ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್ ನಾಯಕರಿಂದ ಥರ್ಡ್ ಕ್ಲಾಸ್ ರಾಜಕೀಯ: ಶಾಸಕ ರಾಮದಾಸ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಆಗಸ್ಟ್ 13: ಬೆಂಗಳೂರಿನ ಕೆ.ಜಿ ಹಳ್ಳಿ ಹಾಗೂ ಡಿ.ಜೆ.ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿಂದು ಪ್ರತಿಕ್ರಿಯಿಸಿದ ಶಾಸಕ ಎಸ್.ಎ ರಾಮದಾಸ್, ಕಾಂಗ್ರೆಸ್ ನಾಯಕರಿಂದ ಥರ್ಡ್ ಕ್ಲಾಸ್ ರಾಜಕೀಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.

ಇಂತಹ ಸಂದರ್ಭದಲ್ಲಿ ತಮ್ಮದೇ ದಲಿತ ಶಾಸಕನ ಪರವಾಗಿ ನಿಲ್ಲದೆ ಓಟ್ ಬ್ಯಾಂಕ್ ರಾಜಕೀಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಶಾಸಕನ ಬೆಂಬಲಿಗನನ್ನು ಬಿಜೆಪಿ ಕಾರ್ಯಕರ್ತ ಅಂತ ಹೇಳಿ ಓಲೈಕೆಗೆ ನಿಂತಿದ್ದಾರೆ. ತಮ್ಮದೇ ಶಾಸಕರ ಮನೆ ಮೇಲೆ ದಾಳಿ ಮಾಡಿದರೂ ಕಾಂಗ್ರೆಸ್ ರಕ್ಷಣೆಗೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.

Mysuru: MLA SA Ramadas Allegation On Congress Party Leaders

 ಬೆಂಕಿ ಹಚ್ಚಿದ ಕಿಡಿಗೇಡಿಗಳು ಯಾರೋ, ಬಲಿಯಾದವರೋ ಇನ್ಯಾರೋ: ಜಮೀರ್ ಅಹ್ಮದ್ ಬೆಂಕಿ ಹಚ್ಚಿದ ಕಿಡಿಗೇಡಿಗಳು ಯಾರೋ, ಬಲಿಯಾದವರೋ ಇನ್ಯಾರೋ: ಜಮೀರ್ ಅಹ್ಮದ್

ತಪ್ಪು ಯಾರೇ ಮಾಡಿದ್ದರೂ ಅವರಿಗೆ ಕಾನೂನು ರೀತಿಯ ಶಿಕ್ಷೆ ಆಗಬೇಕು. ಶಾಂತಿಯುತವಾಗಿರುವ ರಾಜ್ಯದಲ್ಲಿ ಅನಾವಶ್ಯಕವಾಗಿ ಗಲಭೆ ಮಾಡಲಾಗುತ್ತಿದೆ. ಈ ರೀತಿಯ ಘಟನೆಗಳನ್ನು ಎಲ್ಲಾ ಪಕ್ಷಗಳೂ ಖಂಡಿಸಬೇಕು. ಗಲಭೆಕೋರರ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಶಾಸಕ ಎಸ್.ರಾಮದಾಸ್ ತಿಳಿಸಿದರು.

English summary
MLA SA Ramadas, who was response to a riot incident at the DJ Halli, blamed on Congress leaders for allegedly doing third-class politics by Congress leaders
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X