ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ರೆಡಿಯಾಗ್ತಿದೆ 966 ಹಾಸಿಗೆಗಳ ಮೊಬೈಲ್‌ ಆಸ್ಪತ್ರೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಏಪ್ರಿಲ್ 05: ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಮೈಸೂರು ರೈಲ್ವೆ ವಲಯ ಕೈಜೋಡಿಸಿದೆ. ಕೋವಿಡ್-19 ಆಸ್ಪತ್ರೆಗಾಗಿ 138 ಬೋಗಿಗಳನ್ನು ಸಿದ್ದಗೊಳಿಸಲಾಗಿದೆ.

138 ಬೋಗಿಗಳಲ್ಲಿ ಐಸೋಲೇಷನ್ ವಾರ್ಡ್ ನಿರ್ಮಾಣ ಮಾಡಲಾಗಿದ್ದು, ಮೈಸೂರು ನಗರ ರೈಲ್ವೆ ನಿಲ್ದಾಣದಲ್ಲಿ‌ 18 ಬೋಗಿಗಳಲ್ಲಿ ತಾತ್ಕಾಲಿಕವಾಗಿ ಆಸ್ಪತ್ರೆ ರೆಡಿ ಮಾಡಲಾಗುತ್ತಿದೆ.

ಲಾಕ್ ಡೌನ್ ತೆರವು: ಇದ್ದ ಗೊಂದಲ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರಕಾರಲಾಕ್ ಡೌನ್ ತೆರವು: ಇದ್ದ ಗೊಂದಲ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರಕಾರ

ಅಶೋಕಪುರಂ ರೈಲ್ವೆ ನಿಲ್ದಾಣದಿಂದ 120 ಬೋಗಿಗಳು ಐಸಿಯು ವಾರ್ಡ್ ಗಳಾಗಿ ಮಾರ್ಪಾಡು ಮಾಡಲಾಗಿದ್ದು, ಪ್ರತಿ ಬೋಗಿಯಲ್ಲಿ 7 ಜನರಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ.

Mobile Hospital Ready in Mysuru

ಎರಡು ಆಕ್ಸಿಜನ್ ಸಿಲಿಂಡರ್ ಹಾಗೂ ತಲಾ ಇಬ್ಬರು ವೈದ್ಯ ಸಿಬ್ಬಂದಿಗೆ ಬೋಗಿಯಲ್ಲಿ ಉಳಿಯೋ ವ್ಯವಸ್ಥೆ. ಮೆಸ್ ನಿಂದ ಬೋಗಿಯ ಕಿಟಕಿಗಳನ್ನು ಸಿಬ್ಬಂದಿ ಕವರ್ ಮಾಡಿದ್ದಾರೆ.

ಕೊರೊನಾ ಭೀತಿ; ಭಾರತೀಯ ರೈಲ್ವೆಯ 5 ಪ್ರಮುಖ ಕಾರ್ಯಗಳುಕೊರೊನಾ ಭೀತಿ; ಭಾರತೀಯ ರೈಲ್ವೆಯ 5 ಪ್ರಮುಖ ಕಾರ್ಯಗಳು

ಪ್ರತಿ ಕಂಪಾರ್ಟ್ ಮೆಂಟ್‌ನ ಮಿಡಲ್ ಬರ್ತ್ ತೆಗೆದು ಕೇವಲ ಒಬ್ಬ ರೋಗಿ ಕ್ವಾರಂಟೈನ್ಮಾಡಬಹುದು. ಪ್ರತಿ ಜಾಗದಲ್ಲೂ ಡಸ್ಟ್ ಬಿನ್, ಸ್ಯಾನಿಟೈಜರ್ ಸೇರಿದಂತೆ ಅಗತ್ಯ ವಸ್ತುಗಳೂ ಸಹ ಇವೆ.

Mobile Hospital Ready in Mysuru

ಬೋಗಿಗಳಲ್ಲೇ ವಾಷ್ ರೂಂ, ಟಾಯ್ಲೆಟ್ ಸೌಕರ್ಯವಿದ್ದು, ಹೋಂ ಕ್ವಾರಂಟೈನ್ ಹಾಗೂ ಫೆಸಿಲಿಟೇಟ್ ಕ್ವಾರಂಟೈನ್ ಗೆ ಉಂಟಾಗುತ್ತಿರುವ ತೊಂದರೆ ತಪ್ಪಿಸಲು ಪ್ಲಾನ್ ಮಾಡಲಾಗಿದೆ. ದೇಶದಲ್ಲಿ ಅಗತ್ಯ ಬಿದ್ದ ಸ್ಥಳಗಳಲ್ಲಿ ಸಂಚಾರ ಮಾಡಿ ಮೊಬೈಲ್ ಆಸ್ಪತ್ರೆ ಸೇವೆ ಸಲ್ಲಿಸಲಿದೆ.

English summary
Mysuru railway sector has joined hands to fight coronavirus. 138 bogies have been prepared for Covid-19 Hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X