ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಿಷತ್‌ ಫೈಟ್; ಮಹಿಳಾ ಸದಸ್ಯರ ಪತಿರಾಯರಿಗೆ ಫುಲ್ ಡಿಮ್ಯಾಂಡ್!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 04; ವಿಧಾನ ಪರಿಷತ್ ಚುನಾವಣೆ ಅಖಾಡ ದಿನೇ ದಿನೇ ರಂಗು ಪಡೆದುಕೊಳ್ಳುತ್ತಿದ್ದು, ಅಭ್ಯರ್ಥಿಗಳು ಮತ ಭೇಟೆಗೆ ಸಜ್ಜಾಗಿದ್ದಾರೆ. ಮೈಸೂರು ಹಾಗೂ ಚಾಮರಾಜನಗರ ಗ್ರಾಮ ಪಂಚಾಯಿತಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳಾ ಸದಸ್ಯರೇ ಇದ್ದಾರೆ. ಇವರ ಮತ ಪಡೆಯಲು ಅಭ್ಯರ್ಥಿಗಳು ಅವರ ಪತಿರಾಯರ ಮನವೊಲಿಸುತ್ತಿದ್ದಾರೆ. ಇದರಿಂದ ಮಹಿಳಾ ಗ್ರಾಮ ಪಂಚಾಯಿತಿ ಸದಸ್ಯರ ಪತಿರಾಯರಿಗೆ ಫುಲ್ ಡಿಮ್ಯಾಂಡ್ ಸೃಷ್ಟಿಯಾಗಿದೆ.

ಶಿವಮೊಗ್ಗ; ವಿಧಾನ ಪರಿಷತ್ ಮತದಾನ ಬಹಿಷ್ಕಾರಶಿವಮೊಗ್ಗ; ವಿಧಾನ ಪರಿಷತ್ ಮತದಾನ ಬಹಿಷ್ಕಾರ

ಪಂಚಾಯಿತಿಯಲ್ಲಿ ಶೇ. 50ರಷ್ಟು ಮಹಿಳೆಯರೇ ಮತದಾರರಾಗಿದ್ದಾರೆ. ಇವರನ್ನು ಅಭ್ಯರ್ಥಿಗಳು ನೇರವಾಗಿ ಭೇಟಿ ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕೆ ಉಪಾಯ ಕಂಡುಕೊಂಡಿರುವ ಮೂರು ಪಕ್ಷಗಳ ಮುಖಂಡರು ಮಹಿಳಾ ಸದಸ್ಯರ ಪತಿರಾಯರನ್ನು ಮನವೊಲಿಸುವ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಇದರಿಂದ ಮಹಿಳಾ ಮತದಾರರ ವೋಟಿಗೆ ಈಗ ಬೇಡಿಕೆ ಹೆಚ್ಚಾಗಿದ್ದು, ಪತಿರಾಯರು ತಮ್ಮ ಪತ್ನಿಯರ ಮತ ತಮ್ಮ ಬಳಿಯೇ ಖಾತ್ರಿ ಇದೆ ಎಂದು ಹೇಳಿಕೊಂಡು ಬೇಡಿಕೆ ಸೃಷ್ಟಿಸಿಕೊಳ್ಳುತ್ತಿದ್ದಾರೆ.

ಪರಿಷತ್; ರಾತ್ರೋರಾತ್ರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜೆಡಿಎಸ್ ಅಭ್ಯರ್ಥಿ! ಪರಿಷತ್; ರಾತ್ರೋರಾತ್ರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜೆಡಿಎಸ್ ಅಭ್ಯರ್ಥಿ!

"ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಗ್ರಾಮ ಪಂಚಾಯಿತಿ ಸದಸ್ಯರು ಮಹಿಳೆಯರೇ ಆಗಿದ್ದಾರೆ. ಬಹಳಷ್ಟು ಮಂದಿ ಅಧ್ಯಕ್ಷೆಯರೂ ಆಗಿದ್ದಾರೆ. ಆದರೆ ಬಹುತೇಕರು ತಮ್ಮ ಮತದ ಕುರಿತು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಹಾಗಾಗಿ ಅವರ ಪತಿ, ಕೆಲವೆಡೆ ಮಕ್ಕಳೇ ಅವರಿಗೆ ಗಾಡ್ ಫಾದ‌ರ್ ಗಳು, ನಾವು ವೋಟನ್ನು ಈ ಗಾಡ್ ಫಾದರ್ ಬಳಿ ಕೇಳುವಂತಾಗಿದೆ'' ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ನೋವಿನಲ್ಲಿಯೇ ತಿಳಿಸಿದ್ದಾರೆ.

ಪರಿಷತ್ ಚುನಾವಣೆ; ಶಿವಮೊಗ್ಗದ ಚುನಾವಣಾ ಚಿತ್ರಣಪರಿಷತ್ ಚುನಾವಣೆ; ಶಿವಮೊಗ್ಗದ ಚುನಾವಣಾ ಚಿತ್ರಣ

ಪತಿ, ಮಕ್ಕಳೇ ಗಾಡ್ ಫಾದರ್

ಪತಿ, ಮಕ್ಕಳೇ ಗಾಡ್ ಫಾದರ್

"ಹಾಗೇ ನೋಡಿದರೆ ಮಹಿಳಾ ಸದಸ್ಯರು ಹೆಚ್ಚು ಪ್ರಜ್ಞಾವಂತರಾಗಿರುತ್ತಾರೆ. ನೋಟಿಗಾಗಿ ವೋಟು ಮಾರಿಕೊಳ್ಳುವ ಮನಸ್ಥಿತಿ ಅವರಿಗೆ ಇರುವುದಿಲ್ಲ. ಕೆಲವರಂತೂ ವೋಟಿಗೆ ಹಣವೇ ಎಂದು ಪ್ರಾಮಾಣಿಕವಾಗಿಯೇ ಪ್ರಶ್ನಿಸುತ್ತಾರೆ. ನಮಗೆ ಆಮಿಷ ಕೊಡಲು ಬರಬೇಡಿ ನಮಗಿಷ್ಟ ಬಂದ ಅಭ್ಯರ್ಥಿಗೆ ಮತ ಹಾಕುತ್ತೇನೆ ಎಂದು ಕಡ್ಡಿತುಂಡು ಮಾಡಿದಂತೆ ಹೇಳುತ್ತಾರೆ. ಆದರೆ ಮಹಿಳಾ ಸದಸ್ಯರ ಮಕ್ಕಳು, ಪತಿರಾಯರು ಸುಮ್ಮನೆ ಇರುವುದಿಲ್ಲ. ಅವರ ವೋಟನ್ನು ಒತ್ತೆಯಿಟ್ಟು ಕೊಂಡವರಂತೆ, ಅದಕ್ಕೆ ಬೆಲೆ ಕಟ್ಟುತ್ತಾರೆ" ಎಂಬುದು ಕಾಂಗ್ರೆಸ್ ಮುಖಂಡರೊಬ್ಬರ ಅನುಭವದ ಮಾತು.

ಮತದಾನದ ಬಗ್ಗೆ ಸ್ವತಃ ನಿರ್ಧಾರ ಇಲ್ಲ

ಮತದಾನದ ಬಗ್ಗೆ ಸ್ವತಃ ನಿರ್ಧಾರ ಇಲ್ಲ

ಸ್ಥಳೀಯ ಸಂಸ್ಥೆಗಳಲ್ಲಿ ಶೇ 50ರಷ್ಟು ಮಹಿಳಾ ಮೀಸಲು ಕಾರಣಕ್ಕೆ ಪಂಚಾಯಿತಿಯಲ್ಲಿ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಾಗಿದೆ. ಮಹಿಳಾ ಸದಸ್ಯರು ಗ್ರಾಮ ಪಂಚಾಯಿತಿ ಸಭೆಯಿಂದ ಹಿಡಿದು ಅಭಿವೃದ್ಧಿ ಕೆಲಸ ಮಾಡಿಸುವವರೆಗೂ ಗಟ್ಟಿಗಿತ್ತಿಯರು. ಆದರೆ ಹೆಚ್ಚಿನ ಮಹಿಳಾ ಜನಪ್ರತಿನಿಧಿಗಳ ಪತಿ‌ಮಹಾಶಯರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದರಿಂದ ನೇರವಾಗಿ ತಮ್ಮಿಚ್ಛೆಯಂತೆ ಅಧಿಕಾರ ನಡೆಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಗಂಡಂದಿರೇ ಮಧ್ಯವರ್ತಿಗಳಂತೆ ಇರುವುದು ಮಹಿಳಾ ಸದಸ್ಯರನ್ನು ಅಡಕತ್ತರಿಯಲ್ಲಿ ಸಿಲುಕುವಂತೆ ಮಾಡಿದೆ. ಚುನಾವಣೆ ಸಮಯದಲ್ಲಂತೂ ಪತಿರಾಯರ ಮಾತು ಮೀರುವ ಗೋಜಿಗೆ ಮಹಿಳಾ ಸದಸ್ಯರು ಹೋಗುವುದಿಲ್ಲ ಎಂಬುದು ಅಷ್ಟೇ ಸತ್ಯ.

ಮತಕ್ಕಾಗಿ ಹಣದ ಬೇಡಿಕೆ

ಮತಕ್ಕಾಗಿ ಹಣದ ಬೇಡಿಕೆ

ಈ ನಡುವೆ ಅಭ್ಯರ್ಥಿಗಳು, ಪಕ್ಷದ ಮುಖಂಡರನ್ನು ಕೆಲವು ಮಧ್ಯವರ್ತಿಗಳು ಸಂಪರ್ಕಿಸಿ ತಮಗಿಷ್ಟು ಮೊತ್ತ ಕೊಟ್ಟರೆ ಇಷ್ಟು ಸಂಖ್ಯೆಯ ಮತ ಕೊಡಿಸುತ್ತೇವೆ ಎಂದು ನೇರವಾಗಿ ಬೇಡಿಕೆ ಇಡುತ್ತಿದ್ದಾರೆನ್ನಲಾಗಿದೆ. ಇಂಥ ಮಧ್ಯವರ್ತಿಗಳ ಪೈಕಿ ಬಹುತೇಕರು ಮಹಿಳಾ ಜನಪ್ರತಿನಿಧಿಗಳ ಪತಿರಾಯರೇ ಆಗಿರುತ್ತಾರೆ. ಮೈಸೂರು-ಚಾಮರಾಜನಗರ ಕಣದಲ್ಲಿ ಕಳೆದ ವರ್ಷ ಒಂದು ಮತಕ್ಕೆ 50 ಸಾವಿರ ರೂ. ಆಸುಪಾಸಿನಲ್ಲಿದ್ದ ಮೊತ್ತ ಈ ಬಾರಿ 1 ಲಕ್ಷ ರೂ. ದಾಟಬಹುದು ಎನ್ನುವ ಅಂದಾಜು ಮಾಡಲಾಗುತ್ತಿದೆ.

ಪಕ್ಷಗಳಿಂದ ಕಾರ್ಯತಂತ್ರ

ಪಕ್ಷಗಳಿಂದ ಕಾರ್ಯತಂತ್ರ

ಹಾಗೇ ನೋಡಿದರೆ ಹಣ ಪಡೆದುಕೊಳ್ಳುವವರು ಕೆಲವೊಮ್ಮೆ ತಮ್ಮ ನಿಷ್ಠೆ ಬದಲಾಯಿಸಿ ಬೇರೆಯರಿಗೆ ಮತ ಚಲಾಯಿಸುವುದೂ ಉಂಟು. ಕಳೆದ ಬಾರಿ ಪಕ್ಷವೊಂದರ ಅಭ್ಯರ್ಥಿ ತಾನು ಹಂಚಿದ ಹಣದ ಲೆಕ್ಕಾಚಾರದಲ್ಲಿ ಗೆಲುವು ತಮ್ಮದೇ ಎಂದು ಬೀಗಿದ್ದರು. ಆದರೆ ಫಲಿತಾಂಶ ಬಂದಾಗ ಆ ಅಭ್ಯರ್ಥಿ ಸೋಲು ಅನುಭವಿಸಿದ್ದರು. ಹೀಗಾಗಿ ಹಣ ಹಂಚಿಕೆ ಮಾಡಲು ಅಭ್ಯರ್ಥಿಗಳ ಆತ್ಮೀಯರನ್ನು ನಿಯೋಜಿಸಿ ತಮಗೆ ಲಾಭ ಆಗಬಹುದಾದ ಮತದಾರನಿಗೆ ಮಾತ್ರ ಮೊತ್ತ ತಲುಪಿಸಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ.

Recommended Video

Mirage 2000 Fighter Jet : ಇನ್ನೂ ಏನ್ ಏನ್ ಕಳ್ಳತನ ಮಾಡ್ತಾರೋ! | Oneindia Kannada

English summary
Karnataka legislative council election will be held on December 10. In Maysuru and Chamarajanagar demand for husband of the gram panchayat women members.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X