ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾ ಅಣತಿಯಿದ್ದರೆ ಯಾರಾದರೂ ಅಧಿಕಾರ ಹಿಡಿಯಬಹುದು: ಶಾಸಕ ನಾಗೇಂದ್ರ

|
Google Oneindia Kannada News

ಮೈಸೂರು, ಆಗಸ್ಟ್ 22: "ಮಾಜಿ ಸಚಿವ ಸಾ ರಾ ಮಹೇಶ್ ಬಳಿ ಫೋನ್ ಟ್ಯಾಪಿಂಗ್ ಕುರಿತಾದ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಅದನ್ನು ಸಹ ತನಿಖೆಗೆ ಒಳಪಡಿಸಲು ಆಗ್ರಹಿಸಲಾಗುವುದು" ಎಂದಿದ್ದಾರೆ ಶಾಸಕ ನಾಗೇಂದ್ರ.

ಯಡಿಯೂರಪ್ಪ ಸಂಪುಟ- ಸಂಕಟ: ಡಿಕೆಶಿ ನುಡಿದ ಭವಿಷ್ಯ ನಿಜವಾಗುತ್ತಿದೆಯಾ?ಯಡಿಯೂರಪ್ಪ ಸಂಪುಟ- ಸಂಕಟ: ಡಿಕೆಶಿ ನುಡಿದ ಭವಿಷ್ಯ ನಿಜವಾಗುತ್ತಿದೆಯಾ?

"ಹಿಂದೆ ಸರ್ಕಾರವಿದ್ದಾಗ ಕುಮಾರಸ್ವಾಮಿ ವಿರೋಧಿ ಪಾಳಯದಲ್ಲಿದ್ದರು. ಆಗ ಯಾಕೆ ಅವರು ಈ ಬಗ್ಗೆ ಒತ್ತಾಯ ಮಾಡಲಿಲ್ಲ. ಈಗ ಅವರ ಮೇಲೆ ಆರೋಪ ಬಂದ ಕೂಡಲೇ ಹಿಂದಿನದ್ದನ್ನು ತನಿಖೆ ನಡೆಸಿ ಎಂದು ಕೇಳುತ್ತಿರುವುದರಲ್ಲಿ ಯಾವುದೇ ಅರ್ಥ ಇಲ್ಲ. ಫೋನ್ ಟ್ಯಾಪಿಂಗ್ ನಡೆದಿರುವ ಬಗ್ಗೆ ಅನುಮಾನ ಸ್ಪಷ್ಟವಾಗಿರುವುದರಿಂದ ಸಿಬಿಐ ತನಿಖೆಗೆ ರಾಜ್ಯ ಸರಕಾರ ಆದೇಶಿಸಿರುವುದು. ಅವರೇ ಈ ಹಿಂದೆ ಅಧಿಕಾರದಲ್ಲಿದ್ದರು. ಆಗ ಸಚಿವರಾಗಿದ್ದ ಸಾ.ರಾ ಮಹೇಶ್ ಯಾಕೆ ತನಿಖೆ ಮಾಡಿಸಲಿಲ್ಲ" ಎಂದು ವ್ಯಂಗ್ಯವಾಡಿದರು.

MLA Nagendra Reaction on Cabinet expansion

ಮೈಸೂರಿನ ಭಾಗದ ನಾಯಕರಿಗೆ ಸಚಿವ ಸ್ಥಾನ ಇಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, "ಮುಂದಿನ ಹಂತದಲ್ಲಿ ಮೈಸೂರು ಭಾಗಕ್ಕೆ ಸಚಿವ ಸ್ಥಾನ ನೀಡುವ ಭರವಸೆ ಇದೆ. ಈಗಷ್ಟೆ ಸರ್ಕಾರ ರಚನೆಯಾಗಿ 17 ಜನ ಸಚಿವರಾಗಿದ್ದಾರೆ. ಹೈಕಮಾಂಡ್ ತೀರ್ಮಾನವನ್ನು ನಾವು ಪ್ರಶ್ನೆ ಮಾಡುವ ಹಾಗಿಲ್ಲ. ರಾಮ್ ದಾಸ್ ಗೆ ಸಚಿವ ಸ್ಥಾನ ಸಿಗುವ ಭರವಸೆ ಇದೆ. ಅತೃಪ್ತ ಶಾಸಕರು ದೆಹಲಿ ಮುಖಂಡರನ್ನು ಭೇಟಿ ಮಾಡಿದ್ದಾರೆ. ಅದರಲ್ಲಿ ತಪ್ಪೇನಿದೆ. ಅಮಿತ್ ಶಾ ಅಣತಿಯಿದ್ದರೆ ಯಾರು ಬೇಕಾದರೂ ಅಧಿಕಾರ ಹಿಡಿಯಬಹುದು" ಎಂದರು.

English summary
MLA Nagendra Reaction on Cabinet expansion. He said that, we have confidence that next round cabinet expansion time Ramdas will get ticket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X