ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೃಷ್ಣರಾಜ ಕ್ಷೇತ್ರವನ್ನು ಕೊರೊನಾಮುಕ್ತವಾಗಿಸಲು ರಾಮದಾಸ್‌ ಯತ್ನ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 24: ಮೈಸೂರು ನಗರದಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಸೋಂಕಿನ ನಿಯಂತ್ರಣಕ್ಕೆ ಮೈಸೂರು ನಗರದಲ್ಲಿ ಆಯಾ ವಿಧಾನಸಭಾ ಕ್ಷೇತ್ರಗಳನ್ನು ವಿಕೇಂದ್ರೀಕರಿಸಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಕೃಷ್ಣರಾಜ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಗುರುವಾರ ಪ್ರತ್ಯೇಕ ಕೋವಿಡ್-19 ಪರೀಕ್ಷಾ ಕೇಂದ್ರವನ್ನು ಶಾಸಕ ಎಸ್.ಎ.ರಾಮದಾಸ್ ಮೈಸೂರು ಮಕ್ಕಳ ಕೂಟದ ಆವರಣದಲ್ಲಿ ಉದ್ಘಾಟಿಸಿದರು.

Recommended Video

The Indian Premier League (IPL) 2020 is all set to kick-off | Oneindia Kannada

ಈ ಸಂದರ್ಭ ಮಾತನಾಡಿದ ಶಾಸಕರು, "ಮೈಸೂರಿನಲ್ಲಿ ಕೊರೊನಾ ಸಂಖ್ಯೆ ಹೆಚ್ಚುತ್ತಿರುವ ಜೊತೆಗೆ ಸೋಂಕಿನಿಂದ ಸಾವಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ಕೃಷ್ಣರಾಜ ಕ್ಷೇತ್ರಕ್ಕೆ ಅಧಿಕಾರಿಗಳ ಕಾರ್ಯಪಡೆ ರಚಿಸಿ ಅವರಿಗೆ ಪ್ರತ್ಯೇಕ ಜವಾಬ್ದಾರಿಗಳನ್ನು ಹಂಚಲಾಗಿದೆ. ಈ ಕಾರ್ಯಪಡೆ ನಿರಂತರ ಕಾರ್ಯನಿರ್ವಹಿಸಿ ಕೃಷ್ಣರಾಜ ಕ್ಷೇತ್ರವನ್ನು ಕೋವಿಡ್ ನಿಂದ ಸಾವಿಲ್ಲದ ಕ್ಷೇತ್ರವನ್ನಾಗಿ ಪರಿವರ್ತಿಸಲು, ಪ್ರತ್ಯೇಕ ಕೋವಿಡ್-19 ಪರೀಕ್ಷಾ ಕೇಂದ್ರಗಳನ್ನು ಪ್ರಾರಂಭಿಸಲು ನಿರ್ಧರಿಸಿ ಇಂದು ಮೈಸೂರು ಮಕ್ಕಳ ಕೂಟದ ಆವರಣದಲ್ಲಿ ಪರೀಕ್ಷಾ ಕೇಂದ್ರ ಉದ್ಘಾಟಿಸಲಾಯಿತು" ಎಂದರು.

MLA Ramdas Inauguarated Separate Covid 19 Testing Centre In Mysuru

 ಮೈಸೂರಲ್ಲಿ ಡೆತ್‌ ರೇಟ್‌ ಜಾಸ್ತಿ ಇರುವೆಡೆ ಹೆಚ್ಚಿನ ನಿರ್ಬಂಧ: ಜಿಲ್ಲಾಧಿಕಾರಿ ಮೈಸೂರಲ್ಲಿ ಡೆತ್‌ ರೇಟ್‌ ಜಾಸ್ತಿ ಇರುವೆಡೆ ಹೆಚ್ಚಿನ ನಿರ್ಬಂಧ: ಜಿಲ್ಲಾಧಿಕಾರಿ

ಕೃಷ್ಣರಾಜ ಕ್ಷೇತ್ರದಲ್ಲಿ ಒಟ್ಟು 115 ಕಂಟೈನ್ಮೆಂಟ್ ಝೋನ್ ಗಳಿದ್ದು, ಝೋನ್ ಗಳನ್ನು ಸ್ಯಾನಿಟೈಸ್ ಮಾಡುವ ಕಾರ್ಯ ನಡೆಯುತ್ತಿದೆ. ಜೊತೆಗೆ 1 ವಲಯಕ್ಕೆ ಒಂದರಂತೆ ಆಂಬುಲೆನ್ಸ್ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಕಂಟೈನ್ಮೆಂಟ್ ಝೋನ್ ನಲ್ಲಿರುವ ಮನೆಗಳಿಗೆ ಅವಶ್ಯಕವಾಗಿರುವ ಪದಾರ್ಥಗಳನ್ನು ಒದಗಿಸುವ ದೃಷ್ಟಿಯಿಂದ ಪ್ರತ್ಯೇಕವಾಗಿ ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.

English summary
MLA Ramdas inaugurated separate covid 19 testing centre in Krishnaraja constituency in mysuru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X