ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಚಾಮುಂಡಿ ಬೆಟ್ಟದ ದೇಗುಲದಲ್ಲಿ ಮೊಬೈಲ್ ಬಳಕೆ ನಿಷೇಧ

|
Google Oneindia Kannada News

ಮೈಸೂರು, ಡಿಸೆಂಬರ್ 26: ಮೊಬೈಲ್ ಬಳಕೆಯಿಂದ ಕಿರಿಕಿರಿ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದ ದೇಗುಲದಲ್ಲಿ ಮೊಬೈಲ್ ಬಳಕೆಗೆ ನಿಷೇಧ ಹೇರಲಾಗಿದೆ. ಇನ್ನು ಮುಂದೆ ತಾಯಿ ಚಾಮುಂಡೇಶ್ವರಿಯ ದರ್ಶನಕ್ಕೆ ಹೋಗುವವರು ತಮ್ಮ ಜೊತೆ ಮೊಬೈಲ್ ಒಯ್ಯುವಂತಿಲ್ಲ.

ದೇವಾಲಯದ ಆವರಣದಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿದ್ದು, ಇದರಿಂದ ಕಿರಿಕಿರಿ ಉಂಟಾಗುತ್ತಿದೆ. ಹೀಗಾಗಿ ತಿರುಪತಿ ದೇವಾಲಯದ ಮಾದರಿಯಲ್ಲಿ ಇಲ್ಲೂ ಕೂಡ ಮೊಬೈಲ್ ತರುವುದನ್ನು ನಿಷೇಧಿಸಲಾಗುತ್ತಿದೆ. ಮೊಬೈಲ್ ನಿಷೇಧ ಮಾಡುವುದರಿಂದ ದೇವಿಯ ಛಾಯಾಚಿತ್ರ ಯಾರೂ ತೆಗೆಯುವುದಿಲ್ಲ ಮತ್ತು ಯಾವುದೇ ಕಿರಿಕಿರಿ ಉಂಟಾಗುವುದಿಲ್ಲ ಎನ್ನಲಾಗಿದೆ.

Mobile use is prohibited in Chamundi Hill Temple

ವಿಧಾನಸಭೆಯೊಳಗೆ ಮೊಬೈಲ್ ಬಳಕೆ, ಶಾಸಕ ಎನ್.ಮಹೇಶ್ ಸ್ಪಷ್ಟನೆವಿಧಾನಸಭೆಯೊಳಗೆ ಮೊಬೈಲ್ ಬಳಕೆ, ಶಾಸಕ ಎನ್.ಮಹೇಶ್ ಸ್ಪಷ್ಟನೆ

ಇದಕ್ಕೆ ಪೂರಕವಾಗಿ ದೇಗುಲಕ್ಕೆ ಭೇಟಿ ನೀಡುವ ಭಕ್ತರ ಮೊಬೈಲ್ ಇಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ. ಇದೇ ಮೊದಲ ಬಾರಿಗೆ ದೇವಾಲಯದ ಆಡಳಿತ ಮಂಡಳಿ ಇಂತಹ ಯೋಜನೆಗೆ ಕೈಹಾಕಿದೆ.

English summary
From this time mobile use is prohibited in Chamundi Hill Temple of Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X