ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆತ್ಮಹತ್ಯೆ ಯತ್ನ ಪ್ರಕರಣ: ಶಾಸಕ ರಾಮದಾಸ್‌ ಖುಲಾಸೆ

|
Google Oneindia Kannada News

ಮೈಸೂರು, ಏಪ್ರಿಲ್ 3:ಮಹಿಳೆಯೊಬ್ಬರ ಆರೋಪದಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣದಿಂದ ಮಾಜಿ ಸಚಿವ, ಶಾಸಕ ರಾಮದಾಸ್ ಅವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

2014ರಲ್ಲಿ ಪ್ರೇಮಕುಮಾರಿ ಎಂಬುವವರು ರಾಮದಾಸ್ ನನ್ನನ್ನು ಪ್ರೀತಿಸಿ ವಂಚಿಸಿದ್ದಾರೆಂದು ಮಾಧ್ಯಮಗಳ ಮೂಲಕ ಆರೋಪಿಸಿದ್ದರು. ಇದರಿಂದ ಮನನೊಂದ ರಾಮದಾಸ್ ಅವರು 2014ರ ಫೆ.11 ರಂದು ಆತ್ಮಹತ್ಯೆಗೆ ಯತ್ನಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಮೈಸೂರಿನ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ರಾಮದಾಸ್ ಬೆನ್ನು ಬಿಡದ ಪ್ರೇಮಕುಮಾರಿ, ಕಚೇರಿ ಮುಂದೆ ಪ್ರತಿಭಟನೆರಾಮದಾಸ್ ಬೆನ್ನು ಬಿಡದ ಪ್ರೇಮಕುಮಾರಿ, ಕಚೇರಿ ಮುಂದೆ ಪ್ರತಿಭಟನೆ

ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಸಿಐಡಿ ಪೊಲೀಸರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ನ್ಯಾಯಾಲಯ ಅವರನ್ನು ಆರೋಪದಿಂದ ಖುಲಾಸೆಗೊಳಿಸಿ ಆದೇಶಿಸಿದೆ.

MLA Ramdas has been acquitted by a special court in Bangalore

 ಮಾಜಿ ಸಚಿವ ರಾಮ್ ದಾಸ್ ಗೆ ಮತ್ತೆ 'ಪ್ರೇಮ' ಸಂಕಟ? ಮಾಜಿ ಸಚಿವ ರಾಮ್ ದಾಸ್ ಗೆ ಮತ್ತೆ 'ಪ್ರೇಮ' ಸಂಕಟ?

ವೈದ್ಯರು ಕೋರ್ಟ್ ನಲ್ಲಿ ನುಡಿದ ಸಾಕ್ಷಿಯಲ್ಲಿ, ಆರೋಪಿಯು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಅಂತೆಯೇ ವೈದ್ಯರ ವರದಿ ಹೊರತಾದ ಸಾಕ್ಷ್ಯಗಳೂ ಈ ಪ್ರಕರಣದಲ್ಲಿ ಲಭ್ಯವಿಲ್ಲ. ಆದ್ದರಿಂದ ರಾಮದಾಸ್ ಅವರನ್ನು ಆರೋಪ ಮುಕ್ತಗೊಳಿಸಲಾಗಿದೆ.

English summary
Former minister, MLA Ramdas has been acquitted by a special court in Bangalore for allegedly attempting suicide case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X