ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲ್ಲರ ಕಣ್ಣು ಚಂದ್ರನತ್ತ ನೆಟ್ಟಾಗ ಎಂಟು ಶಾಪ್‌ ಲೂಟಿ ಮಾಡಿದ ಕಳ್ಳರು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜು.28: ಕೇತುಗ್ರಸ್ತ ಚಂದ್ರಗ್ರಹಣ ಶುಕ್ರವಾರ ರಾತ್ರಿ ಸಂಭವಿಸಿದೆ. ಕೆಲವರು ಗ್ರಹಣ ಎಂದು ಅಂಗಡಿ ಮುಗ್ಗಟ್ಟುಗಳನ್ನು ಬೇಗ ಮುಚ್ಚಿ ಮನೆಗೆ ತೆರಳಿದ್ದರು, ಇದೇ ಸಮಯ ಉಪಯೋಗಿಸಿಕೊಂಡ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

ಪ್ರಗತಿಪರರು ಸ್ಮಶಾನದಲ್ಲಿ ಮಾಂಸಾಹಾರ ತಿಂದರೆ ಮೌಢ್ಯ ತೊಲಗುವುದೆ?ಪ್ರಗತಿಪರರು ಸ್ಮಶಾನದಲ್ಲಿ ಮಾಂಸಾಹಾರ ತಿಂದರೆ ಮೌಢ್ಯ ತೊಲಗುವುದೆ?

ಚಂದ್ರಗ್ರಹಣ ಆದ್ದರಿಂದ ಯಾರು ಕೂಡ ಗ್ರಹಣ ಕಾಲ ಮುಗಿಯುವವರೆಗೆ ಹೊರಗಡೆ ಬಂದಿಲ್ಲ, ಬಳಿಕ ಪೂಜೆ, ಸ್ನಾನ ಹೀಗೆ ಅನೇಕ ವಿಧಿವಿಧಾನಗಳನ್ನು ಪೂರೈಸುವುದರಲ್ಲಿ ನಿರತರಾಗಿದ್ದರೆ ಕಳ್ಳರು ಮೆಡಿಕಲ್‌ ಸ್ಟೋರ್‌, ಪ್ರಾವಿಜನ್‌ ಸ್ಟೋರ್‌, ಸ್ಟೇಷನರಿ ಅಂಗಡಿಗಳ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

Miscreants looted while lunar eclipse was on!

ರಾತ್ರಿ 1.45ರಿಂದ 2.43ರವರೆಗೆ ಗ್ರಹಣ ಸಂಭವಿಸಿತು. ಮೈಸೂರಿನ ಕನಕದಾಸ ನಗರದ ನೇತಾಜಿ ವೃತ್ತದ ಬಳಿ ಇರುವ ಅಂಗಡಿಗಳನ್ನು ಕಳ್ಳರು ದೋಚಿದ್ದಾರೆ. ಮೆಡಿಕಲ್‌ ಸ್ಟೋರ್‌, ಸ್ಟೇಷನರಿ, ಪ್ರಾವಿಷನ್‌ ಸ್ಟೋರ್‌ ಸೇರಿ ಒಟ್ಟು 8 ಅಂಗಡಿಗಳನ್ನು ಕಳ್ಳತನ ಮಾಡಿದ್ದಾರೆ.

Miscreants looted while lunar eclipse was on!

ಲಕ್ಷಾಂತರ ರೂಪಾಯಿ ದೋಚಿದ್ದಾರೆ. ಶೆಟರ್ ಗಳನ್ನು ಮೀಟಿ ತೆರೆಯಲು ಹೈಡ್ರಾಲಿಕ್ ಜಾಕ್ ಗಳನ್ನು ಬಳಸಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಸ್ಥಳಕ್ಕೆ ಕುವೆಂಪು ನಗರ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದು, ಕಳ್ಳರಿಗೆ ಬಲೆ ಬೀಸಿದ್ದಾರೆ.

English summary
All most all citizens Mysuru were watching lunar eclipse on Friday night. But these looters were aware of that and easily looted eight shops at Netaji circle in Kanakadas nagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X