• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಂಪು ತಂಪು ಐಸ್ ಬಗ್ಗೆ ನೈಸ್ ಅಲ್ಲದ ಕೆಲವು ಸಂಗತಿಗಳು

|

ಮೈಸೂರು, ಏಪ್ರಿಲ್ 25:ಎಲ್ನೋಡಿದ್ರೂ ಬಿಸಿಲು, ಧಗೆ, ಈ ಬಿಸಿಲಲ್ಲಿ ಯಾರ್ರೀ ಬಿಸಿಯಿರುವ ಆಹಾರವನ್ನು ಸೇವಿಸುತ್ತಾರೆ. ತಣ್ಣಗಿರುವ ಯಾವುದಾದರೂ ಪದಾರ್ಥ ಕೊಡಿ ಎಂದು ಹೇಳುವುದು ಸಾಮಾನ್ಯ. ಕಬ್ಬಿನ ಹಾಲಿಗೆ ಸ್ವಲ್ಪ ಐಸ್ ಹಾಕಿಯೋ ಅಥವಾ ಐಸ್ ಹಾಕಿರುವ ಸೋಡಾ, ಐಸ್ ಹಾಕಿರುವ ಜ್ಯೂಸ್ ಹೀಗೆಯೇ ನಮ್ಮ ನಾಲಿಗೆ ರುಚಿ ಬಯಸುವುದು ಸಾಮಾನ್ಯ.

ಹೀಗೆ ಐಸ್ ಮಿಶ್ರಿತ ಕಬ್ಬಿನಹಾಲು, ಹಣ್ಣಿನ ಜ್ಯೂಸ್ ಅಥವಾ ನಿಂಬೆ ಜ್ಯೂಸ್ ಕುಡಿದರೆ ದೇಹಕ್ಕೆ ತಂಪಾದ ಅನುಭೂತಿ ಆಗುತ್ತದೆ. ಸುಡು ಬಿಸಿಲಿನ ಆಯಾಸದ ನಡುವೆಯೂ ನಿರಾಳಭಾವ ಮೂಡುತ್ತದೆ. ಆದರೆ, ಐಸ್ ಫ್ಯಾಕ್ಟರಿಗಳಲ್ಲಿ ಐಸ್ ಹೇಗೆ ತಯಾರು ಆಗುತ್ತದೆ ಎಂಬುದನ್ನು ಕಣ್ಣಾರೆ ಕಂಡು, ಸೂಕ್ಷ್ಮವಾಗಿ ಅರಿತುಕೊಂಡರೆ ಬಾಯಿಯೊಳಗಿನ ಐಸ್ ಬಿಸಿ ಆಗುವುದಲ್ಲದೇ ಗಂಟಲಿನಿಂದ ಸುಲಭವಾಗಿ ಇಳಿದು ಹೋಗುವುದಿಲ್ಲ.

ಕಾಮತರ ಎಳನೀರು 'ಮಲಾಯಿ ಐಸ್ ಕ್ರೀಮ್'ಗೆ ಮಾರು ಹೋದ ಮಂಗಳೂರಿಗರು

ಹೌದು, ಐಸ್ ಅನ್ನು ಕೊಳವೆಬಾವಿ ನೀರಿನಿಂದ ಸಿದ್ಧಪಡಿಸಲಾಗಿದೆಯೇ ಅಥವಾ ಪಾಲಿಕೆ ಪೂರೈಸುವ ನೀರಿನಿಂದ ತಯಾರಿಸಲಾಗಿದೆಯೇ ಎಂಬುದು ಸ್ಪಷ್ಟವಿರುವುದಿಲ್ಲ. ಕೇಂದ್ರ ಸರ್ಕಾರವು ಸೂಚಿಸಿದ ಐಎಸ್ಐ ನಿಯಮಾವಳಿ ಐಸ್ ಫ್ಯಾಕ್ಟರಿಗಳಲ್ಲಿ ಪಾಲನೆಯಾಗುತ್ತಿದೆಯೇ ಎಂಬುದರ ಬಗ್ಗೆ ಖಚಿತ ಮಾಹಿತಿ ಇರುವುದಿಲ್ಲ.

ಅಷ್ಟೇ ಅಲ್ಲ, ಐಸ್ ಸಂಪೂರ್ಣ ಶುದ್ಧವಾಗಿದ್ದು, ಬಳಸಲು ಯೋಗ್ಯವಾಗಿದೆಯೇ ಎಂಬುದು ಕೂಡ ಖಾತ್ರಿ ಇರುವುದಿಲ್ಲ. ಮೈಸೂರಿನಲ್ಲಿ ಅನೇಕ ಐಸ್ ಫ್ಯಾಕ್ಟರಿಗಳಿವೆ. ಅವುಗಳ ಒಳಹೊಕ್ಕು ನೋಡಿದರೆ, ಒಂದಿಲ್ಲೊಂದು ಸಮಸ್ಯೆ ಕಾಣಸಿಗುತ್ತದೆ.

ಮಂಗಳೂರಿನ ಐಡಿಯಲ್ ಐಸ್‍ಕ್ರೀಂಗೆ 'ಬೆಸ್ಟ್ ಇನ್ ಇಂಡಿಯಾ' ಪ್ರಶಸ್ತಿ

ಸೀಮಿತ ಸ್ಥಳಾವಕಾಶದಲ್ಲೇ ಸಣ್ಣಪುಟ್ಟ ವ್ಯವಸ್ಥೆ ಮಾಡಿಕೊಂಡು ಒಂದೆಡೆ ಐಸ್ ತಯಾರಾದರೆ, ಇನ್ನೊಂದೆಡೆ ಸಮರ್ಪಕ ರೀತಿಯಲ್ಲಿ ಐಸ್ ಸಾಗಣೆ ಮತ್ತು ವಿತರಣೆ ಮಾಡುವುದೇ ದೊಡ್ಡ ಸವಾಲು. ಇವೆಲ್ಲದರ ಮಧ್ಯೆ ಸೌಕರ್ಯಗಳ ಕೊರತೆ ಮತ್ತು ನಿಯಮಗಳ ಪರಿಪಾಲನೆ ಸರಿಯಾಗಿ ಆಗದಿರುವುದೂ ಕಂಡು ಬರುತ್ತದೆ.

 ಆ ನೀರು ಶುದ್ಧವಾಗಿ ಇರುವುದಿಲ್ಲ

ಆ ನೀರು ಶುದ್ಧವಾಗಿ ಇರುವುದಿಲ್ಲ

ಕೊಳವೆ ಬಾವಿಯಿಂದ ದೊರೆಯುವ ಶುದ್ಧ ನೀರನ್ನೇ ಬಳಸುತ್ತೇವೆ ಎಂದು ಐಸ್ ಫ್ಯಾಕ್ಟರಿಯವರು ಎಷ್ಟೇ ಹೇಳಿದರೂ ಐಸ್‌ನ ಬಣ್ಣ ಮತ್ತು ಗುಣಮಟ್ಟ ಪರಿಶೀಲಿಸಿದಾಗ ವಾಸ್ತವಾಂಶ ಬೆಳಕಿಗೆ ಬರುತ್ತದೆ. ಐಸ್ ಸಂಪೂರ್ಣ ಬೆಳ್ಳಗಿದ್ದರೆ ಕೊಳವೆಬಾವಿ ನೀರು, ಕೊಂಚ ಹಳದಿಯಾಗಿದ್ದರೆ ಪಾಲಿಕೆ ನೀರು ಬಳಸಲಾಗಿದೆ ಎಂದರ್ಥ. ಪಾಲಿಕೆಯ ನೀರು ಕೆಂಪು ಬಣ್ಣದಿಂದ ಕೂಡಿರುತ್ತದೆ. ಅಲ್ಲದೇ ಪೂರ್ಣಪ್ರಮಾಣದ ಶುದ್ಧತೆಯೂ ಕಾಯ್ದುಕೊಂಡಿರುವುದಿಲ್ಲ. ಬಳಕೆಗೆ ಮಾತ್ರ ಯೋಗ್ಯವಾದ ಐಸ್‌ ಅನ್ನು (ನಾನ್ ಎಡಿಬಲ್) ಕುಡಿಯಲು ಯೋಗ್ಯವಲ್ಲದ ನೀರಿನಿಂದ ತಯಾರಿಸಲಾಗುತ್ತದೆ. ಆ ನೀರು ಶುದ್ಧವಾಗಿ ಇರುವುದಿಲ್ಲ. ಈ ಐಸ್‌ ಅನ್ನು ಮೃತದೇಹ, ಮೀನು, ಮಾಂಸವನ್ನು ದೀರ್ಘಕಾಲದವರೆಗೆ ಗರಿಷ್ಠ 6 ದಿನ ಯಥಾಸ್ಥಿತಿಯಲ್ಲಿ ಶೇಖರಿಸಿಡಲು ಬಳಸಲಾಗುತ್ತದೆ. ಈ ಐಸ್‌ ಅನ್ನು ಪಾನೀಯದಲ್ಲಿ ಮಿಶ್ರಣ ಮಾಡಿಕೊಂಡು ಅಥವಾ ಹಾಗೆಯೇ ತಿಂದರೂ ವ್ಯಕ್ತಿಯು ಅನಾರೋಗ್ಯ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ.

 ಈ ಐಸ್‌ ಬಳಸುವಂತಿಲ್ಲ

ಈ ಐಸ್‌ ಬಳಸುವಂತಿಲ್ಲ

ಇನ್ನು ತಿನ್ನಲು ಯೋಗ್ಯವಾದ ಐಸ್ ಅನ್ನು (ಎಡಿಬಲ್) ಕಬ್ಬಿನ ಹಾಲು ಅಥವಾ ಪಾನೀಯದಲ್ಲಿ ಹಾಕಿಕೊಂಡು ಕುಡಿಯಬಹುದು. ಇದು ಸಂಪೂರ್ಣವಾಗಿ ಶುದ್ಧ ನೀರಿನಿಂದ ತಯಾರಿಸಲಾಗುತ್ತದೆ. ಇದು ಬಣ್ಣರಹಿತ ಮತ್ತು ಪಾರದರ್ಶಕವಾಗಿರುತ್ತದೆ. ಇದು ಕೊಂಚ ಸಕ್ಕರೆ, ಹಣ್ಣು ಮತ್ತು ಹಾನಿಕಾರಕ ಅಲ್ಲದ ರಾಸಾಯನಿಕ ಅಂಶಗಳಿಂದ ಕೂಡಿರುತ್ತದೆ. ಅನಾರೋಗ್ಯಕ್ಕೀಡು ಮಾಡಬಲ್ಲ ಯಾವುದೇ ತರಹದ ಕೃತಕ ಅಂಶ ಅಥವಾ ಬಣ್ಣ ಈ ಐಸ್‌ಗೆ ಬಳಸುವಂತಿಲ್ಲ.

ಕಡಲ ನಗರಿಯಲ್ಲಿ ಸದ್ದು ಮಾಡುತ್ತಿದೆ ಬೊಂಡ ಐಸ್ ಕ್ರೀಮ್!

 ಅಧಿಕಾರಿಗಳು ಹೇಳುವುದಿಷ್ಟು...

ಅಧಿಕಾರಿಗಳು ಹೇಳುವುದಿಷ್ಟು...

ಬಳಕೆಗೆ ಮಾತ್ರ ಯೋಗ್ಯವಾದ ಐಸ್‌ (ನಾನ್ ಎಡಿಬಲ್) ನೀಲಿ ಬಣ್ಣದಿಂದ ಕೂಡಿರಬೇಕು ಎಂದು ಭಾರತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಸೂಚಿಸಿದೆ. ಮಹಾರಾಷ್ಟ್ರ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ನಾನ್ ಎಡಿಬಲ್ ಐಸ್‌ ಅನ್ನೇ ತಂಪು ಪಾನೀಯಗಳಲ್ಲಿ ಮಿಶ್ರಣ ಮಾಡಿ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ನಿಯಮ ಜಾರಿಗೊಳಿಸಿದೆ. ತಿನ್ನುವ (ಎಡಿಬಲ್) ಐಸ್‌ಗಿಂತ ಬಳಕೆಗೆ ಯೋಗ್ಯವಾದ ಐಸ್ಸನ್ನು (ನಾನ್ ಎಡಿಬಲ್) ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಲಾಗುತ್ತದೆ. ಆದರೆ ಫ್ಯಾಕ್ಟರಿಯಿಂದ ಹೊರ ಹೋದ ಬಳಿಕ ಐಸ್ ಯಾವ್ಯಾವುದಕ್ಕೆ ಬಳಕೆಯಾಗುತ್ತದೆ ಎಂಬುದನ್ನು ಹೇಳಲು ಆಗುವುದಿಲ್ಲ. ಬಳಕೆಗಾಗಿ ಐಸ್ಸನ್ನು ಖರೀದಿಸಿದವರು ಅದನ್ನು ಕಬ್ಬಿನಹಾಲು, ನಿಂಬೆ ಜ್ಯೂಸ್, ಹಣ್ಣಿನ ಜ್ಯೂಸ್ ಅಥವಾ ಸಣ್ಣಪುಟ್ಟ ಅಂಗಡಿಯವರಿಗೆ ಮಾರಾಟ ಮಾಡಬಹುದು. ಇಲ್ಲವೇ ಸ್ವಂತಕ್ಕೆ ಬಳಸಬಹುದು. ಎಷ್ಟೇ ತಿಳಿ ಹೇಳಿದರೂ ಅವರ ಮೇಲೆ ಪೂರ್ಣಪ್ರಮಾಣದ ನಿಯಂತ್ರಣ ಹೇರಲು ಆಗುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು.

 ತುಂಬಾ ಜಾಗ್ರತೆ ವಹಿಸಬೇಕು

ತುಂಬಾ ಜಾಗ್ರತೆ ವಹಿಸಬೇಕು

ಐಸ್ ಫ್ಯಾಕ್ಟರಿ ನಡೆಸುವುದು ಸಾಮಾನ್ಯ ಸಂಗತಿಯಲ್ಲ. ತುಂಬಾ ಜಾಗ್ರತೆ ವಹಿಸಬೇಕು. ಇಡೀ ಫ್ಯಾಕ್ಟರಿ ಆವರಣ ಶುಚಿ ಇರಬೇಕು. ನೀರು ಶುದ್ಧವಾಗಿರಬೇಕು. ಐಸ್ ತಯಾರಿಕೆಗೆ ಬಳಸಲಾಗುವ ಕ್ಯಾನ್, ಬ್ಲಾಕ್ ಮತ್ತು ಇತರ ಸಲಕರಣೆಗಳು ಮಾಲಿನ್ಯದಿಂದ ಮುಕ್ತವಾಗಿರಬೇಕು. ಐಸ್‌ ಅನ್ನು ವೈಜ್ಞಾನಿಕ ಸ್ವರೂಪದಲ್ಲಿ ಸಾಗಣೆ ಮಾಡಬೇಕು. ಅದರ ಮಾರಾಟ ಮತ್ತು ವಿತರಣೆಯು ಸಮರ್ಪಕವಾಗಿ ಇರಬೇಕು ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

 ಕಡಿವಾಣ ಹಾಕುವ ಅನಿವಾರ್ಯತೆ

ಕಡಿವಾಣ ಹಾಕುವ ಅನಿವಾರ್ಯತೆ

ಕಾರ್ಮಿಕರ ತೀವ್ರ ಕೊರತೆ, ನೀರಿನ ಸಮಸ್ಯೆ ಮತ್ತು ಪದೇ ಪದೇ ಕೈಕೊಡುವ ವಿದ್ಯುತ್ ನಡುವೆಯೂ ಪ್ರತಿ ದಿನ ಇಂತಿಷ್ಟು ಪ್ರಮಾಣ ಐಸ್ ಪೂರೈಸಬೇಕು. ಲಾಭಕ್ಕಿಂತ ಬಹುತೇಕ ಸಂದರ್ಭಗಳಲ್ಲಿ ನಷ್ಟವೇ ಹೆಚ್ಚು ಎನ್ನುತ್ತಾರೆ ಐಸ್ ತಯಾರಕ ರೋಜಾ ಖಾನಂ. ಇಡೀ ಜಿಲ್ಲೆಯಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿರುವುದು ಕಲುಷಿತ ನೀರಿನಿಂದ ಬಳಕೆಯಾಗುವ ಐಸ್ ಆಗಿದ್ದು, ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತು ಇಂತಹ ಫ್ಯಾಕ್ಟರಿಗಳ ಅಕ್ರಮ ದಂಧೆಗೆ ಕಡಿವಾಣ ಹಾಕುವ ಅನಿವಾರ್ಯತೆ ಇದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Most people do not know how to prepare ice. Usually ice needs to be used with pure water. But some of the latest factories are making ice at a very poor level. Here's a comprehensive report on this
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more