ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಯ್ಯನ ಛತ್ರದಲ್ಲಿ ಗಣೇಶೋತ್ಸವ ಪ್ರಸಾದ ಸೇವಿಸಿ 40ಕ್ಕೂ ಹೆಚ್ಚು ಜನ ಅಸ್ವಸ್ಥ

|
Google Oneindia Kannada News

ಮೈಸೂರು, ಸೆಪ್ಟೆಂಬರ್ 18 : ಪ್ರಸಾದ ಎಂದರೆ ಎಲ್ಲರಿಗೂ ಇಷ್ಟ. ಅದರಲ್ಲೂ ದೇವರಿಗೆ ನೈವೇದ್ಯ ಮಾಡಿ ನೀಡಿದ ಪ್ರಸಾದವೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಪ್ರಸಾದವನ್ನು ನಮಸ್ಕರಿಸಿಯೇ ಸೇವಿಸುವುದು ನಮ್ಮ ವಾಡಿಕೆ. ಇಂತಹ ವಿಶಿಷ್ಟವಾದ ಪ್ರಸಾದವೇ ಆರೋಗ್ಯಕ್ಕೆ ಹಾನಿಯಾಗುವುದೆಂದರೆ..ಅಯ್ಯೋ ಏನು ಹೀಗೆ ಹೇಳ್ತಿದೀರಾ ಅಂತೀರಾ?

ಮೈಸೂರಿನಲ್ಲಿ ಕಲುಷಿತ ಆಹಾರ ಸೇವಿಸಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಮೈಸೂರಿನಲ್ಲಿ ಕಲುಷಿತ ಆಹಾರ ಸೇವಿಸಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ಹೌದು, ಇಂತಹ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ. ಗಣಪತಿ ವಿಸರ್ಜನೆ ವೇಳೆ ವಿತರಿಸಲಾದ ಪ್ರಸಾದವನ್ನು ಸೇವಿಸಿ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ನಂಜನಗೂಡು ತಾಲೂಕಿನಲ್ಲಿ ನಡೆದಿದೆ

 ರಾಮದುರ್ಗ: ಅಕ್ಷರ ದಾಸೋಹ ಊಟ ಸೇವಿಸಿ 60 ವಿದ್ಯಾರ್ಥಿಗಳು ಅಸ್ವಸ್ಥ ರಾಮದುರ್ಗ: ಅಕ್ಷರ ದಾಸೋಹ ಊಟ ಸೇವಿಸಿ 60 ವಿದ್ಯಾರ್ಥಿಗಳು ಅಸ್ವಸ್ಥ

ನಂಜನಗೂಡು ತಾಲೂಕಿನ ಚಿಕ್ಕಯ್ಯನ ಛತ್ರದ ಬಳಿಯ ಮಲ್ಲರಾಜನಹುಂಡಿಯ ಗಣೇಶೋತ್ಸವದಲ್ಲಿ ನಾಲ್ಕು ಮಕ್ಕಳು ಸೇರಿಂದತೆ ಒಟ್ಟು 40ಕ್ಕೂ ಅಧಿಕ ಮಂದಿ ಪ್ರಸಾದ ಸೇವಿಸಿದ ಬಳಿಕ ಅಸ್ವಸ್ಥರಾಗಿದ್ದಾರೆ. ಅವರನ್ನು ಇಲ್ಲಿನ ಕೆ.ಆರ್‌.ಆಸ್ಪತ್ರೆಗೆ ತಡರಾತ್ರಿ ದಾಖಲಿಸಲಾಗಿದೆ.

 ಗದಗ: ಒಂದೇ ಊರಿನ 50 ಮಂದಿ ವಾಂತಿ, ಬೇಧಿಯಿಂದ ಅಸ್ವಸ್ಥ ಗದಗ: ಒಂದೇ ಊರಿನ 50 ಮಂದಿ ವಾಂತಿ, ಬೇಧಿಯಿಂದ ಅಸ್ವಸ್ಥ

More than 40 people have been sick for eating Prasada

ಮೊಸರನ್ನವನ್ನು ಪ್ರಸಾದ ರೂಪದಲ್ಲಿ ನೀಡಲಾಗಿತ್ತು. ಮೂಡಹಳ್ಳಿ ಹಾಗೂ ಮಲ್ಲರಾಜಯ್ಯನ ಹುಂಡಿ ಗ್ರಾಮಸ್ಥರು ಪ್ರಸಾದವನ್ನು ಸೇವಿಸಿದ್ದರು. ಇದಾದ ಬಳಿಕ ಎಲ್ಲರೂ ವಾಂತಿ ಮಾಡಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊಸರನ್ನದ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸ್ಥಳಕ್ಕೆ ನಂಜನಗೂಡು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

English summary
More than 40 people have been sick for eating Prasada. This incident occurred at Mallarajanahundi Ganeshotsava in Nanjangud taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X