ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಕಿಗಾಹುತಿಯಾದ ಇಸಾಕ್ ಗ್ರಂಥಾಲಯ, ನೆರವು ನೀಡಿದ ಸಂಸದ ಪ್ರತಾಪ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಏಪ್ರಿಲ್ 12: ಕಳೆದ ಶುಕ್ರವಾರ ಮೈಸೂರಿನ ರಾಜೀವನಗರದ 2ನೇ ಹಂತದಲ್ಲಿ ಪುಸ್ತಕ ಪ್ರೇಮಿ ಸೈಯದ್ ಇಸಾಕ್ ಅವರು ನಡೆಸುತ್ತಿದ್ದ ಕನ್ನಡ ಗ್ರಂಥಾಲಯ ಬೆಂಕಿಗಾಹುತಿಯಾದ ಸ್ಥಳಕ್ಕೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿದರು.

ಗ್ರಂಥಾಲಯ ಭಸ್ಮ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪ್ರತಾಪ್ ಸಿಂಹ, ""ಘಟನಾ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಸುಟ್ಟ ಪುಸ್ತಕಗಳನ್ನು ನೋಡಿ ಬೇಸರವಾಯಿತು. ಇದೇ ಸ್ಥಳದಲ್ಲಿ ಗ್ರಂಥಾಲಯ ಮರು ನಿರ್ಮಾಣಕ್ಕೆ ಸೈಯದ್ ಇಸಾಕ್ ಮನವಿ ಮಾಡಿದ್ದಾರೆ'' ಎಂದರು.

ಮೈಸೂರು: ಕನ್ನಡದ ಮೇಲಿನ ಪ್ರೀತಿಯಿಂದ ಸಯ್ಯದ್ ಇಸಾಕ್ ಸ್ಥಾಪಿಸಿದ್ದ ಗ್ರಂಥಾಲಯಕ್ಕೆ ಬೆಂಕಿ ಇಟ್ಟ ಹೃದಯಹೀನರುಮೈಸೂರು: ಕನ್ನಡದ ಮೇಲಿನ ಪ್ರೀತಿಯಿಂದ ಸಯ್ಯದ್ ಇಸಾಕ್ ಸ್ಥಾಪಿಸಿದ್ದ ಗ್ರಂಥಾಲಯಕ್ಕೆ ಬೆಂಕಿ ಇಟ್ಟ ಹೃದಯಹೀನರು

ಗ್ರಂಥಾಲಯಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳನ್ನು ಬಂಧಿಸಿ ತಕ್ಕ ಶಿಕ್ಷೆ ವಿಧಿಸುವಂತೆ ಸೈಯದ್ ಇಸಾಕ್ ಅವರು ಒತ್ತಾಯಿಸಿದ್ದಾರೆ ಎಂದ ಸಂಸದರು, ಗ್ರಂಥಾಲಯದ ಮರು ನಿರ್ಮಾಣಕ್ಕೆ ಸ್ನೇಹಿತರು ನೀಡಿದ 50 ಸಾವಿರ ರೂ. ಹಣವನ್ನು ಸೈಯದ್ ಇಸಾಕ್ ಅವರಿಗೆ ನೀಡಲಾಗಿದೆ ಎಂದರು.

MP Pratap Simha Visits Syed Isaaq Public Library after tragic incident

ಇದಕ್ಕೂ ಮುನ್ನ ಮೈಸೂರು ನಗರದ ಮೆಟ್ಟಗಳ್ಳಿಯಲ್ಲಿರುವ ಜಿಲ್ಲಾ ಆಸ್ಪತ್ರೆಗೆ ತೆರಳಿದ ಸಂಸದ ಪ್ರತಾಪ್ ಸಿಂಹ, ಕೊರೊನಾ ಮೊದಲ ಹಂತದ ಲಸಿಕೆ ಪಡೆದರು. ಇವರಿಗೆ ಡಿಎಚ್ಒ ಅಮರನಾಥ್ ಸಾಥ್ ನೀಡಿದರು.

English summary
In a tragic incident, miscreants have set ablaze a public library run by Syed Issaq in Mysuru. MP Pratap Simha visit and inspected. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X