ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊವಿಡ್-19 ಸೋಂಕು ದೃಢ; ಖಾಸಗಿ ಆಸ್ಪತ್ರೆಗೆ MLC ಸಂದೇಶ್ ನಾಗರಾಜ್

|
Google Oneindia Kannada News

ಮೈಸೂರು, ಜುಲೈ.17: ನೊವೆಲ್ ಕೊರೊನಾವೈರಸ್ ಸೋಂಕಿನ ಭೀತಿ ಜನಪ್ರತಿನಿಧಿಗಳನ್ನು ಬೆನ್ನು ಬಿಡದ ಭೂತದಂತೆ ಕಾಡುತ್ತಿದೆ. ಶಾಸಕರು, ಸಂಸದರು, ಸಚಿವರು ಸೇರಿದಂತೆ ವಿಧಾನ ಪರಿಷತ್ ಸದಸ್ಯರಿಗೂ ಸೋಂಕಿನ ಮಹಾಮಾರಿ ಅಂಟಿಕೊಳ್ಳುತ್ತಿದೆ.

Recommended Video

ಕೇಂದ್ರ ಸರ್ಕಾರಕ್ಕೆ ವರ್ನಿಂಗ್ ಕೊಟ್ಟ ರಾಹುಲ್ ಗಾಂಧಿ.! | Oneindia Kannada

ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಹಾಗೂ ಚಿತ್ರ ನಿರ್ಮಾಪಕರಾಗಿರುವ ಸಂದೇಶ್ ನಾಗರಾಜ್ ಅವರಿಗೆ ನೊವೆಲ್ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ.

ಮೈಸೂರಿನಲ್ಲಿ ಟೀ ಅಂಗಡಿ ಮುಚ್ಚುವ ಆದೇಶಕ್ಕೆ ವ್ಯಾಪಾರಿಗಳು ಗರಂಮೈಸೂರಿನಲ್ಲಿ ಟೀ ಅಂಗಡಿ ಮುಚ್ಚುವ ಆದೇಶಕ್ಕೆ ವ್ಯಾಪಾರಿಗಳು ಗರಂ

ಕಳೆದ ಒಂದು ವಾರದಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಸಂದೇಶ್ ನಾಗರಾಜ್ ಅವರು ಕಳೆದ ಎರಡು ದಿನಗಳ ಹಿಂದೆಯಷ್ಟೇ ಕೊವಿಡ್ ಟೆಸ್ಟ್ ಗೆ ಒಳಗಾಗಿದ್ದರು. ಅವರ ರಕ್ತ ಮತ್ತು ಗಂಟಲು ದ್ರವದ ಮಾದರಿ ತಪಾಸಣೆ ವರದಿ ಬಳಿಕ ಕೊರೊನಾವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ.

Mysore: MLC Sandesh Nagaraj Get Covid-19 Positive, Admitted To Hospital

ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ:

ಕೊರೊನಾವೈರಸ್ ಸೋಂಕು ತಗಲಿರುವುದು ದೃಢವಾಗುತ್ತಿದ್ದಂತೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ಎಂಎಲ್ ಸಿ ಸಂದೇಶ್ ನಾಗರಾಜ್ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದೆಡೆ ಸಂದೇಶ್ ನಾಗರಾಜ್ ಕುಟುಂಬದವರನ್ನು ಕ್ವಾರೆಂಟೈನ್ ನಲ್ಲಿ ಇರಿಸಲಾಗಿದೆ. ಮುಂದಿನ 14 ದಿನಗಳವರೆಗೂ ಮನೆಯಲ್ಲೇ ಪ್ರತ್ಯೇಕವಾಗಿ ಇರುವಂತೆ ಸೂಚನೆ ನೀಡಲಾಗಿದೆ.

English summary
Mysore: MLC Sandesh Nagaraj Get Covid-19 Positive, Admitted To Hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X