ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಪತ್ತೆಯಾಗಿದ್ದ ದಸರಾ ಆನೆ ಅಶೋಕ ಡಿ.ಬಿ. ಕುಪ್ಪೆಯಲ್ಲಿ ಪತ್ತೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 7: ಕಳೆದ 5 - 6 ದಿನಗಳ ಕೆಳಗೆ ಮಾವುತನಿಂದ ತಪ್ಪಿಸಿಕೊಂಡು ನಾಪತ್ತೆಯಾಗಿದ್ದ ಅಶೋಕ ಆನೆ ಇದೀಗ ಪತ್ತೆಯಾಗಿದೆ.

ಆಪರೇಷನ್ ಹುಲಿ ಪತ್ತೆಗಾಗಿ ಕಳೆದ ವಾರ ಎಚ್. ಡಿ ಕೋಟೆ ತಾಲೂಕಿನ ನಾಗರಹೊಳೆ ಅರಣ್ಯ ವ್ಯಾಪ್ತಿಯ ಅಂತರಸಂತೆವಲಯದ ತಾರಕಾ ಬೀಟ್ ನಿಂದ ಬಂದಿದ್ದ ಆನೆ ಅಶೋಕ ತಪ್ಪಿಸಿಕೊಂಡಿತ್ತು. ಆನೆಗಾಗಿ ಅರಣ್ಯ ಇಲಾಖಾ ಸಿಬ್ಬಂದಿ ಐದು ದಿನಗಳಿಂದ ಸತತ ಕಾರ್ಯಾಚರಣೆ ನಡೆಸಿದ್ದರು.

ಹುಲಿ ಹಿಡಿಯಲು ಹೋದಾಗ ನಾಪತ್ತೆಯಾದ ದಸರಾ ಆನೆ ಅಶೋಕಹುಲಿ ಹಿಡಿಯಲು ಹೋದಾಗ ನಾಪತ್ತೆಯಾದ ದಸರಾ ಆನೆ ಅಶೋಕ

ಇದೀಗ ಡಿ.ಬಿ ಕುಪ್ಪೆ ವಲಯದಲ್ಲಿ ಅಶೋಕ ಪತ್ತೆಯಾಗಿದೆ.ಮತ್ತಿಗೂಡು ಆನೆ ಶಿಬಿರದಿಂದ ಹುಲಿ ಕಾರ್ಯಾಚರಣೆಗೆ ಅಶೋಕ ಆನೆಯನ್ನು ಕರೆಸಿಕೊಳ್ಳಲಾಗಿತ್ತು. ಹುಲಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅಶೋಕ ಆನೆ ನಾಪತ್ತೆಯಾಗಿದ್ದನು.

Missing Dasara elephant Ashoka found at DB Kuppe village

ಸದ್ಯ ಬಳ್ಳೆ ಆನೆ ಶಿಬಿರದಲ್ಲಿ ಅಶೋಕನಿಗೆ ಆರೈಕೆ ಮಾಡಲಾಗುತ್ತಿದ್ದು, ಇಂದು ಮತ್ತೆ ಮತ್ತಿಗೂಡು ಆನೆ ಶಿಬಿರಕ್ಕೆ ವಾಪಾಸ್ಸಾಗಲಿದ್ದಾನೆ. ವೈದ್ಯರಿಂದ ಅಶೋಕನ ತಪಾಸಣಾ ಕಾರ್ಯ ನಡೆದಿದ್ದು ಆರೋಗ್ಯವಾಗಿರುವ ಆಶೋಕ ಆನೆ ಮತ್ತೆ ತನ್ನ ಸ್ವಸ್ಥಾನಕ್ಕೆ ಮರಳಲಿದೆ.

 ಬಂಡೀಪುರ ಕಾಡಂಚಿನ ರೈತರ ನಿದ್ದೆಗೆಡಿಸಿದ ಕಾಡಾನೆಗಳು! ಬಂಡೀಪುರ ಕಾಡಂಚಿನ ರೈತರ ನಿದ್ದೆಗೆಡಿಸಿದ ಕಾಡಾನೆಗಳು!

ಎಚ್. ಡಿ ಕೋಟೆಯ ಅಂತರಸಂತೆ ಗ್ರಾಮದಲ್ಲಿ ಹಸುಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದ್ದ ಹುಲಿಯನ್ನು ಹಿಡಿಯಲು ಪಟಾಕಿಗಳ ಜತೆ, ದಸರಾ ಆನೆ ಅರ್ಜುನನ್ನೂ ಸೇರಿ ನಾಲ್ಕು ಆನೆಗಳನ್ನು ಕರೆದೊಯ್ಯಲಾಗಿತ್ತು.

English summary
Missing Dasara elephant Ashoka found at DB Kuppe village in Mysore district. Ashoka escaped during the tiger operation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X