ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ಬರುವ ಮಾಹಿತಿ ಕೊಡದಿದ್ದಕ್ಕೆ ಅಧಿಕಾರಿಗೆ ನಿಂದಿಸಿದ ಶಾಸಕ ನಾಗೇಂದ್ರ

By ಮೈಸೂರು ಪ್ರತಿನಿಧಿ
|
Google Oneindia Kannada News

Recommended Video

ಸಿಎಂ ಬರುವ ಮಾಹಿತಿ ಕೊಡದಿದ್ದಕ್ಕೆ ಅಧಿಕಾರಿಗೆ ನಿಂದಿಸಿದ ಶಾಸಕ ನಾಗೇಂದ್ರ | Oneindia Kannada

ಮೈಸೂರು, ಫೆಬ್ರವರಿ 19: ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ, "ಸಿಎಂ ಬರಬೇಕಾದ್ರೆ ಹೇಳೋಕೆ ಆಗಲ್ವಾ" ಅಂತ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಅವಾಚ್ಯ ಶಬ್ದದಿಂದ ನಿಂದಿಸಿದ ಘಟನೆ ಬೆಳಕಿಗೆ ಬಂದಿದೆ.

ಸಿಎಂ ಕುಮಾರಸ್ವಾಮಿ ಬರುತ್ತಾರೆ ಎಂದು ಸ್ಥಳೀಯ ಶಾಸಕರಿಗೆ ಅಧಿಕಾರಿಗಳು ಮಾಹಿತಿ ನೀಡದ್ದರಿಂದ ಶಾಸಕ ನಾಗೇಂದ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಸಕನಿಂದ ನಿಂದನೆಗೆ ಒಳಗಾದ ಅಧಿಕಾರಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಜಿ.ಆರ್.ಸುರೇಶ್.

ಕಾಂಗ್ರೆಸ್ ವಿರುದ್ಧ ಮತ್ತೆ ಗರಂ ಆದ ಸಿಎಂ ಎಚ್.ಡಿ. ಕುಮಾರಸ್ವಾಮಿಕಾಂಗ್ರೆಸ್ ವಿರುದ್ಧ ಮತ್ತೆ ಗರಂ ಆದ ಸಿಎಂ ಎಚ್.ಡಿ. ಕುಮಾರಸ್ವಾಮಿ

ಈ ಹಿನ್ನೆಲೆಯಲ್ಲಿ ಮಾತನಾಡಿದ ನಾಗೇಂದ್ರ ಅವರು, ನನ್ನನ್ನ ಪದೇ ಪದೇ ಅಧಿಕಾರಿಗಳು ನಿರ್ಲಕ್ಷ ಮಾಡ್ತಾ ಇದ್ದಾರೆ.ಯಾಕೆ? ಏನು? ಎಂಬುದು ಗೊತ್ತಿಲ್ಲ. ಸಿಎಂ ಬರುವ ಅರ್ಧ ಗಂಟೆ ಮುಂಚೆ ನನಗೆ ಮಾಹಿತಿ ಕೊಡ್ತಾರೆ.ಅಧಿಕಾರಿಗಳಿಗೆ ಹೇಳಿ ಸಿಎಂ ಸರಿಪಡಿಸಬೇಕು.

MLA Nagendra abused officials in Mysuru

ರಾಜ್ಯ ಬಜೆಟ್ ನಲ್ಲಿ ದೇವರಾಜ ಮಾರುಕಟ್ಟೆಗೆ ನಯಾ ಪೈಸೆ ಕೊಟ್ಟಿಲ್ಲ. ಈಗ ಬಂದು ವೀಕ್ಷಣೆ ಮಾಡ್ತಾ ಇದ್ದಾರೆ. ಇದರಿಂದ ಏನು ಲಾಭ ಹೇಳಿ? ತಮ್ಮ ಅಧಿಕಾರಿಗಳಿಗೆ ಸಿಎಂ ಶಿಷ್ಟಾಚಾರದ ಪಾಠ ಹೇಳಲಿ ಎಂದು ಆರೋಪಿಸಿದ್ದಾರೆ.

 ಲೋಕಸಭಾ ಚುನಾವಣೆಯ ಮೈತ್ರಿ : ಜೆಡಿಎಸ್‌ಗೆ ಸಿಗುವುದು 7 ಸೀಟು ಮಾತ್ರ! ಲೋಕಸಭಾ ಚುನಾವಣೆಯ ಮೈತ್ರಿ : ಜೆಡಿಎಸ್‌ಗೆ ಸಿಗುವುದು 7 ಸೀಟು ಮಾತ್ರ!

ಒಂದು ವೇಳೆ ನಾವು ಆಡಳಿತದಲ್ಲಿ ಇದ್ದರೆ, ಅವರಿಗೆ ಈ ರೀತಿಯಾದ್ರೆ ಬಿಡ್ತಾ ಇದ್ರಾ?.ವಿಧಾನಸೌಧದಲ್ಲಿ ಅಧಿಕಾರಿಗಳನ್ನು ಜಾಡಿಸಿ ಬಿಡ್ತಾ ಇದ್ರು.ವಿಧಾನಸೌಧದಲ್ಲಿ ಈ ಬಗ್ಗೆ ದೂರು ಕೊಡ್ತೇನೆ.ಈಗ ಸಿಎಂಗೂ ಈ ವಿಚಾರವನ್ನು ಗಮನಕ್ಕೆ ತಂದಿದ್ದೇನೆ ಎಂದು ಮೈಸೂರಿನಲ್ಲಿ ಶಾಸಕ ನಾಗೇಂದ್ರ ಸುದ್ದಿಗಾರರಿಗೆ ಹೇಳಿಕೆ ನೀಡಿದ್ದಾರೆ.

English summary
Chamarajanagara MLA Nagendra abused officials incident happened in Mysuru. Officials did not give information about CM.For this reason MLA was angred.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X