ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸ್ಸೆಸ್ಸೆಲ್ಸಿ ಪರೀಕ್ಷೆ: ಮೈಸೂರಿನಲ್ಲಿ ವಿದ್ಯಾರ್ಥಿಗಳಿಗೆ ಶುಭ ಕೋರಿದ ಶಾಸಕ ರಾಮದಾಸ್

|
Google Oneindia Kannada News

ಮೈಸೂರು, ಮಾರ್ಚ್ 21:ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಇಂದಿನಿಂದ ಆರಂಭಗೊಂಡಿವೆ.ಇಂದಿನಿಂದ ನಡೆಯಲಿರುವ ಪರೀಕ್ಷೆಗೆ 39,173 ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಯು 138 ಕೇಂದ್ರಗಳಲ್ಲಿ ನಡೆಯುತ್ತಿದ್ದು, ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಹಾಗೂ ಸಿಸಿಟಿವಿ ಅಳವಡಿಸಲಾಗಿದೆ.

ನಿಷೇಧಿತ ವಲಯದಲ್ಲಿ ಯಾವುದೇ ರೀತಿಯಲ್ಲಿ ಪರೀಕ್ಷೆಯಲ್ಲಿ ನಕಲು ಹೊಡೆಯಲು ಸಹಾಯ ಮಾಡುವುದು, ಚೀಟಿ ಅಥವಾ ಇನ್ನಿತರ ರೀತಿಯಲ್ಲಿ ಉತ್ತರಗಳನ್ನು ಬರೆದು ಹಂಚುವುದು, ಇನ್ಯಾವುದೇ ವಸ್ತುಗಳನ್ನು ಹಂಚುವುದು, ರವಾನಿಸುವುದು ಮತ್ತಿತರ ಚಟುವಟಿಕೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ, ವಿದ್ಯಾರ್ಥಿಗಳೇ ಆಲ್‌ ದಿ ಬೆಸ್ಟ್‌ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ, ವಿದ್ಯಾರ್ಥಿಗಳೇ ಆಲ್‌ ದಿ ಬೆಸ್ಟ್‌

ಪರೀಕ್ಷಾ ಕೇಂದ್ರದೊಳಗೆ ಮೊಬೈಲ್, ಸ್ಮಾರ್ಟ್‌ವಾಚ್ ಮತ್ತು ಇನ್ನಿತರೆ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಒಯ್ಯುವುದು ಮತ್ತು ಬಳಸುವುದನ್ನು ನಿಷೇಧಿಸಲಾಗಿದೆ.

MLA Ramdas wished students in Mysuru

ಶುಭಕೋರಿದ ಶಾಸಕ ರಾಮ್ ದಾಸ್

ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಾರಂಭವಾಗಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಶಾಸಕ ಎಸ್.ಎ. ರಾಮದಾಸ್ ಪರೀಕ್ಷೆ ಬರೆಯುವ ಮಕ್ಕಳಿಗೆ ಶುಭ ಕೋರಿದ್ದಾರೆ. ಮೈಸೂರಿನ ಚಾಮುಂಡಿಪುರಂ ವೃತ್ತದಲ್ಲಿ ಇರುವ ಸೇಂಟ್ ಮೇರಿಸ್ ಶಾಲೆಗೆ ಭೇಟಿ ನೀಡಿದ ರಾಮದಾಸ್, ಮಕ್ಕಳಿಗೆ ಪೆನ್ನು ಹಾಗೂ ಕೆಂಪು ಗುಲಾಬಿ ಕೊಟ್ಟು ವಿಶ್ ಮಾಡಿದರು.

 ಮಾರ್ಚ್ 21ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ, ನಿಷೇಧಾಜ್ಞೆ ಜಾರಿ ಮಾರ್ಚ್ 21ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ, ನಿಷೇಧಾಜ್ಞೆ ಜಾರಿ

ಈ ಸಂದರ್ಭದಲ್ಲಿ ಮಾತನಾಡಿದ ರಾಮದಾಸ್, ಎಸ್ಸೆಸ್ಸೆಲ್ಸಿ ಪರೀಕ್ಷೆ ಇಂದಿನಿಂದ ಪ್ರಾರಂಭವಾಗಿದ್ದು, ಸಹಜವಾಗಿ ಮೊದಲನೇ ಬಾರಿಗೆ ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ಭಯದ ವಾತಾವರಣವಿರುತ್ತದೆ.

MLA Ramdas wished students in Mysuru

ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಮೈಸೂರು ಜಿಲ್ಲೆ ರಾಜ್ಯಕ್ಕೆ 23ನೇ ಸ್ಥಾನವನ್ನು ಪಡೆದುಕೊಂಡಿದ್ದು, ಮೈಸೂರಿನಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲೆಯಲ್ಲಿ ಇರುವ 5,500 ಮಕ್ಕಳಿಗೆ ಕಳೆದ 4 ತಿಂಗಳಿಂದ ವಿಶೇಷವಾದ ತರಬೇತಿ ನೀಡಲಾಗುತ್ತಿತ್ತು. ಈ ತರಬೇತಿಯಿಂದ ರಾಜ್ಯಕ್ಕೆ ಮೊದಲನೇ ಸ್ಥಾನ ಬರಬೇಕೆಂಬ ಪ್ರಯತ್ನವನ್ನು ನಿರಂತರವಾಗಿ ನಡೆಸಲಾಗುತ್ತಿತ್ತು ಎಂದರು.

 ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನಕ್ಕೆ ಸಾಫ್ಟ್‌ವೇರ್‌, ಏಪ್ರಿಲ್‌ಗೆ ಫಲಿತಾಂಶ ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನಕ್ಕೆ ಸಾಫ್ಟ್‌ವೇರ್‌, ಏಪ್ರಿಲ್‌ಗೆ ಫಲಿತಾಂಶ

ನಮ್ಮ ಆಸರೆ ಸಂಸ್ಥೆಯಿಂದ ಎಲ್ಲ ಶಾಲೆಯ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಗೈಡ್ ಪುಸ್ತಕವನ್ನು ಕೊಡಲಾಗಿತ್ತು. ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳು ಯುದ್ಧಕ್ಕೆ ಹೋಗುವ ಯೋಧರಂತೆ ಧೈರ್ಯವಾಗಿ ಹೋಗಬೇಕೆಂಬ ಕಲ್ಪನೆಯಿಂದ ಪ್ರಧಾನಿ ಮೋದಿಯವರು ಬರೆದಿರುವ 'ಎಕ್ಸಾಮ್ ವಾರಿಯರ್ಸ್' ಪುಸ್ತಕದ ತುಣುಕುಗಳನ್ನು ಎಲ್ಲ ಶಾಲೆಗೆ ತಲುಪಿಸಿದ್ದೆವು ಎಂದು ತಿಳಿಸಿದರು.

English summary
SSLC exam 2019:MLA Ramdas wished students in Mysuru. Ramdas, who visited St. Mary's School and gave a pen and a red rose to students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X