ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿರೋ ಕೆಲ ವಿಷಸರ್ಪಗಳಿಂದ ದೂರವಿರಬೇಕು: ಸಾ.ರಾ ಮಹೇಶ್

|
Google Oneindia Kannada News

ಮೈಸೂರು, ಜೂನ್ 7: ಮೈಸೂರು ಜಿಲ್ಲೆಯಲ್ಲಿ ಕೆಲ ಹಾವುಗಳಿವೆ, ಅಂತಹ ವಿಷಸರ್ಪಗಳಿಂದ ಹುಷಾರಾಗಿರಬೇಕು ಎಂದು ಕೆ.ಆರ್ ನಗರ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ವ್ಯಂಗ್ಯವಾಗಿ ಮಾತನಾಡಿದ್ದಾರೆ.

Recommended Video

Chiranjeevi Sarja | ಸ್ಯಾಡಲ್ ವುಡ್ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ | Oneindia Kannada

ಮೈಸೂರು ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಮೈಸೂರಿನಲ್ಲಿ ಕೆಲವು ಹಾವು ಕಚ್ಚಿದರೆ ವಿಷ, ಇನ್ನೂ ಕೆಲವು ಮೂಸಿದರೆ ವಿಷ ಇದೆ. ಅಂತಹ ಹಾವುಗಳಿಂದ ಹುಷಾರಾಗಿ ಇರಬೇಕು ಎಂದು ಹೇಳಿದರು.

ಮೈಮುಲ್ ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲ: ಅಧ್ಯಕ್ಷ ಸಿದ್ದೇಗೌಡ ಮೈಮುಲ್ ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲ: ಅಧ್ಯಕ್ಷ ಸಿದ್ದೇಗೌಡ

ಚಾಮರಾಜನಗರ ಹಾಲು ಒಕ್ಕೂಟದ ಬಗ್ಗೆ ಜಂಟಿ ಸಮಿತಿ ವರದಿ ನೀಡಿದ್ದು, ಅಲ್ಲಿನ ಆಡಳಿತ ಮಂಡಳಿಯನ್ನು ಅಮಾನತು ಮಾಡಿ ಎಂದು ಹೇಳಿದೆ. ಅಲ್ಲಿನ ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿ ಇರಲಿಲ್ಲ ಎಂದೂ ವರದಿಯಲ್ಲಿ ಹೇಳಿದೆ. ಅಲ್ಲಿ ಪರೀಕ್ಷೆ ನಡೆಸಿದ ಸಂಸ್ಥೆಯೇ ಮೈಸೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟ (ಮೈಮುಲ್) ದಲ್ಲಿ ಪರೀಕ್ಷೆ ನಡೆಸಿದೆ ಎಂದರು.

MLA Sa Ra Mahesh React About Mymul Recruitment

ಅಲ್ಲಿ ಅಕ್ರಮ ಮಾಡಿರುವ ಸಂಸ್ಥೆಯನ್ನು ಇಲ್ಲಿ ಒಪ್ಪಲು ಹೇಗೆ ಸಾಧ್ಯವೆಂದು ಪ್ರಶ್ನಿಸಿದ್ದಾರೆ. ನಮಗೆ ನ್ಯಾಯ ಸಿಗುವ ಭರವಸೆ ಇದೆ. ಅದಕ್ಕಾಗಿ ಹೋರಾಟ ಮಾಡ್ತಿದ್ದೇನೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದರು.

ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸುವ ಕುರಿತು ಮಾತನಾಡಿದ ಸಾ.ರಾ ಮಹೇಶ್, ದೇವೇಗೌಡರು ರಾಜ್ಯಸಭೆಗೆ ಸ್ಪರ್ಧಿಸುವಂತೆ ನಾವೆಲ್ಲ ಒತ್ತಾಯಿಸಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ.

ಮಂಗಳವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನ. ಸೋಮವಾರ ದೇವೇಗೌಡರನ್ನು ಮನವೊಲಿಸುತ್ತೇವೆ. ಒಪ್ಪಲಿಲ್ಲ ಎಂದರೆ ಮಂಗಳವಾರ ಎಲ್ಲ ಜೆಡಿಎಸ್ ಶಾಸಕರು ದೇವೇಗೌಡರ ಮನೆಗೆ ಭೇಟಿ ನೀಡಿ ಒಪ್ಪಿಸುತ್ತೇವೆ. ದೇವೇಗೌಡರು ಒಪ್ಪಿದರೆ ಬಾಕಿ ಬೇಕಾಗಿರುವ ಮತಗಳಿಗೆ ಯಾರ ಬಳಿ ಹೋಗಬೇಕು ಎಂದು ಚರ್ಚೆ ಮಾಡುತ್ತೇವೆ ಎಂದರು.

English summary
MLA Rahesh has spoken about illegal recruitment in Mymul.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X