ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ರೋಹಿಣಿ ಸಿಂಧೂರಿ ಆಂಧ್ರಕ್ಕೆ ಹೋಗಿ ಮಕ್ಕಳನ್ನಾಡಿಸಲಿ''

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 10: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸದ್ದು ಮಾಡುತ್ತಿರುವ ಭೂ ಒತ್ತುವರಿ ವಿಷಯಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕೆ.ಆರ್ ನಗರ ಶಾಸಕ ಸಾ.ರಾ ಮಹೇಶ್ ಸಮರ ಸಾರಿದ್ದಾರೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಾಜಕಾಲುವೆ ಒತ್ತುವರಿ ಕುರಿತು ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಮ್ಮ ವಿರುದ್ಧ ಮಾಡಿರುವ ಆರೋಪ ಸುಳ್ಳಾದರೆ ಅವರನ್ನು ಐಎಎಸ್ ಹುದ್ದೆಯಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಅಷ್ಟೇ ಅಲ್ಲದೆ ರೋಹಿಣಿ ಸಿಂಧೂರಿಯನ್ನು ಮಕ್ಕಳನ್ನು ಆಡಿಸಿಕೊಂಡು, ಅಡಿಗೆ ಮಾಡಿಕೊಂಡಿರಲು ಅವರನ್ನು ಆಂಧ್ರಪ್ರದೇಶಕ್ಕೆ ಕಳುಹಿಸಬೇಕು ಎಂದು ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಟೀಕಿಸಿದ್ದಾರೆ.

Mysuru: MLA Sa Ra Mahesh Expressed Outrage On IAS Officer Rohini Sindhuri

ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿ ಬಳಿ ಪ್ರತಿಭಟನೆ ನಡೆಸಿ ಮಾತಾಡಿದ ಸಾ.ರಾ ಮಹೇಶ್, ಮೈಸೂರಿನ ದಟ್ಟಗಳ್ಳಿಯಲ್ಲಿನ ಸಾರಾ ಕನ್ವೆನ್ಷನ್ ಹಾಲ್ ರಾಜಕಾಲುವೆ ಮೇಲೆ ನಿರ್ಮಾಣವಾಗಿದೆ ಎಂದು ಮೈಸೂರಿನ ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ದಾಖಲೆ ಬಿಡುಗಡೆ ಮಾಡಿದ್ದಾರೆ.

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ದಾಖಲೆ ಪ್ರಕಾರ ಅದು ನಿಜವೇ ಆಗಿದ್ದರೆ, ಇಡೀ ಕನ್ವೆನ್ಷನ್ ಹಾಲ್ ಗವರ್ನರ್ ಹೆಸರಿಗೆ ಬರೆದುಕೊಡ್ತೇನೆ. ಕಾನೂನು ವಿರುದ್ಧವಾಗಿ ನಾನು ಏನೇ‌ ಮಾಡಿದರೂ ಕ್ರಮ ಕೈಗೊಳ್ಳಿ. ನನ್ನ ಒಡೆತನದಲ್ಲಿರುವ ಸಾ‌.ರಾ ಕಲ್ಯಾಣ ಮಂಟಪ ರಾಜಕಾಲುವೆ ಮೇಲೆ ನಿರ್ಮಾಣ ಆಗಿಲ್ಲ ಅಂತ ಸ್ಪಷ್ಟ ಪಡಿಸಿದರು.

English summary
JDS MLA Sa Ra Mahesh has said that IAS officer Rohini Sindhuri should return to Andhra Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X