ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು- ಮಂಡ್ಯ ಮಹಿಳೆಯರಿಗೆ ವಿಶೇಷ ರೈಲಿಗೆ ಸಂಸದೆ ಸುಮಲತಾ ಮನವಿ

|
Google Oneindia Kannada News

ಮೈಸೂರು, ಜೂನ್ 28: ಗಾರ್ಮೆಂಟ್ಸ್ ಫ್ಯಾಕ್ಟರಿ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗೆ ದಿನನಿತ್ಯ ಮೈಸೂರು- ಮಂಡ್ಯ - ಬೆಂಗಳೂರಿಗೆ ನೂರಾರು ಮಹಿಳೆಯರು ಸಂಚರಿಸುತ್ತಾರೆ. ಅವರಿಗೆಂದೇ ವಿಶೇಷ ರೈಲು ನೀಡಬೇಕು ಹಾಗೂ ಇರುವ ರೈಲಿನಲ್ಲಿ ಮತ್ತಷ್ಟು ಮಹಿಳಾ ಬೋಗಿಗಳನ್ನು ಅಳವಡಿಸಬೇಕು ಎಂದು ಕೇಂದ್ರ ರೈಲ್ವೆ ಸಚಿವರಾದ ಪಿಯೂಶ್ ಗೋಯಲ್ ಅವರಿಗೆ ಸಂಸದೆ ಸುಮಲತಾ ಮನವಿ ಮಾಡಿದ್ದಾರೆ.

 ಕಾವೇರಿ ನೀರು: ಸುಮಲತಾ ಮೇಲೆ ನಿಖಿಲ್ ಕುಮಾರಸ್ವಾಮಿ ವ್ಯಂಗ್ಯದ ಬಾಣ ಕಾವೇರಿ ನೀರು: ಸುಮಲತಾ ಮೇಲೆ ನಿಖಿಲ್ ಕುಮಾರಸ್ವಾಮಿ ವ್ಯಂಗ್ಯದ ಬಾಣ

ಪ್ರತಿದಿನ ಮೈಸೂರು- ಮಂಡ್ಯ-ಬೆಂಗಳೂರು ಭಾಗದಿಂದ ರೈಲಿನಲ್ಲಿ ಪ್ರಯಾಣ ಬೆಳೆಸುವ ಮಹಿಳೆಯರ ಅನುಕೂಲಕ್ಕೆ ಹೆಚ್ಚಿನ ಮಹಿಳಾ ಬೋಗಿಗಳನ್ನು ಅಳವಡಿಸಬೇಕು ಹಾಗೂ ಪೊಲೀಸ್ ಬಂದೋಬಸ್ತ್ ಒದಗಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಇದರೊಟ್ಟಿಗೆ ಮುಂಬೈ ಮಾದರಿಯಲ್ಲಿ ವಿಶೇಷ ಮಹಿಳಾ ರೈಲನ್ನು ಬೆಳಿಗ್ಗೆ ಮತ್ತು ಸಂಜೆ ಕೆಲಸಕ್ಕೆ ತೆರಳುವ ಮಹಿಳೆಯರ ಅನುಕೂಲಕ್ಕೆ ಬಿಡುವಂತೆ ಸುಮಲತಾರವರು ಕೇಳಿಕೊಂಡಿದ್ದಾರೆ.

MP Sumalatha appealed central railway minister for women special trains

ಕೆ.ಆರ್.ನಗರದಲ್ಲಿ ರೈಲ್ವೆ ಪೊಲೀಸ್ ಫೋರ್ಸ್ ತರಬೇತಿ ಕೇಂದ್ರವನ್ನು ತೆರೆಯಲು ಮನವಿ ಮಾಡಿದ್ದು, ಈ ತರಬೇತಿ ಕೇಂದ್ರದಿಂದ ಸ್ಥಳೀಯವಾಗಿ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯುವ ಸಾಧ್ಯತೆಗಳಿವೆ ಎಂದಿರುವ ಸುಮಲತಾ, ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರ ಪ್ರಯತ್ನಕ್ಕೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

English summary
Hundreds of women travel to Mysore-Mandya-Bangalore daily for various work tasks. So for the benefit of them, MP Sumalatha has appealed Union Railway Minister Piyush Goyal to grant special train and extra coaches for women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X