ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿ ಸರ್ಕಾರದಿಂದ ದೇಶಾಭಿವೃದ್ಧಿ : ಕೃಷ್ಣಪಾಲ್ ಗುರ್ಜಾರ್

ಮೂರು ವರ್ಷದಲ್ಲಿ ಭ್ರಷ್ಟಚಾರ ಮುಕ್ತ ಆಡಳಿತವನ್ನು ಕೇಂದ್ರದ ಬಿಜೆಪಿ ಸರ್ಕಾರ ನೀಡಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ಕೃಷ್ಣಪಾಲ್ ಗುರ್ಜಾರ್ ತಿಳಿಸಿದರು.

By Yashaswini
|
Google Oneindia Kannada News

ಮೈಸೂರು, ಮೇ.29 : ಮೂರು ವರ್ಷದಲ್ಲಿ ಭ್ರಷ್ಟಚಾರ ಮುಕ್ತ ಆಡಳಿತವನ್ನು ಕೇಂದ್ರದ ಬಿಜೆಪಿ ಸರ್ಕಾರ ನೀಡಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ಕೃಷ್ಣಪಾಲ್ ಗುರ್ಜಾರ್ ತಿಳಿಸಿದರು.

ಮೈಸೂರು ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನರೇಂದ್ರ ಮೋದಿಯವರು ಮೂರು ವರ್ಷದ ಆಡಳಿತದಲ್ಲಿ ಹಳ್ಳಿ ,ಪಟ್ಟಣ ರೈತರ ಅಭಿವೃದ್ಧಿಗೆ ದುಡಿದಿದ್ದಾರೆ. ಅವರ ಆಡಳಿತವನ್ನು ಜನ ಮೆಚ್ಚಿದ್ದಾರೆ. ಈ ಹಿನ್ನಲೆಯಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆಯಿಂದ ಹಿಡಿದು ಲೋಕಸಭಾ ಚುನಾವಣೆಯವರೆಗೂ ಜನಾದೇಶ ನೀಡಿದ್ದಾರೆ.[ಯುಪಿಎ ಸರಕಾರದ ಸಾಧನೆಯಿಂದ ಬಿಜೆಪಿಗೆ ಹೊಟ್ಟೆಕಿಚ್ಚು: ಮೊಯಿಲಿ]

Modi government is implementing transparent governance: Krishnapal

ನಮ್ಮ ಸರ್ಕಾರ ಬಡವರ ಪರ ಇದೆ ಎಂದರು. ಜನಧನ್ ಯೋಜನೆಯಿಂದ ಪ್ರತಿಯೊಬ್ಬ ಬಡವನು ಬ್ಯಾಂಕ್ ನ ಖಾತೆದಾರನಾಗಿದ್ದಾನೆ. ಸ್ವಾತಂತ್ರ್ಯ ನಂತರ ಹೊಸ ಸಂಚಲನ ಸೃಷ್ಟಿ ಮಾಡಿದ್ದೇವೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಿಂದ ಸೂರು ಇಲ್ಲದವರು ಸೂರು ಪಡೆದಿದ್ದಾರೆ. ವಿದೇಶಿ ಬಂಡವಾಳ ಹೂಡಿಕೆ ದೇಶದಲ್ಲಿ ಹೆಚ್ಚುತ್ತಿದೆ ಎಂದು ತಿಳಿಸಿದರು.

ನಮ್ಮ ಸರ್ಕಾರ ಪಾರದರ್ಶಕವಾಗಿದೆ. ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಭ್ರಷ್ಟಾಚಾರ ಮುಕ್ತವಾದ ಆಡಳಿತ ನೀಡುವಲ್ಲಿ ಯಶಸ್ವಿಯಾಗಿದೆ. ಪ್ರಧಾನಿ ಮೋದಿ ಕಡಿಮೆ ಮಾತನಾಡಿದರೂ, ಹೆಚ್ಚಿನ ಕೆಲಸ ಮಾಡಿ ತೋರಿಸಿದ್ದಾರೆ. ಮೋದಿ ವಿಶ್ವ ನಾಯಕರಾಗಿ ಹೊರಹೊಮ್ಮಿದ್ದಾರೆ.

Modi government is implementing transparent governance: Krishnapal

ಕಳೆದ ಮೂರು ವರ್ಷದ ಅವಧಿಯಲ್ಲಿ ದೇಶವನ್ನು ಭ್ರಷ್ಟಾಚಾರ ಮುಕ್ತ ಮಾಡಲು ಪ್ರಧಾನಿ ಮೋದಿ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ಎಲ್ಲಾ ವರ್ಗದ ಜನರ ಏಳಿಗೆಗಾಗಿ ಅಭಿವೃದ್ಧಿ ಕಾರ್ಯಗಳನ್ನು ಪ್ರಕಟಿಸಲಾಗಿದೆ. ಕಳೆದ ಮೂರು ವರ್ಷಗಳ ಆಡಳಿತದಲ್ಲಿ ಒಂದೂ ಭ್ರಷ್ಟಾಚಾರ, ಹಗರಣ ನಡೆದಿಲ್ಲ.

ಜಾತಿ ರಾಜಕಾರಣ, ತುಷ್ಠೀಕರಣ ರಾಜಕೀಯ ಕೊನೆಗೊಂಡಿದೆ. ದೇಶದ ಜಿ.ಡಿ.ಪಿ ದರ ಏರಿಕೆಯಾಗಿದೆ. ಪರಿಣಾಮ ಇತ್ತೀಚೆಗೆ ನಡೆದ ಬಹುತೇಕ ಚುನಾವಣೆಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಪಡೆದಿದೆ ಎಂದರು.

English summary
Modi government is implementing transparent governance in The nation, Union minister Krishnapal Gurjar told in Mysuru today. He was addressing a pressmeet in Mysuru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X