ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಡದಹಳ್ಳಿಯಲ್ಲಿ ಏಕಾಏಕಿ 80ಕ್ಕೂ ಹೆಚ್ಚು ಕುರಿಗಳ ದಾರುಣ ಸಾವು

|
Google Oneindia Kannada News

ಮೈಸೂರು, ಅಕ್ಟೋಬರ್. 05: ಏಕ ಕಾಲದಲ್ಲಿ 80ಕ್ಕೂ ಹೆಚ್ಚು ಕುರಿಗಳು ಒಂದೊಂದಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ದಡದಳ್ಳಿಯಲ್ಲಿ ಗುರುವಾರ ನಡೆದಿದೆ.

ಈ ಕುರಿಗಳು ತುಮಕೂರು ಶಿರಾ ಮೂಲದ ಮಾಲೀಕರಿಗೆ ಸೇರಿವೆ. ಮಾಲೀಕರು ಕುರಿ ಮೇಯಿಸುವುದಕ್ಕಾಗಿ ತುಮಕೂರಿನಿಂದ ಮೈಸೂರಿಗೆ ಬಂದಿದ್ದಾರೆ. ಎಂದಿನಂತೆ ಕುರಿಗಳು ಊರು ಊರಿನ ಮೇಲೆ ಮೇಯುತ್ತಾ ಸಾಗಿವೆ. ಅಂತೆಯೇ ಗುರುವಾರ ದಡದಳ್ಳಿಯಲ್ಲಿ ಮೇಯಲು ಬಿಟ್ಟಿದ್ದಾಗ ಈ ಘಟನೆ ನಡೆದಿದೆ.

ಹನೂರು ವ್ಯಾಪ್ತಿಯಲ್ಲಿ ಮುಂದುವರೆದ ಮಳೆಯಬ್ಬರ: ಹಸು, ಕುರಿಗಳು ಬಲಿಹನೂರು ವ್ಯಾಪ್ತಿಯಲ್ಲಿ ಮುಂದುವರೆದ ಮಳೆಯಬ್ಬರ: ಹಸು, ಕುರಿಗಳು ಬಲಿ

ಕುರಿ ಮೇವಿನಲ್ಲಿ ವಿಷ ಸೇವನೆ ಶಂಕೆ ವ್ಯಕ್ತವಾಗಿದೆ. ಇದ್ದಕ್ಕಿದ್ದಂತೆ ಬೆಳಗ್ಗೆಯಿಂದಲೇ ಕುರಿಗಳೆಲ್ಲಾ ಒಂದೊಂದಾಗಿ ಸತ್ತಿವೆ. ಇದನ್ನು ಗಮನಿಸಿದ ಮಾಲೀಕರು ದಿಗ್ಭ್ರಾಂತರಾಗಿದ್ದಾರೆ. ದಿಕ್ಕೇ ತೋಚದಂತಾದ ಅವರು, ಗ್ರಾಮಸ್ಥರ ಸಹಾಯದಿಂದ ಕೂಡಲೇ ವೈದ್ಯರನ್ನು ಸಂಪರ್ಕಿಸಿದ್ದಾರೆ.

More than 80 sheep were died on Thursday in Dadadahalli

ಮಂಡ್ಯದಲ್ಲಿ ಹಲವು ಕುರಿಗಳ ಸಾವು: ರೈತರಲ್ಲಿ ಆತಂಕಮಂಡ್ಯದಲ್ಲಿ ಹಲವು ಕುರಿಗಳ ಸಾವು: ರೈತರಲ್ಲಿ ಆತಂಕ

ಈ ವೇಳೆ ಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸಿದರು. ಆದರೆ, ಕುರಿಗಳ ಸಾವಿಗೆ ನಿಖರ ಕಾರಣ ಏನೂ ಎಂಬುದು ತಿಳಿದು ಬಂದಿಲ್ಲ.

ಬಳ್ಳಾರಿ ಸೀಮೆಯ ಕುರಿ ಹಿಕ್ಕೆಗೆ ಮಲೆನಾಡಿನಲ್ಲಿ ಭಾರೀ ಡಿಮ್ಯಾಂಡ್ಬಳ್ಳಾರಿ ಸೀಮೆಯ ಕುರಿ ಹಿಕ್ಕೆಗೆ ಮಲೆನಾಡಿನಲ್ಲಿ ಭಾರೀ ಡಿಮ್ಯಾಂಡ್

ಮಟನ್ ಸ್ಟಾಲ್ ಸೇರಿದ ಕುರಿಗಳು
ಈ ನಡುವೆ ಬೆಳಗ್ಗೆಯಿಂದಲೇ ಒಂದಾದ ಮೇಲೊಂದರಂತೆ ಕುರಿಗಳು ಸಾವನ್ನಪ್ಪುತ್ತಿದ್ದಂತೆಯೇ ಮಟನ್ ಸ್ಟಾಲ್ ಮಾಲೀಕರು ಸತ್ತ ಕುರಿಗಳನ್ನು ಅಂಗಡಿಗೆ ಹೊತ್ತೊಯ್ದರು. ಕುರಿ ಮಾಂಸ ಖರೀದಿಸುವವರು ಕೊಳ್ಳುವ ಮುಂಚೆ ಎಚ್ಚರವಹಿಸಬೇಕು ಎಂದು ಕುರಿಗಾಹಿಗಳು ಮನವಿ ಮಾಡಿದರು. ಈ ಸಂಬಂಧ ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
More than 80 sheep were died on Thursday in dadadahalli Mysore. These sheep belong to the owners of Shira, Tumkur district. Reason for the incident is unknown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X