ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್‌ ಶಾಸಕರನ್ನು ಸೆಳೆಯುವ ಜಾರಕಿಹೊಳಿ ಯತ್ನಕ್ಕೆ ಸ್ನೇಹಿತನ ಅಡ್ಡಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 30: ಐವರು ಕಾಂಗ್ರೆಸ್ ಶಾಸಕರ ರಾಜೀನಾಮೆ ಕೊಡಿಸಲು ಸಿದ್ಧ ಎಂಬ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್‌, ಈ ಕುರಿತು ಪಕ್ಷ ಅಧಿಕೃತತೆ ನೀಡಿದೆಯಾ? ಅದೇನು ಹುಡುಗಾಟದ ಮಾತಾ ಎಂದು ಸಚಿವ ರಮೇಶ್ ಜಾರಕಿಹೊಳಿಗೆ ಎಸ್.ಟಿ ಸೋಮಶೇಖರ್ ತಿರುಗೇಟು ನೀಡಿದರು.

ರಾಜ್ಯ ಬಿಜೆಪಿ ಸರ್ಕಾರ ಸುಭದ್ರವಾಗಿದೆ. ನಮಗೆ ಪೂರ್ಣ ಬಹುಮತ ಇದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸರ್ಕಾರ ಸುಗಮವಾಗಿ ಸಾಗುತ್ತಿದೆ. ನಾವೆಲ್ಲ ತೃಪ್ತಿಯಾಗಿದ್ದೇವೆ ಎಂದರು.

ಮೈಸೂರು ಮೃಗಾಲಯಕ್ಕೆ ಮತ್ತೆ 25.14 ಲಕ್ಷ ರೂ. ಚೆಕ್ ಹಸ್ತಾಂತರಮೈಸೂರು ಮೃಗಾಲಯಕ್ಕೆ ಮತ್ತೆ 25.14 ಲಕ್ಷ ರೂ. ಚೆಕ್ ಹಸ್ತಾಂತರ

ಈಗ ಬಿಜೆಪಿಗೆ ಯಾರನ್ನೋ ಕರೆದುಕೊಂಡು ಬರುವ ಅಗತ್ಯವೇನಿದೆ? ಆ ಐದು ಜನ ಶಾಸಕರ ಅವಶ್ಯಕತೆ ನಮಗೆ ಇಲ್ಲ. ನಮಗೆ ಹೈಕಮಾಂಡ್ ಇದೆ. ಎಲ್ಲವನ್ನೂ ಹೈಕಮಾಂಡ್ ನಾಯಕರು ನೋಡಿಕೊಳ್ಳುತ್ತಾರೆ ಎನ್ನುವ ಮೂಲಕ ಸ್ನೇಹಕೂಟದ ಸದಸ್ಯನ ಹೇಳಿಕೆಯ ವಿರುದ್ಧವೇ ಸಚಿವ ಸೋಮಶೇಖರ್ ಆಕ್ಷೇಪಿಸಿದರು.

Mysuru: Minister ST Somashekhar React About Ramesh Jarakiholi Statement

ರಾಜ್ಯದಲ್ಲಿ ಮಳೆ ಬರುತ್ತಿದೆ. ರೈತರಿಗೆ ಹೊಸ ಸಾಲ ಕೊಡುವುದಕ್ಕೆ ಚಾಲನೆ ನೀಡಿದ್ದೇವೆ. ಪ್ರತಿ ಜಿಲ್ಲಾ ಡಿಸಿಸಿ ಬ್ಯಾಂಕ್ ಗಳನ್ನು ನಾವು ಪರಿಶೀಲನೆ ಮಾಡುತ್ತಿದ್ದೇವೆ. ಹೊಸ ಸಾಲ ಎಷ್ಟು ಜನರಿಗೆ ಕೊಡ್ತಿದ್ದಾರೆ ಎನ್ನುವುದನ್ನು ಸಹ ನೋಡತ್ತಿದ್ದೇವೆ ಎಂದು ತಿಳಿಸಿದರು.

ನಿನ್ನೆ ನಾನು ಪಿರಿಯಾಪಟ್ಟಣದಲ್ಲಿ ಸಹಕಾರ ಸಂಘಕ್ಕೆ ಭೇಟಿ ನೀಡಿದ್ದು, ಎಷ್ಟು ಜನರಿಗೆ ಸಾಲ ನೀಡಿದ್ದಾರೆ ಏನೆಲ್ಲ ತೊಂದರೆ ಆಗುತ್ತಿದೆ ಎಂಬುದನ್ನು ಕೇಳಿ ತಿಳಿದುಕೊಂಡಿದ್ದೇನೆ. 21 ಬ್ಯಾಂಕ್ ಗಳಲ್ಲೂ ಕೂಡ ಕೆಲವು ಅಧಿಕಾರಿಗಳನ್ನು ನೇಮಕ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ಮೈಸೂರು ಪ್ರವಾಸಿ ತಾಣಗಳ ಪುನರಾರಂಭ: ಉಸ್ತುವಾರಿ ಸಚಿವರ ಮಾತುಮೈಸೂರು ಪ್ರವಾಸಿ ತಾಣಗಳ ಪುನರಾರಂಭ: ಉಸ್ತುವಾರಿ ಸಚಿವರ ಮಾತು

ಅಧಿಕಾರಿಗಳು ಇನ್ಸ್ ಪೆಕ್ಷನ್ ಮಾಡುವುದು, ಮರುಪಾವತಿ ಮಾಡ್ತಿದ್ದಾರಾ? ಹೊಸ ಸಾಲ ಕೊಟ್ಟಿದ್ದಾರಾ? ಸಾಲ ಕೊಡುವುದರಲ್ಲಿ ತೊಂದರೆ ಮಾಡುತ್ತಿದ್ದಾರಾ ಎಂಬ ದೃಷ್ಟಿಯಿಂದ ಆಯಾ ವ್ಯಾಪ್ತಿಯಲ್ಲಿ ಬರುವ ಜಿಲ್ಲೆ ಮತ್ತು ಜಾಯಿಂಟ್ ರಿಜಿಸ್ಟ್ರಾರ್ ಏನಿರ್ತಾರೆ ಅವರ ಮೂಲಕ ಎಲ್ಲಾ ಡಿಸಿಸಿ ಬ್ಯಾಂಕ್ ಗೂ ಭೇಟಿ ನೀಡಬೇಕು. ರೈತರಿಗೆ ಕೊಡುವ ಸಾಲ ಸುಲಲಿತವಾಗಿ ಆಗಬೇಕು ಎಂಬ ಸೂಚನೆ ನೀಡಲಾಗಿದೆ ಎಂದರು.

English summary
Mysuru district Incharge minister ST Somashekhar, responded to a statement by Minister Ramesh Jarakiholi that five Congress MLAs were ready to resign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X