದೀಗ ನಿಷೇಧಿತ ಪ್ಲಾಸ್ಟಿಕ್ ಬಳಕೆಯ ಕುರಿತೂ ದೂರು ನೀಡಬಹುದು ಎಂದರು.

My Clean City Mysuru Step Towards Plastic Free City

ಪಾಲಿಕೆಯು ಮೈಸೂರನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡುವ ಗುರಿ ಹೊಂದಿದ್ದು ಇದಕ್ಕೆ ಪೂರಕವಾಗಿ 'ಮೈ ಕ್ಲೀನ್ ಸಿಟಿ' ಆಪ್ ಅನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ನಾಗರಿಕರು ನಿಷೇಧಿತ ಪ್ಲಾಸ್ಟಿಕ್ ಬಳಕೆ ಕುರಿತು ದೂರು ನೀಡಿದ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಬಳಕೆದಾರರ ವಿರುದ್ಧ ಕ್ರಮ ಜರುಗಿಸುವರು. ಪ್ಲಾಸ್ಟಿಕ್ ಮುಕ್ತ ನಗರ ನಿರ್ಮಾಣಕ್ಕೆ ಜನರು ನಗರ ಪಾಲಿಕೆಯೊಂದಿಗೆ ಕೈಜೋಡಿಸಲು ಈ ಆಪ್ ಸಹಕಾರಿಯಾಗಿದೆ ಎಂದರು.

ಸ್ವಚ್ಛ ಮೈಸೂರು ಕುರಿತು ಯದುವೀರ್ ವಿಡಿಯೋ ವೈರಲ್ಸ್ವಚ್ಛ ಮೈಸೂರು ಕುರಿತು ಯದುವೀರ್ ವಿಡಿಯೋ ವೈರಲ್

ಹೊಸ ಆವೃತ್ತಿಯಲ್ಲಿ ನೇರವಾಗಿ ದೂರು ವಾರ್ಡ್ ಅಧಿಕಾರಿಗೆ ತಲುಪುತ್ತದೆ. ಹೀಗಾಗಿ ನಾಗರಿಕರ ಸಮಸ್ಯೆಗಳಿಗೆ ಮತ್ತಷ್ಟು ವೇಗವಾಗಿ ಪರಿಹಾರ ನೀಡಬಹುದು. ಪ್ರತಿಯೊಂದು ಸಮಸ್ಯೆಗಳನ್ನು ಪರಿಹರಿಸಲು ಕಾಲಮಿತಿ ನಿಗದಿಪಡಿಸಲಾಗಿದೆ. ನಿಗದಿತ ಸಮಯದೊಳಗೆ ಸಮಸ್ಯೆ ಬಗೆಹರಿಸದೇ ಇದ್ದರೆ ವಲಯ ಅಧಿಕಾರಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ವಲಯ ಅಧಿಕಾರಿ ಹಂತದಲ್ಲೂ ಸಮಸ್ಯೆ ಬಗೆಹರಿಯದಿದ್ದರೆ ಇಲಾಖಾಧಿಕಾರಿ, ಆಯುಕ್ತರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು.

English summary
Mysuru city corporation has upgraded my clean city app to become plastic free city
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X