ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಡಾಗೆ ಇ-ಹರಾಜಿನಿಂದ 100 ಕೋಟಿ ರೂ ಆದಾಯ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 02: ಬಡಾವಣೆಗಳ ರಚನೆಗೆ ಸ್ವಾಧೀನಪಡಿಸಿಕೊಂಡ ಭೂಮಿಯ ರೈತರಿಗೆ ಪರಿಹಾರ ಕೊಡಲು ಸಾಧ್ಯವಾಗದೆ ಬಡ್ಡಿ ಕಟ್ಟುವಂತಹ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಿವೇಶನಗಳ ಇ-ಹರಾಜು ಪ್ರಕ್ರಿಯೆಯಿಂದ 100 ಕೋಟಿ ರೂ. ಆದಾಯ ಬರುವ ಮೂಲಕ ಟಾನಿಕ್ ಸಿಕ್ಕಿದಂತಾಗಿದೆ.

ಕಳೆದ ಹತ್ತು ವರ್ಷಗಳಿಂದ ವಿವಿಧ ಬಡಾವಣೆಗಳ ರಚನೆಗಾಗಿ ಸ್ವಾಧೀನಪಡಿಸಿಕೊಂಡಿರುವ 600ಕ್ಕೂ ಹೆಚ್ಚು ರೈತರಿಗೆ 202 ಕೋಟಿ ರೂ. ಹಣ ಪಾವತಿಸಲಾಗದೆ ಬಡ್ಡಿ ಪಾವತಿಸುತ್ತಿರುವ ಮುಡಾ ಆರ್ಥಿಕ ಸಮಸ್ಯೆಯಿಂದ ಪಾರಾಗಲು ದಾರಿಯಾಗಿದೆ.

Mysuru: Muda Got Income Of 100 Crores By E Bidding

ಮೈಸೂರು: ಮೂಡಾ ಸೈಟ್ ಮಾರಾಟಕ್ಕಿಟ್ಟವನ ಮೇಲೆ ಕ್ರಿಮಿನಲ್‌ ಕೇಸ್ಮೈಸೂರು: ಮೂಡಾ ಸೈಟ್ ಮಾರಾಟಕ್ಕಿಟ್ಟವನ ಮೇಲೆ ಕ್ರಿಮಿನಲ್‌ ಕೇಸ್

100 ಕೋಟಿ ಆದಾಯ: ನವೆಂಬರ್‌ 23, 24, 25, 26, 27 ಹಾಗೂ 28ರಂದು ನಡೆದ ಇ-ಹರಾಜಿನಲ್ಲಿ 87 ನಿವೇಶನಗಳು ಹರಾಜಾಗಿ, 73.57 ಕೋಟಿ ರೂ. ಮೌಲ್ಯದ ನಿವೇಶನಕ್ಕೆ 100.55 ಕೋಟಿ ರೂ.ಗಳಾಗಿ ಬಿಡ್ ಆಗಿದೆ. ನ.23ರಂದು 27 ನಿವೇಶನ ಹರಾಜುಗೊಂಡು 135 ಮಂದಿ ಭಾಗವಹಿಸಿದ್ದರಿಂದ 54.23 ಕೋಟಿ ರೂ. ಬಿಡ್ ಆಗಿದೆ. 24ರಂದು 30 ನಿವೇಶನ ಹರಾಜಾಗಿ, 222 ಮಂದಿ ಪಾಲ್ಗೊಂಡಿದ್ದರಿಂದ 21 ಕೋಟಿ ಮೌಲ್ಯದ ಆಸ್ತಿ 27 ಕೋಟಿ ಬಿಡ್ ಆಗಿದೆ. 25 ರಂದು 30 ನಿವೇಶನ ಹರಾಜಾಗಿ 325 ಮಂದಿ ಭಾಗವಹಿಸಿದ್ದರೆ, 12 ಕೋಟಿ ಬೆಲೆ ಬಾಳುವ ನಿವೇಶನ 18 ಕೋಟಿಗೆ ಹರಾಜಾಗಿದೆ. ಹೀಗಾಗಿ ಮುಡಾ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಸಾಧ್ಯವಾಗಿದೆ.

English summary
Mysuru development authority got income of 100 crores by e bidding of sites
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X