ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಂಧದ ಜೊತೆ ಗುದ್ದಾಡುವೆ, ಹಂದಿ ಜೊತೆಯಲ್ಲ: ಸಂಸದ ಪ್ರತಾಪ್‌ಸಿಂಹ ಲೇವಡಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 29: ನಾನು ಮಾಜಿ ಸಿಎಂ ಸಿದ್ದರಾಮಯ್ಯ, ಡಾ.ಎಚ್. ಸಿ ಮಹದೇವಪ್ಪ ಜೊತೆ ಚರ್ಚೆಗೆ ಸಿದ್ಧನಿದ್ದೇನೆ. ಗುದ್ದಾಡಿದರೆ ಗಂಧದ ಜೊತೆ ಗುದ್ದಾಡಬೇಕು, ಹಂದಿಯ ಜೊತೆಯಲ್ಲ ಎಂದು ಸಂಸದ ಪ್ರತಾಪ್‌ಸಿಂಹ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಅವರಿಗೆ ಟಾಂಗ್ ನೀಡಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ವೀರರು ಶೂರರು ಕುದುರೆ ಏರಿ ಯುದ್ದಕ್ಕೆ ಬರುತ್ತಾರೆ. ನೀವು ಯಾಕೆ ಹಂದಿ ಏರಿ ಬರುವುದಕ್ಕೆ ಮುಂದಾಗಿದ್ದೀರಿ?‌ ನೀವು ನನ್ನ ಜೊತೆ ಚರ್ಚೆಗೆ ಹಂದಿಯನ್ನು ಕಳಿಸಿದ್ದೀರಿ, ಅದಕ್ಕೆ ನಾವು ಹಂದಿ ಹೊಡೆಯುವವರನ್ನು ಕಳಿಸಿದ್ದೇವೆ. ಹಂದಿ ಹೊಡೆದು ಬಾ ಹೋಗು ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನನ್ನೇ ಕಳುಹಿಸಿದ್ದೇವೆ, ಅವರು ಹಂದಿ ಹೊಡೆದು ಬಂದಿದ್ದಾರೆ," ಎಂದು ಲೇವಡಿ ಮಾಡಿದರು.

ಉದಯ್‌ಪುರ ಪ್ರಕರಣ: ಗೆಹ್ಲೋಟ್ ಸರ್ಕಾರದ ವಿರುದ್ಧ ವಸುಂಧರಾ ರಾಜೆ ವಾಗ್ದಾಳಿಉದಯ್‌ಪುರ ಪ್ರಕರಣ: ಗೆಹ್ಲೋಟ್ ಸರ್ಕಾರದ ವಿರುದ್ಧ ವಸುಂಧರಾ ರಾಜೆ ವಾಗ್ದಾಳಿ

ಡಾ ಮಹದೇವಪ್ಪ ನಿಮಗೆ ಈಗ ಏನು ಕೆಲಸ ಇದೆ ಹೇಳಿ ಸರ್ ? ನೀವು ಯಾಕೆ ಚರ್ಚೆಗೆ ಬರಬಾರದು, ನೀವು ಬನ್ನಿ ಚರ್ಚೆಗೆ, ಮೈಸೂರು-ಬೆಂಗಳೂರು ರಸ್ತೆಗೆ 9 ಪೈಸೆ ನೀವು ಕೊಟ್ಟಿದ್ದರೂ ಬನ್ನಿ ಚರ್ಚೆ ಮಾಡೋಣ. ಖಾಲಿಯಾಗಿ ಕೂತಿದ್ದೀರಿ, ಒಳ್ಳೆಯ ಚರ್ಚೆ ಮಾಡೋಣ ಬನ್ನಿ ಎಂದು ವ್ಯಂಗ್ಯವಾಡಿದ್ದಾರೆ.

 ಮೂಲಭೂತವಾದಿಗಳಿಂದ ದೇಶದ ಶಾಂತಿ ಕೆಡಿಸುವ ಕೆಲಸ

ಮೂಲಭೂತವಾದಿಗಳಿಂದ ದೇಶದ ಶಾಂತಿ ಕೆಡಿಸುವ ಕೆಲಸ

ನೂಪುರ್ ಶರ್ಮಾ ಬೆಂಬಲಿಸಿದ ವ್ಯಕ್ತಿಯನ್ನು ಹತ್ಯೆಗೈದ ವಿಚಾರದ ಬಗ್ಗೆ ಮಾತನಾಡಿದ ಅವರು,‌ ಈ ಹತ್ಯೆ ಪೈಶಾಚಿಕವಾದ ಕೊಲೆಯಾಗಿದೆ.‌ ಮುಸ್ಲಿಂ ಮೂಲಭೂತವಾದಿಗಳಿಂದ ದೇಶದ ಶಾಂತಿ ಕೆಡಿಸುವ ಯತ್ನ ಇದಾಗಿದೆ. ದನಗಳ್ಳರಿಗೆ ಎರಡೇಟು ಬಿದ್ದರೂ ಆಕಾಶ ಭೂಮಿ ಒಂದಾಗುವ ರೀತಿ ಬೊಬ್ಬೆ ಹಾಕುವವರು ಈಗ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ? ಬ್ರದರ್ ಬ್ರದರ್ ಎಂದು ಹೇಳುವ ಕಾಂಗ್ರೆಸ್ ನಾಯಕ ಈಗ ಯಾವ ಬಿಲದಲ್ಲಿ ಅಡಗಿದ್ದಾರೆ.‌‌ ಟ್ವೀಟ್ ಮಾಡಿ ಮನೆಯೊಳಗೆ ಕುಳಿತರೆ ಮುಗಿತಾ ನಿಮ್ಮ ಕೆಲಸ? ಎಂದು ಆಕ್ರೋಶ ಹೊರಹಾಕಿದರು.

ಉದಯಪುರ ಕನ್ಹಯ್ಯಾ ಲಾಲ್ ಪ್ರಕರಣ: ಇಬ್ಬರ ಬಂಧನಉದಯಪುರ ಕನ್ಹಯ್ಯಾ ಲಾಲ್ ಪ್ರಕರಣ: ಇಬ್ಬರ ಬಂಧನ

 ಟಿಪ್ಪು ಸುಲ್ತಾನ್‌ ಪರ ಮಾತನಾಡುತ್ತಿದ್ದವರೆಲ್ಲಿ

ಟಿಪ್ಪು ಸುಲ್ತಾನ್‌ ಪರ ಮಾತನಾಡುತ್ತಿದ್ದವರೆಲ್ಲಿ

ಕರ್ನಾಟಕದಲ್ಲೂ ಕಾಂಗ್ರೆಸ್ ಗೆ ಅಧಿಕಾರ ಕೊಟ್ಟರೆ ರಾಜಸ್ಥಾನದ ಘಟನೆ ಕರ್ನಾಟಕದಲ್ಲೂ ಆಗುತ್ತದೆ, ಇದು ರಾಜ್ಯದ ಜನರಿಗೆ ಎಚ್ಚರಿಕೆ ಗಂಟೆಯಾಗಿದೆ. ಟಿಪ್ಪು ಸಂತತಿಗಳ ಬಗ್ಗೆ ಮತದಾರರು ಜಾಗೃತರಾಗಿರಬೇಕು.‌ ರಾಜಸ್ಥಾನ ಸರ್ಕಾರದ ಮೇಲೆ ನನಗೆ ವಿಶ್ವಾಸವಿಲ್ಲ. ಭೀತಿ ಸೃಷ್ಟಿಸಿ ಹಿಂದೂಗಳ ಧ್ವನಿ ಅಡಗಿಸಲು ಈ ಕೃತ್ಯ ನಡೆದಿದೆ. ಈ ಕೃತ್ಯದ ಹಿಂದೆ ಕಾಂಗ್ರೆಸ್ ಇದೆ, ಕಾಂಗ್ರೆಸ್ ನವರ ಮುಸ್ಲಿಂ ಓಲೈಕೆಯಿಂದ ಈ ರೀತಿ ನಡೆಯುತ್ತಿದೆ. ಸಿದ್ದರಾಮಯ್ಯ ರಾಜಸ್ಥಾನ ಸರ್ಕಾರಕ್ಕೆ ಸ್ವಲ್ಪ ಬುದ್ದಿ ಹೇಳುತ್ತೀರಾ ಸರ್ ಎಂದು ಹೇಳಿದರು.

 ಪ್ರಜ್ಞಾವಂತಾ ಮುಸ್ಲಿಮರೆಲ್ಲಾ ಮೌನವಾಗಿರುವುದೇಕೆ

ಪ್ರಜ್ಞಾವಂತಾ ಮುಸ್ಲಿಮರೆಲ್ಲಾ ಮೌನವಾಗಿರುವುದೇಕೆ

ಯಾವಾಗಲೂ ಮುಸ್ಲಿಮರೆಲ್ಲರೂ ಭಯೋತ್ಪಾದಕರಲ್ಲಎಂದು ಕೆಲವು ಹೇಳುತ್ತಾರೆ. ಆದರೆ ಭಯೋತ್ಪಾದಕರೆಲ್ಲಾ ಮುಸ್ಲಿಮರೇ ಅಂತಾ ಕೆಲವರು ಹೇಳುತ್ತಾರೆ. ಒಳ್ಳೆಯ ಮುಸ್ಲಿಮರು ಇದ್ದಾರಲ್ಲಾ ಅವರು ಈಗ ಯಾಕೆ ಈಗ ಮಾತಾಡ್ತಿಲ್ಲ? ನಿಮ್ಮೊಳಗಿರುವ ಮತಾಂಧರನ್ನ, ದೇಶದ್ರೋಹಿಗಳನ್ನು ಏಕೆ ಮಟ್ಟ ಹಾಕುಲು ಪ್ರಯತ್ನಿಸುತ್ತಿಲ್ಲ. ಒಳ್ಳೆಯ ಮುಸ್ಲಿಮರು ಎನಿಸಿಕೊಂಡವರು ‌ಮೌನವಾಗಿದ್ದುಕೊಂಡು ಇಂತಹ ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮುಕು ಕೊಡುತ್ತಿದ್ದಾರಾ? ಈಗಲೂ ನೀವು ಧ್ವನಿ ಎತ್ತದಿದ್ದರೆ ನಿಮ್ಮ ಮೇಲೂ ಅನುಮಾನ ಮೂಡುತ್ತದೆ ಎಂದು ಹೇಳಿದರು.

 ಕಾಂಗ್ರೆಸ್‌ ಓಲೈಕೆಯೇ ಇಂತಹ ದುಸ್ಥಿತಿಗೆ ಕಾರಣ

ಕಾಂಗ್ರೆಸ್‌ ಓಲೈಕೆಯೇ ಇಂತಹ ದುಸ್ಥಿತಿಗೆ ಕಾರಣ

ಮುಸ್ಲಿಮರನ್ನು ಕಾಂಗ್ರೆಸ್ ಓಲೈಸುತ್ತಿರುವುದೇ ದೇಶದಲ್ಲಿ ಇಂತಹ ದುಸ್ಥಿತಿ ನಿರ್ಮಾಣವಾಗಲು ಕಾರಣ. ಸ್ವಾತಂತ್ರ್ಯ ಬಂದಾದಾಗ ಅವರನ್ನು ದೇಶದಲ್ಲಿ ಉಳಿಸಿಕೊಂಡರು. ಅವರನ್ನು ಇಲ್ಲಿಯವರೆಗೆ ಕುಮ್ಮಕ್ಕು ಕೊಡುತ್ತಿರುವವರೂ ಕಾಂಗ್ರೆಸ್‌. ಈ ಘಟನೆ ನಡೆದಿರುವುದು ಕಾಂಗ್ರೆಸ್‌ ಸರಕಾರ ಇರುವ ರಾಜ್ಯದಲ್ಲಿ, ಕಾಂಗ್ರೆಸ್‌ ಎಲ್ಲಿಲ್ಲಿ ಅಧಿಕಾರ ಇದಿಯೋ ಅಲ್ಲಿ ಮುಸ್ಲಿಂ ಮೂಲಭೂತವಾದಿಗಳಿಗೆ ರಕ್ಷಣೆಯಿದೆ ಎನ್ನುವುದು ಅವರಿಗೆ ತಿಳಿದಿದೆ. ರಾಜಸ್ಥಾನ ಇರಬಹುದು ಅಥವಾ ಮಹಾರಾಷ್ಟ್ರದಲ್ಲಿರಬಹುದು, ನಮ್ಮ ಕಣ್ಣೆದುರಿಗೆ ಘಟನೆಗಳು ನಡೆಯುತ್ತಿವೆ ಎಂದು ಕಾಂಗ್ರೆಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

English summary
Mysuru MP Pratap Simha Outraged against Congress Spokesperson M Lakshman. He said we have to fight with sandalwood not with pig.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X