ಮೈಸೂರು: ಮೋದಿ ಮೆಚ್ಚಿದ ಮದುವೆ ಆಮಂತ್ರಣ ಪತ್ರಿಕೆ ಇದು
ಮೈಸೂರು, ಏಪ್ರಿಲ್ 4 : ದೇಶದಲ್ಲಿ ಲಕ್ಷಾಂತರ ಮದುವೆ ನಡೆಯುತ್ತವೆ. ಎಲ್ಲಾ ಮದುವೆಗಳಿಗೂ ಆಮಂತ್ರಣ ಪತ್ರಿಕೆ ಮುದ್ರಿಸುತ್ತಾರೆ. ಆದರೆ ಮೈಸೂರಿನ ಉದ್ಯಮಿಯೊಬ್ಬರ ಈ ಆಮಂತ್ರಣ ಪತ್ರಿಕೆ ಮಾತ್ರ ವಿಶೇಷವಾದುದು. ಇದೇ ಕಾರಣಕ್ಕೆ ಇದನ್ನು ದೇಶದ ಪ್ರಧಾನ ನರೇಂದ್ರ ಮೋದಿಯೂ ಮೆಚ್ಚಿಕೊಂಡಿದ್ದಾರೆ.
ನರೇಂದ್ರ ಮೋದಿ ಮೆಚ್ಚಿಕೊಳ್ಳವಂಥದ್ದು ಈ ಆಮಂತ್ರಣ ಪತ್ರಿಕೆಯಲ್ಲೇನಿದೆ ಅಂತ ಕೇಳ್ತೀರಾ? ಈ ಮದುವೆ ಆಹ್ವಾನ ಪತ್ರಿಕೆ ಮೆಚ್ಚಿಕೊಳ್ಳಲು ಕಾರಣ ಇದರಲ್ಲಿರುವ ಡಿಸೈನ್. ಹಾಗಂಥ ಕಣ್ಣು ಕೂರೈಸುವ ವಿನ್ಯಾಸವೇನೂ ಇದರಲ್ಲಿಲ್ಲ. ಆದರೆ ಅಪರೂಪದ ಬೆಳವಣಿಗೆ ಅಂದರೆ ಈ ಆಮಂತ್ರಣ ಪತ್ರಿಕೆಯನ್ನು 'ಸ್ವಚ್ಛ ಭಾರತ'ದ ಗುರುತನ್ನು ಬಳಸಲಾಗಿದೆ.[ಅನಿಲ್ ಕುಂಬ್ಳೆಯನ್ನು ನರೇಂದ್ರ ಮೋದಿ ಹೊಗಳಿದ್ದೇಕೆ?]
ತಮ್ಮ ಸರಕಾರದ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಆಂದೋಲನದ ಗುರುತನ್ನು ಮದುವೆ ಆಮಂತ್ರಣದಲ್ಲಿ ಮುದ್ರಿಸಿದ್ದನ್ನು ನರೇಂದ್ರ ಮೋದಿ ಮೆಚ್ಚಿಕೊಂಡಿದ್ದಾರೆ.
|
ಯಾರ ಮದುವೆ?
ಮೈಸೂರಿನ ಡಿ ದೇವರಾಜ್ ಅರಸ್ ರಸ್ತೆಯಲ್ಲಿ ನೆಲೆಸಿರುವ ಅಕ್ಷಯ್ ಅವರ ಸಹೋದರಿ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಈ ಸ್ವಚ್ಛ ಭಾರತದ ಗುರುಯನ್ನು ಬಳಸಲಾಗಿದೆ. ಮೂಲತಃ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಅಕ್ಷಯ್ 'ಸ್ವಚ್ಛ ಭಾರತ' ಲೋಗೋ ಇರುವ ತಮ್ಮ ಸಹೋದರಿಯ ಮದುವೆ ಆಹ್ವಾನ ಪತ್ರಿಕೆಯನ್ನು ಏಪ್ರಿಲ್ 1 ರಂದು ಮೋದಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು.

ರೀ ಟ್ವೀಟ್ ಮಾಡಿದ ಮೋದಿ
ಈ ಟ್ವೀಟನ್ನು ಮೋದಿ ಅವರು ಭಾನುವಾರ ಸಂಜೆ ರೀ ಟ್ವೀಟ್ ಮಾಡಿದ್ದು ಈಗ ವೈರಲ್ ಆಗಿದೆ. ಇಲ್ಲಿಯವರೆಗೆ ಈ ಟ್ವೀಟನ್ನು 2,600 ಜನ ರೀ ಟ್ವೀಟ್ ಮಾಡಿದ್ದರೆ, 7,800 ಮಂದಿ ಲೈಕ್ ಮಾಡಿದ್ದಾರೆ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಸುರೇಶ್ ಪ್ರಭು, ಮೈಸೂರು ಸಂಸದ ಪ್ರತಾಪ್ ಸಿಂಹ, ಗೋವಾ ಸಿಎಂ ಮನೋಹರ್ ಪರಿಕ್ಕರ್ ರೀ ಟ್ವೀಟ್ ಮಾಡಿದ್ದಾರೆ.[ಗಾಂಧೀಜಿ ಸ್ವಚ್ಛ ಭಾರತ ಕನಸು ನನಸಾಗಿಸೋಣ: ಮೋದಿ]
|
ಮೂಲತಃ ಗುಜರಾತ್ ನವರು
ಸ್ವಚ್ಛ ಭಾರತದ ಲೋಗೋವನ್ನು ಪ್ರಕಟಿಸಿದ್ದು ಯಾಕೆ ಎಂದು ಕೇಳಿದ್ದಕ್ಕೆ, ನಾವು ಮೂಲತಃ ಗುಜರಾತ್ನವರು. ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದೇವೆ. ನನ್ನ ತಂದೆಯವರಿಗೆ ಮೋದಿ ಅವರ ಸ್ವಚ್ಛ ಭಾರತ ಅಭಿಯಾನ ಬಹಳ ಇಷ್ಟವಾಗಿದೆ. ಏಪ್ರಿಲ್ 28 ರಂದು ರಾಜಸ್ಥಾನದ ಜೋದ್ಪುರದಲ್ಲಿ ನನ್ನ ಸಹೋದರಿಯ ಮದುವೆ ಇದೆ. ಈ ಮದುವೆಯ ಆಹ್ವಾನ ಪತ್ರಿಕೆಯಲ್ಲಿ ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ ಏನಾದರೂ ಒಂದು ಉತ್ತಮ ಸಂದೇಶವನ್ನು ತಿಳಿಸುವ ಉದ್ದೇಶದಿಂದ ತಂದೆಯವರು ಸ್ವಚ್ಛ ಭಾರತದ ಲೋಗೋವನ್ನು ಪ್ರಿಂಟ್ ಹಾಕಿಸಿದ್ದಾರೆ ಎಂದು ತಿಳಿಸಿದರು.

ಮೋದಿ ತವರಿಗೆ ಸೇರಿದವರು ನಾವು
ನರೇಂದ್ರ ಮೋದಿಯವರ ಈ ಹಿಂದೆ ಪ್ರತಿನಿಧಿಸುತ್ತಿದ್ದ ಮಣಿನಗರ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಕುಟುಂಬ ನೆಲೆಸಿದ್ದು, ಹಿಂದಿನಿಂದಲೂ ನಾವು ಮೋದಿ ಅವರ ಕೆಲಸ ಕಾರ್ಯಗಳನ್ನು ನೋಡಿದ್ದೇವೆ. ನಮ್ಮ ಕುಟುಂಬ ಸದಸ್ಯರಿಗೆ ಮೋದಿ ಅಂದರೆ ಅಚ್ಚುಮೆಚ್ಚು. ಈ ಹಿಂದೆ ನನ್ನ ತಂದೆ ಬಿಸಿನೆಸ್ ಮಾಡಲು ಮೈಸೂರಿಗೆ ಬಂದಿದ್ದರು. 12 ವರ್ಷ ಮೈಸೂರಿನಲ್ಲಿ ಇದ್ದು ಬಳಿಕ ಗುಜರಾತ್ಗೆ ಮರಳಿದ್ದೆವು. ಇದಾದ ಬಳಿಕ 2009ರಲ್ಲಿ ಮೈಸೂರಿಗೆ ಪುನಃ ಬಂದು ಈಗ ಇಲ್ಲೇ ನೆಲೆಸಿದ್ದೇವೆ. ನಾನು ಮೈಸೂರಿನ ವಿದ್ಯಾವರ್ಧಕ ಕಾಲೇಜಿನಲ್ಲಿ ಎಂಜಿನಿಯರ್ ಪದವಿ ಓದಿದ್ದೇನೆ ಎಂದು ಅಕ್ಷಯ್ ಹೇಳಿದ್ದಾರೆ.
|
ಅಕ್ಷಯ್ ಫಾಲೋ ಮಾಡಿದ ಮೋದಿ
ಅಕ್ಷಯ್ ಅವರ ಟ್ವೀಟನ್ನು ಮೋದಿ ರೀಟ್ವೀಟ್ ಮಾಡಿದ್ದು ಮಾತ್ರ ಅಲ್ಲದೇ ಈಗ ಅವರನ್ನು ಫಾಲೋ ಮಾಡಿದ್ದಾರೆ. ಮೋದಿಯವರು ಇದುವರೆಗೆ ಒಟ್ಟು 1,698 ಜನರನ್ನು ಫಾಲೋ ಮಾಡುತ್ತಿದ್ದಾರೆ. ಅದರಲ್ಲಿ ನಾನೂ ಒಬ್ಬನಾಗಿದ್ದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ ಎಂದು ಅಕ್ಷಯ್ ಸಂತಸ ಹಂಚಿಕೊಂಡಿದ್ದಾರೆ.ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಅಕ್ಷಯ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಉದ್ಯಮಿ, ಬ್ಲಾಗರ್, ಸೋಷಿಯಲ್ ಮೀಡಿಯಾ ಕನ್ಸಲ್ಟೆಂಟ್ ಎಂದು ತಮ್ಮ ವೃತ್ತಿ ವಿವರನ್ನು ಹಾಕಿದ್ದಾರೆ. ಅಷ್ಟೇ ಅಲ್ಲದೇ ಧೋನಿ ಅಭಿಮಾನಿ ಮತ್ತು ನರೇಂದ್ರ ಮೋದಿಯವರು ಫಾಲೋ ಮಾಡುತ್ತಿರುವ ವ್ಯಕ್ತಿ ಎಂದು ತಮ್ಮ ಪ್ರೊಫೈಲ್ನಲ್ಲಿ ಬರೆದುಕೊಂಡಿದ್ದಾರೆ.