• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪರಿಷತ್ ಫೈಟ್; ವೋಟಿಗಾಗಿ ಆಣೆ-ಪ್ರಮಾಣ, ಬಾಡೂಟ!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 05; ವಿಧಾನ ಪರಿಷತ್ ಚುನಾವಣೆ ಹತ್ತಿರವಾಗುತ್ತಿದ್ದಂತೆ ಗ್ರಾಮಾಂತರ ಪ್ರದೇಶದಲ್ಲಿ ಅಭ್ಯರ್ಥಿಗಳು ಬಿರುಸಿನ ಮತ‌ ಪ್ರಚಾರದಲ್ಲಿ ತೊಡಗಿದ್ದಾರೆ. ಮತದಾರನ ಒಲಿಸಿಕೊಳ್ಳಲು ನಾನಾ ಕಸರತ್ತು ಮಾಡುತ್ತಿರುವ ರಾಜಕಾರಣಿಗಳು ವೋಟಿಗಾಗಿ ಆಣೆ-ಪ್ರಮಾಣ ಮಾಡಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ತೋಟದ ಮನೆಗಳಲ್ಲಿ ಬಾಡೂಟದ ಘಮಲು ಹೆಚ್ಚತೊಡಗಿದೆ.

ಸಾಮಾನ್ಯವಾಗಿ ಚುನಾವಣೆ ಎಂದರೆ ಅಲ್ಲಿ ಝಣಝಣ ಕಾಂಚಾಣದ ಸದ್ದು ಜೋರಾಗಿರುತ್ತದೆ. ಇದರ ಬೆನ್ನಲ್ಲೇ ಎರಡು-ಮೂರು ಗ್ರಾಮ ಪಂಚಾಯಿತಿ ಸದಸ್ಯರನ್ನು ಒಟ್ಟಿಗೆ ಸೇರಿಸಿ ರಾತ್ರಿ ಖಾರದ ಊಟದ (ಬಾಡೂಟ) ವ್ಯವಸ್ಥೆಯೂ ಅಲ್ಲಲ್ಲಿ ನಡೆಯುತ್ತಿದೆ. ಪರಿಷತ್‌ಗೆ ಪ್ರತಿನಿಧಿಗಳಾಗಲು ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು, ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಆಣೆ ಎನ್ನುವುದು ಒಂಥರ ಮತಕ್ಕೆ ಅಧಿಕೃತ ರಸೀದಿಯಿದ್ದಂತೆ ಎಂದು ಪಕ್ಷಗಳ ಮುಖಂಡರು ಭಾವಿಸಿದ್ದಾರೆ.

ಪರಿಷತ್ ಫೈಟ್; ಬೆಂಗಳೂರು ಗ್ರಾಮಾಂತರದಲ್ಲಿ 'ಕೈ' ಗೆ ಜೆಡಿಎಸ್‍ ಭಯ!ಪರಿಷತ್ ಫೈಟ್; ಬೆಂಗಳೂರು ಗ್ರಾಮಾಂತರದಲ್ಲಿ 'ಕೈ' ಗೆ ಜೆಡಿಎಸ್‍ ಭಯ!

ಸಾಮಾನ್ಯವಾಗಿ ಗ್ರಾಮ ಪಂಚಾಯಿತಿ ಸದಸ್ಯರು ಯಾವುದೇ ಪಕ್ಷದ ಚಿಹ್ನೆಯ ಮೇಲೆ ಆಯ್ಕೆ ಆಗುವುದಿಲ್ಲ. ಹಾಗಾಗಿ ಹಲವಾರು ಸದಸ್ಯರು ನಾನಾ ಪಕ್ಷಗಳು ಆಯೋಜಿಸುವ ಸಭೆಗಳಲ್ಲಿ ಭಾಗವಹಿಸುತ್ತಾರೆ. ಬಹುತೇಕರು ಎರಡು ಪಕ್ಷಗಳ ಅಭ್ಯರ್ಥಿಗಳಿಗೂ ಮತ ನೀಡುವ ವಾಗ್ದಾನ ಮಾಡಿರುತ್ತಾರೆ.

ಪರಿಷತ್‌ ಫೈಟ್; ಮಹಿಳಾ ಸದಸ್ಯರ ಪತಿರಾಯರಿಗೆ ಫುಲ್ ಡಿಮ್ಯಾಂಡ್! ಪರಿಷತ್‌ ಫೈಟ್; ಮಹಿಳಾ ಸದಸ್ಯರ ಪತಿರಾಯರಿಗೆ ಫುಲ್ ಡಿಮ್ಯಾಂಡ್!

ಆದರೆ ಹಣ ಪಡೆದು ನಮಗೆ ವೋಟು ಹಾಕದೆ ಬೇರೆಯವರ ಕಡೆ ವಾಲುವ ಸಾಧ್ಯತೆಯೂ ಇರುತ್ತದೆ. ಇದಕ್ಕಾಗಿ ಆಣೆ ಪ್ರಮಾಣ ಮಾಡಿಕೊಳ್ಳಲಾಗುತ್ತದೆ. ಚುನಾವಣೆ ದಿನ ಹತ್ತಿರವಾಗುತ್ತಿದ್ದಂತೆ ಮತ ಗಳಿಕೆಯ ಟ್ರೆಂಡ್ ಗೊತ್ತಾಗುತ್ತದೆ. ಯಾರಿಗೆ ಎಷ್ಟು ಮತ ಬರಬಹುದು? ಎಂಬ ಸುಳಿವು ತಿಳಿಯುತ್ತದೆ. ಈ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು ಧಾರ್ಮಿಕತೆಯ ಮೊರೆ ಹೋಗಿದ್ದಾರೆ.

ಪರಿಷತ್; ರಾತ್ರೋರಾತ್ರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜೆಡಿಎಸ್ ಅಭ್ಯರ್ಥಿ! ಪರಿಷತ್; ರಾತ್ರೋರಾತ್ರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜೆಡಿಎಸ್ ಅಭ್ಯರ್ಥಿ!

ಎಣ್ಣೆ ಪಾರ್ಟಿ, ಭರ್ಜರಿ ಬಾಡೂಟ: ಈಗಾಗಲೇ ಎಲ್ಲಾ ಪಕ್ಷಗಳ ಮುಖಂಡರು ಪ್ರಚಾರದ ಕಣಕ್ಕೆ ಧುಮಿಕಿದ್ದಾರೆ. ಜೊತೆಗೆ ಪ್ರಚಾರ ನೆಪದಲ್ಲಿ ಕಳೆದ ನಾಲೈದು ದಿನಗಳಿಂದ ತೋಟದ ಮನೆಗಳು, ರೆಸಾರ್ಟ್, ಹೋಂ ಸ್ಟೇಗಳಲ್ಲಿ ಪ್ರತಿದಿನ ಬಾಡೂಟ ಮತ್ತು ಎಣ್ಣೆ ಪಾರ್ಟಿ ಭರ್ಜರಿಯಾಗಿ ನಡೆಯಲಾರಂಭಿಸಿವೆ.

ಕೆಲವರಿಗಂತೂ ಪ್ರವಾಸ ಕರೆದುಕೊಂಡು ಹೋಗುವ ಆಮಿಷವನ್ನೂ ಒಡ್ಡಲಾಗುತ್ತಿದೆ. ಕಳೆದ ಚುನಾವಣೆಯಲ್ಲಿ 5ರಿಂದ 10 ಸಾವಿರ ರೂ. ಇದ್ದ ಆಮಿಷದ ಮೊತ್ತ ಲಕ್ಷ ರೂ. ದಾಟಿ ಹೋಗಿದೆ. ಸಣ್ಣ ಕ್ಷೇತ್ರದಲ್ಲಿ ಪ್ರತಿ ಮತಕ್ಕೆ ರೇಟು 25 ಸಾವಿರ ರೂ. ಇದ್ದರೆ, ದೊಡ್ಡ ಕ್ಷೇತ್ರಗಳಲ್ಲಿ 50 ಸಾವಿರ ರೂ. ಸಾಮಾನ್ಯವಾಗಿದೆ.

"ಪರಿಷತ್‌ನಲ್ಲಿ ಗೆಲ್ಲಲು ಬೇಕಾದ ಎಲ್ಲಾ ಪ್ರಯತ್ನಗಳು ಪಕ್ಷಗಳು ಮಾಡುತ್ತಿವೆ. ಹಣ, ಬಾಡೂಟದ ನಂತರ ಈಗ ಗ್ರಾಮ ಪಂಚಾಯಿತಿ ಸದಸ್ಯರನ್ನು ಭಾವನಾತ್ಮಕ ವಾಗಿ ಮನವೊಲಿಸಲು ಅಭ್ಯರ್ಥಿಗಳು ದೇವರ, ಧರ್ಮದ ಅಸ್ತ್ರ ಬಳಸುತ್ತಿದ್ದಾರೆ. ಸೀಮಿತ ಸಂಖ್ಯೆಯ ಮತದಾರರಿರುವುದರಿಂದ ಮತ ಖಚಿತಪಡಿಸಿಕೊಳ್ಳಲು ಇದೀಗ ಆಣೆ ಪ್ರಮಾಣಗಳನ್ನು ಮಾಡಿಸತೊಡಗಿದ್ದಾರೆ" ಎನ್ನುತ್ತಾರೆ ಹೆಸರು ಬಹಿರಂಗಪಡಿಸಲಿಚ್ಛಿಸದ ಸ್ಥಳೀಯ ಸಂಸ್ಥೆ ಚುನಾಯಿತ ಪ್ರತಿನಿಧಿ.

ಪ್ರಚಾರಕ್ಕೆ ಪತ್ನಿಯರು ಸಾಥ್; ಪರಿಷತ್ ಪ್ರಚಾರ ಕಣದಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಅವರ ಪತ್ನಿಯರು ಸಾಥ್ ನೀಡುತ್ತಿದ್ದಾರೆ. ಮೊದಲೆಲ್ಲಾ ಅಭ್ಯರ್ಥಿಯಾದ ಪತಿಯ ಪರ ಪತ್ನಿಯರು ಪ್ರಚಾರಕ್ಕೆ ಮುಂದಾಗುತ್ತಿರಲಿಲ್ಲ. ಬಹುತೇಕರು ಚುನಾವಣೆಯಿಂದ ದೂರವೇ ಉಳಿಯುತ್ತಿದ್ದರು. ಮನೆಯಲ್ಲಿದ್ದು ಕಾರ್ಯಕರ್ತರು, ಮುಖಂಡರಿಗೆ ಊಟೋಪಚಾರ ಮಾಡುತ್ತಿದ್ದರು. ಆದರೆ, ಈಗ ಎಲ್ಲ ಚುನಾವಣೆಗಳಲ್ಲೂ ಅಭ್ಯರ್ಥಿಗಳ ಪತ್ನಿಯರು ಪ್ರಚಾರದಲ್ಲಿ ಪಾಲ್ಗೊಳುತ್ತಿದ್ದಾರೆ.

ಸ್ಥಳೀಯ ಸಂಸ್ಥೆಗಳಿಂದ 25 ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಡಿಸೆಂಬರ್ 10ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ 14ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆಯಲ್ಲಿ ಮತದಾನ ಮಾಡುವ ಗ್ರಾಮ ಪಂಚಾಯಿತಿ, ಪುರಸಭೆ, ಪಟ್ಟಣ ಪಂಚಾಯಿತಿ ಸದಸ್ಯರಿಗೆ ಭಾರೀ ಬೇಡಿಕೆ ಬಂದಿದೆ. ಮತದಾರರನ್ನು ಒಲಿಸಿಕೊಳ್ಳಲು ಕಸರತ್ತು ಮುಂದುವರೆದಿದೆ.

   ಈ ಐ ಪಿ ಎಲ್ ತಂಡಕ್ಕೆ ಶ್ರೇಯಸ್ ಕ್ಯಾಪ್ಟನ್. | Oneindia Kannada
   English summary
   Karnataka legislative council election will be held on December 10. Candidates organized Baduta for gram panchayat members vote
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X