ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೀಘ್ರವೇ ಎರಡನೇ ಹಂತದ ಪರಿಹಾರ ಗ್ಯಾರಂಟಿ; ಶ್ರೀನಿವಾಸ್ ಪ್ರಸಾದ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್ 22: "ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಕೂಡಲೇ ಎರಡನೇ ಹಂತದ ಪರಿಹಾರ ನೀಡಲಿದೆ" ಎಂದು ಖಚಿತವಾಗಿ ಹೇಳಿದ್ದಾರೆ ಸಂಸದ ವಿ.ಶ್ರೀನಿವಾಸ್ ಪ್ರಸಾದ್. ಮುಖ್ಯಮಂತ್ರಿಗಳು ಹಾಗೂ ರಾಜ್ಯದ ಸಂಸದರು ಕೇಂದ್ರದ ಮೇಲೆ ಒತ್ತಡ ತಂದು ಹಣ ಬಿಡುಗಡೆ ಮಾಡಿಸಲಿದ್ದೇವೆ ಎಂದು ತಿಳಿಸಿದರು.

ಪ್ರವಾಹ ಪರಿಹಾರಕ್ಕಾಗಿ ಹೋರಾಟಕ್ಕಿಳಿದ ಎಚ್. ಡಿ. ದೇವೇಗೌಡಪ್ರವಾಹ ಪರಿಹಾರಕ್ಕಾಗಿ ಹೋರಾಟಕ್ಕಿಳಿದ ಎಚ್. ಡಿ. ದೇವೇಗೌಡ

Recommended Video

ಒಕ್ಕಲಿಗರ ಪ್ರತಿಭಟನಾ ರ‍್ಯಾಲಿಗೆ ಕುಮಾರಸ್ವಾಮಿ ಗೈರಾದ ಹಿಂದಿನ ಕಾರಣ ಬಯಲು | Oneindia Kannada

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈಗಾಗಲೇ ಕೇಂದ್ರ ಮೊದಲ ಹಂತದಲ್ಲೇ 1200 ಕೋಟಿ ರೂ ಹಣ ಬಿಡುಗಡೆ ಮಾಡಿದೆ. ಆ ಹಣವನ್ನು ರಾಜ್ಯ ಸರ್ಕಾರ ನಿರಾಶ್ರಿತರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಆದರೆ ನೆರೆಪರಿಹಾರ ವಿಚಾರದಲ್ಲಿ ವಿರೋಧ ಪಕ್ಷದವರು ವಿನಾ ಕಾರಣ ಟೀಕಿಸುತ್ತಿದ್ದಾರೆ. ರಾಜ್ಯ ಸರ್ಕಾರ ಸಂಪನ್ಮೂಲ ಕ್ರೋಢೀಕರಿಸಿ ಕೇಂದ್ರ ನೀಡಿದ ಪರಿಹಾರದ ಜೊತೆ ಹೆಚ್ಚಿನ ಹಣವನ್ನು ವಿತರಿಸುವ ಆಲೋಚನೆಯಲ್ಲಿದೆ. ನಿರಾಶ್ರಿತರು ಆತಂಕ ಪಡುವ ಪ್ರಮೇಯವಿಲ್ಲ" ಎಂದು ಭರವಸೆ ನೀಡಿದರು.

ಜನ ಕಣ್ಮುಚ್ಚಿ ಕುಳಿತಿಲ್ಲ ಎಂದು ಮೋದಿ ವಿರುದ್ಧ ಗರಂ ಆದ ಬಿಜೆಪಿ ಸಂಸದಜನ ಕಣ್ಮುಚ್ಚಿ ಕುಳಿತಿಲ್ಲ ಎಂದು ಮೋದಿ ವಿರುದ್ಧ ಗರಂ ಆದ ಬಿಜೆಪಿ ಸಂಸದ

ಹುಣಸೂರು ಉಪ ಚುನಾವಣಾ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದರು, "ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ನನ್ನದೇನೂ ಪಾತ್ರವಿಲ್ಲ. ರಾಜ್ಯದ ನಾಯಕರು ಹಾಗೂ ಸ್ಥಳೀಯ ನಾಯಕರು ಅಭ್ಯರ್ಥಿ ಯಾರೆಂದು ನಿರ್ಧರಿಸಲಿದ್ದಾರೆ. ಆದರೆ ಚುನಾವಣಾ ಪ್ರಚಾರದಲ್ಲಿ ಮಾತ್ರ ಸಕ್ರಿಯವಾಗಿ ಪಾಲ್ಗೊಂಡು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇನೆ" ಎಂದು ತಿಳಿಸಿದರು.

MP Srinivas Prasad Assured That Government Will Give 2nd Stage Relief Fund

ಮಹಾರಾಷ್ಟ್ರ ಹಾಗೂ ಹರಿಯಾಣ ಚುನಾವಣೆಯ ಸಮೀಕ್ಷೆ ವಿಚಾರ ಕುರಿತು ಪ್ರತಿಕ್ರಿಯಿಸಿ, "ಮಹಾರಾಷ್ಟ್ರ ಹಾಗೂ ಹರಿಯಾಣ ಸೇರಿದಂತೆ ದೇಶದಲ್ಲಿ ನಡೆಯುವ ಎಲ್ಲ ಉಪ ಚುನಾವಣೆಗಳಲ್ಲೂ ಬಿಜೆಪಿ ಭರ್ಜರಿ ಗೆಲುವು ದಾಖಲಿಸಲಿದೆ ಎಂದು ಎಲ್ಲಾ ಸಮೀಕ್ಷೆಗಳು ತಿಳಿಸಿವೆ. ಈ ಫಲಿತಾಂಶದಿಂದ ಬಿಜೆಪಿ ದೇಶದಲ್ಲಿ ಮತ್ತಷ್ಟು ಗಟ್ಟಿಗೊಳ್ಳಲಿದೆ. ಈ ಫಲಿತಾಂಶವು ದೇಶದ ಜನರ ಭಾವನೆಯಲ್ಲಿ ಬಿಜೆಪಿ ಇರುವ ಕುರಿತು ಸ್ಪಷ್ಟಪಡಿಸುತ್ತಿದೆ" ಎಂದರು.

English summary
MP V Srinivas Prasad assured that "the central government will soon provide a second level relief fund to the state government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X