ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಂದೆಯ ಚಾಮುಂಡೇಶ್ವರಿ ಸೋಲಿನ ಬಗ್ಗೆ ಯತೀಂದ್ರ ಏನಂತಾರೆ?

|
Google Oneindia Kannada News

ಮೈಸೂರು, ಫೆಬ್ರವರಿ 18: ನಮ್ಮ ತಂದೆ ಚಾಮುಂಡೇಶ್ವರಿ ಕ್ಷೇತ್ರದ ಸೋಲನ್ನು ಕ್ರಮೇಣ ಮರೆಯುತ್ತಿದ್ದಾರೆ. ಸೋಲಿನ ಆಘಾತ ಅವರನ್ನು ಇಷ್ಟು ದಿನ ಕಾಡಿತ್ತು ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಪ ಶಾಸಕರಾಗಿದ್ದಾಗಲೇ 80% ಎಲ್ಲಾ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈಗ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಜವಾಬ್ದಾರಿ ಹೊತ್ತಿದ್ದಾರೆ. ಈಗ ಲೋಕಸಭೆಯ ಚುನಾವಣೆಯ ಸಂಘಟನೆಗೆ ರಾಜ್ಯ ಸುತ್ತುತ್ತಿದ್ದಾರೆ. ವರುಣ ಕ್ಷೇತ್ರದಲ್ಲಿ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ.ನಾವು ಹುಡುಕಿ ಹುಡುಕಿ ಕೆಲಸ ಮಾಡುತ್ತಿದ್ದೇವೆ. ಸಣ್ಣಪುಟ್ಟ ಸಮಸ್ಯೆಗಳಿವೆ. ಅವುಗಳನ್ನು ಸರಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಅಪ್ಪನಂತೆ ಮಗ: ಯತೀಂದ್ರ ಸಿದ್ದರಾಮಯ್ಯ ಬಗ್ಗೆ ಅಧಿವೇಶನದಲ್ಲಿ ಮೆಚ್ಚುಗೆ ಅಪ್ಪನಂತೆ ಮಗ: ಯತೀಂದ್ರ ಸಿದ್ದರಾಮಯ್ಯ ಬಗ್ಗೆ ಅಧಿವೇಶನದಲ್ಲಿ ಮೆಚ್ಚುಗೆ

ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ಚರಿ ಕ್ಷೇತ್ರದ ಜೊತೆ ಅವಿನಾಭಾವ ಸಂಬಂಧವಿದೆ. ಆಗಾಗ ಕೆಲವೆಡೆ ನೋವಿನ ಸಂಕಟ ವ್ಯಕ್ತಪಡಿಸುತ್ತಾರೆ. ಸಭೆ-ಸಮಾರಂಭಗಳಲ್ಲಿ ತಂದೆಯವರು ಸೋಲಿನ ಬಗ್ಗೆ ಮಾತನಾಡುವುದು ಸಹಜ. ಚಾಮುಂಡಿ ಕ್ಷೇತ್ರದ ಬಗ್ಗೆ ಅವರು ಸಾಕಷ್ಟು ನಂಬಿಕೆ ಇಟ್ಟಿದ್ದರು. ಹೀಗಾಗಿ ಕ್ಷೇತ್ರದ ಜನ ಸೋಲಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.

MLA Yathindra Siddaramaiah reacts about Siddaramaiah defeat

ತಾವು ಮಂತ್ರಿ‌ಸ್ಥಾನದ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಯಾವುದೇ ಸ್ಥಾನ ಬಂದರು ನಿಭಾಯಿಸುತ್ತೇನೆ. ಪಕ್ಷ ಕೊಟ್ಟಾಗ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ನನಗೆ ಮಂತ್ರಿ ಸ್ಥಾನ ನೀಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ‌ವಿಚಾರ.

 ಸ್ವಗ್ರಾಮದಲ್ಲೇ ಯತೀಂದ್ರ ಸಿದ್ದರಾಮಯ್ಯ ಕಾರಿಗೆ ಮುತ್ತಿಗೆ ಹಾಕಿದ ಕೈ ಕಾರ್ಯಕರ್ತರು ಸ್ವಗ್ರಾಮದಲ್ಲೇ ಯತೀಂದ್ರ ಸಿದ್ದರಾಮಯ್ಯ ಕಾರಿಗೆ ಮುತ್ತಿಗೆ ಹಾಕಿದ ಕೈ ಕಾರ್ಯಕರ್ತರು

ಯತೀಂದ್ರ ಸಿದ್ದರಾಮಯ್ಯ ಮಾತನಾಡುವಾಗ ಸಿದ್ದರಾಮಯ್ಯ ಮಾಜಿ ಸಿಎಂ ಅನ್ನುವ ಬದಲಿಗೆ ಮರೆತು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಇಡೀ ರಾಜ್ಯದ ಜವಬ್ದಾರಿ ಹೊತ್ತಿದ್ದಾರೆ ಎಂದು ಹೇಳಿದರು. ಸಿದ್ದರಾಮಯ್ಯ ಅವರು ಲೋಕಸಭೆಯ ಚುನಾವಣೆಯ ಸಂಘಟನೆಗೆ ರಾಜ್ಯ ಸುತ್ತುತ್ತಿದ್ದಾರೆ. ಹೀಗಿರುವಾಗ ಚಾಮುಂಡೇರಿ ಸೋಲು ನೆನಪಿಲ್ಲ, ಸಿಎಂ ಆಗಿ ರಾಜ್ಯದ ಜವಬ್ದಾರಿ ಹೊತ್ತಿದ್ದಾರೆ ಎಂದು ಬಾಯಿ ತಪ್ಪಿ ನುಡಿದರು.

English summary
MLA Yathindra Siddaramaiah reacts about Siddaramaiah defeat in Chamundeshwari constituency.He said my father slowly forgetting the defeat, he has a close relationship at that constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X