ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಂಟಿಬಿ ನಾಗರಾಜ್ ಆಪರೇಷನ್ ಕಮಲದಲ್ಲಿ ಹಣ ಪಡೆದಿಲ್ಲ: ಸಿದ್ದರಾಮಯ್ಯ

|
Google Oneindia Kannada News

Recommended Video

Ex CM Siddaramaiah gives shocking statement on MTB Nagaraj | Oneindia Kannada

ಮೈಸೂರು, ನವೆಂಬರ್ 21: 'ಆಪರೇಷನ್ ಕಮಲದಲ್ಲಿ ಎಂಟಿಬಿ ಹಣ ಪಡೆದಿಲ್ಲ, ಸಾಲ ನೀಡಿದ್ದಾರೆ, ಹೀಗೆ ಮಾಡಿದವರು ಇವರೊಬ್ಬರೇ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಉಪ ಚುನಾವಣೆ ಹತ್ತಿರ ಬಂದಂತೆ ಎಂಟಿಬಿ ನಾಗರಾಜ್ ಹಾಗೂ ಸಿದ್ದರಾಮಯ್ಯ ಒಂದಲ್ಲಾ ಒಂದು ವಿಚಾರಕ್ಕೆ ವಾಗ್ವಾದ ಮಾಡಿಕೊಳ್ಳುತ್ತಿದ್ದಾರೆ. ದಿನಕ್ಕೊಂದೊಂದು ಹೊಸ ಹೊಸ ಆರೋಪ, ಪ್ರತ್ಯಾರೋಪಗಳಿಗೆ ಸಾಕ್ಷಿಯಾಗುತ್ತಿದ್ದಾರೆ.

ಎಂಟಿಬಿ ನಾಗರಾಜ್ ಕೋಟ್ಯಧಿಪತಿಯಾಗಿದ್ದು ಹೇಗೆ?ಎಂಟಿಬಿ ನಾಗರಾಜ್ ಕೋಟ್ಯಧಿಪತಿಯಾಗಿದ್ದು ಹೇಗೆ?

'ಅನರ್ಹರ ಬಗ್ಗೆ ಜನರೇ ಚರ್ಚೆ ಮಾಡುತ್ತಿದ್ದಾರೆ, ಅವರು ಹಣದಾಸೆಗೆ ಹೋಗಿದ್ದಾರೆ ಅಂತಾ ಅವರೇ ಹೇಳುತ್ತಿದ್ದಾರೆ., ನಾನು ಪ್ರಚಾರದಲ್ಲಿ ಬರೀ ಪ್ರಶ್ನೆ ಕೇಳುತ್ತಿದ್ದೇನೆ. ಜನರಿಗೆ ಗೊತ್ತಾಗಿದೆ ಅವರೇ ಉತ್ತರ ಕೊಡುತ್ತಿದ್ದಾರೆ' ಎಂದರು.

''ಜನರು ಅನರ್ಹರನ್ನು ಸಹಿಸಲ್ಲ , ಜನರೇ ಅವರನ್ನ ಸೋಲಿಸುತ್ತಾರೆ, ಅನರ್ಹರು 15 ಜನವೂ ಸೋಲುತ್ತಾರೆ. ಇವರ ನಯ ವಿನಯದ ಸುಳ್ಳನ್ನು ಜನ ನಂಬಲ್ಲ''.

18 ತಿಂಗಳಲ್ಲಿ ಎಂಟಿಬಿ ನಾಗರಾಜ್ ಆಸ್ತಿ ಬೆಳೆದಿದ್ದು ಎಷ್ಟು ಗೊತ್ತೇ?18 ತಿಂಗಳಲ್ಲಿ ಎಂಟಿಬಿ ನಾಗರಾಜ್ ಆಸ್ತಿ ಬೆಳೆದಿದ್ದು ಎಷ್ಟು ಗೊತ್ತೇ?

ಹುಣಸೂರು ಉಪಚುನಾವಣೆ ಕುರಿತು ಮಾತಣಾಡಿದ ಅವರು, 'ಜಿ.ಟಿ ದೇವೇಗೌಡರ ಮನಸ್ಥಿತಿ ಹೇಗಿದೆ ಅಂತಾ ಮೊದಲು ಗೊತ್ತಾಗಬೇಕು. ಅವರು ಯಾವ ಕಾರಣಕ್ಕೆ ದೂರ ಇದ್ದಾರೆ ಎಂದು ತಿಳಿದುಕೊಳ್ಳುತ್ತೇನೆ. ನಂತರ ಜಿ‌.ಟಿ ದೇವೇಗೌಡರ ಜೊತೆ ಮಾತನಾಡುತ್ತೇನೆ. ಆಮೇಲೆ ನೀವು ವಿಶ್ಲೇಷಣೆ ಮಾಡಿಕೊಳ್ಳಿ' ಎಂದು ಹೇಳಿದರು.

ಆಪರೇಷನ್ ಕಮಲದಲ್ಲಿ ಎಂಟಿಬಿ ಹಣ ಪಡೆದಿಲ್ಲ

ಆಪರೇಷನ್ ಕಮಲದಲ್ಲಿ ಎಂಟಿಬಿ ಹಣ ಪಡೆದಿಲ್ಲ

ಆಪರೇಷನ್ ಕಮಲದಲ್ಲಿ ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಯಾವುದೇ ಹಣವನ್ನು ಪಡೆದಿಲ್ಲ. ಬದಲಾಗಿ ಹಣ ನೀಡಿದ್ದಾರೆ. ಹೀಗೆ ಪಕ್ಷಕ್ಕೆ ಹಣ ನೀಡಿದವರು ಇವರೊಬ್ಬರೇ ಎಂದು ಹೇಳಿದ್ದಾರೆ.

ಎಂಟಿಬಿ ಕಂಡರೆ ಯಡಿಯೂರಪ್ಪಗೆ ಪ್ರೀತಿ

ಎಂಟಿಬಿ ಕಂಡರೆ ಯಡಿಯೂರಪ್ಪಗೆ ಪ್ರೀತಿ

ಎಂಟಿಬಿ ಕಂಡರೆ ಮುಖ್ಯಮಂತ್ರಿ ಯಡಿಯೂರಪ್ಪಗೆ ಪ್ರೀತಿ, ಆದರೆ ಎಂಟಿಬಿಗೆ ಅವರು ಯಾವುದೇ ಹಣವನ್ನು ನೀಡಿಲ್ಲ, ಬದಲಾಗಿ ಹಣ ಪಡೆದುಕೊಂಡಿದ್ದಾರೆ.

ಸಾಲ ಪಡೆಯದೆ ಹೇಗೆ ವಾಪಸ್ ನೀಡಲಿ

ಸಾಲ ಪಡೆಯದೆ ಹೇಗೆ ವಾಪಸ್ ನೀಡಲಿ

ನಾನು ಎಂಟಿಬಿ ನಾಗರಾಜ್ ಅವರಿಂದ ಯಾವುದೇ ಸಾಲ ಪಡೆದಿಲ್ಲ, ಹೇಗೆ ವಾಪಸ್ ನೀಡಲಿ, ಕೃಷ್ಣಬೈರೇಗೌಡ ಸಾಲ ಪಡೆದಿದ್ದಾರೆ ವಾಪಸ್ ನೀಡಿದ್ದಾರೆ.

ಚುನಾವಣೆ ಪಾರದರ್ಶಕವಾಗಿ ನಡೆಯುತ್ತಿಲ್ಲ

ಚುನಾವಣೆ ಪಾರದರ್ಶಕವಾಗಿ ನಡೆಯುತ್ತಿಲ್ಲ

ಪಾರದರ್ಶಕವಾಗಿ ಚುನಾವಣೆ ನಡೆಯುತ್ತಿಲ್ಲ,ಕುಕ್ಕರ್ ಸೀರೆ ಫ್ರಿಡ್ಜಗಳನ್ನು ಹಂಚುತ್ತಿದ್ದಾರೆ.ಮಾರಾಟವಾದಾಗಲೂ ದುಡ್ಡು ಬಂದಿದೆ.ಚುನಾವಣೆಗೆ ಅಂತಾನೂ ದುಡ್ಡು ಬಂದಿದೆ.

ಯಡಿಯೂರಪ್ಪ ಬರೀ ಸುಳ್ಳು ಹೇಳುತ್ತಾರೆ. ಹಿಂದೆ ತಾಲ್ಲೂಕು ದತ್ತು ಪಡೆಯುವುದಾಗಿ ಹೇಳಿದ್ದರು. ಎಲ್ಲಿ ಪಡೆದರು ಇದು ಬರೀ ಚುನಾವಣಾ ಗಿಮಿಕ್.ಎಲ್ಲರನ್ನೂ ಗೆಲ್ಲಿಸುತ್ತೇನೆ ಅಂತಾರೆ ಯಡಿಯೂರಪ್ಪ. ಜನರನ್ನು ದಡ್ಡರನ್ನಾಗಿ ಮಾಡಲು ಸಾಧ್ಯವಿಲ್ಲ ಜನರಿಗೆ ಎಲ್ಲಾ ಗೊತ್ತಿದೆ ಎಂದು ಹೇಳಿದರು.

English summary
Hoskote BJP Candidate MTB Ngaraj has not received money in Operation Lotus and he has given money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X