ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ, ಜಿಟಿಡಿ ಹೇಳಿಕೆ ಸಮರ್ಥಿಸಿಕೊಂಡ ಸಚಿವ ಸಾರಾ ಮಹೇಶ್

|
Google Oneindia Kannada News

Recommended Video

ಮೈತ್ರಿ ಸರ್ಕಾರದಲ್ಲಿ ಅಸಮಾಧಾನ ಇರೋದಿಕ್ಕೆ ಇದೇ ಉದಾಹರಣೆ | Oneindia Kannada

ಮೈಸೂರು, ಮೇ. 6:ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್, ಬಿಜೆಪಿಗೆ ಮತ ಹಾಕಿದ್ದಾರೆ ಎಂಬ ಸಚಿವ ಜಿ ಟಿ ದೇವೇಗೌಡ ಹೇಳಿಕೆಯನ್ನು ಪ್ರವಾಸೋದ್ಯಮ ಸಚಿವ ಸಾ ರಾ ಮಹೇಶ್ ಸಮರ್ಥಿಸಿಕೊಂಡಿದ್ದಾರೆ. ಜಿಟಿಡಿ ಹಾಗೂ ಸಿದ್ದರಾಮಯ್ಯ ಒಂದೇ ಕ್ಷೇತ್ರದ ನಾಯಕರು. ಅವರು ಹೇಳಿದಂತೆ ಮೈಸೂರಿನಲ್ಲಿ ಒಂದಷ್ಟು ವ್ಯತ್ಯಾಸ ಆಗಿರಬಹುದು. ಅದನ್ನು ಹೊರತುಪಡಿಸಿ ಮೈತ್ರಿ ಸಕ್ಸಸ್ ಆಗಿದೆ ಎಂದಿದ್ದಾರೆ.

 ಮಂಡ್ಯದಲ್ಲಿ ನಿಖಿಲ್ ಗೆಲ್ಲುತ್ತಾರೆ, ಆದರೆ ಅಂತರ ಕಡಿಮೆ:ಸಾ.ರಾ.ಮಹೇಶ್ ಮಂಡ್ಯದಲ್ಲಿ ನಿಖಿಲ್ ಗೆಲ್ಲುತ್ತಾರೆ, ಆದರೆ ಅಂತರ ಕಡಿಮೆ:ಸಾ.ರಾ.ಮಹೇಶ್

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದ್ಭೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಮತಹಾಕಿದ್ದಾರೆ ಎಂಬ ವಿಚಾರದಲ್ಲಿ ನನ್ನನ್ನು ವಜಾಗೊಳಿಸಲು ಮುಂದಾಗಿದ್ದಾರೆ ಎಂಬುದು ಸುಳ್ಳು. ಸಿದ್ದರಾಮಯ್ಯ ಈ ಬಗ್ಗೆ ಎಲ್ಲೂ ಪ್ರಸ್ತಾಪ ಮಾಡಿಲ್ಲ. ಹೀಗಾಗಿ ಆ ಮಾತು ನಂಬಲು ಸಾಧ್ಯವಿಲ್ಲ ಎಂದರು.

ಜಿ ಟಿ ದೇವೇಗೌಡರ ಹೇಳಿಕೆಯನ್ನು ಅಲ್ಲಗಳೆದ ಸಚಿವ ಸಾ ರಾ ಮಹೇಶ್ಜಿ ಟಿ ದೇವೇಗೌಡರ ಹೇಳಿಕೆಯನ್ನು ಅಲ್ಲಗಳೆದ ಸಚಿವ ಸಾ ರಾ ಮಹೇಶ್

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್​ - ಜೆಡಿಎಸ್​ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎರಡೂ ಪಕ್ಷಗಳಲ್ಲಿ ಸೋತವರು ಮತ್ತು ಗೆದ್ದವರು ಇದ್ದಾರೆ. ಎರಡೂ ಪಕ್ಷಗಳೂ ಮೈತ್ರಿ ಮಾಡಿಕೊಂಡಲ್ಲಿ ಅಭ್ಯರ್ಥಿಗಳು ಮೂರನೇ ಪಕ್ಷದ ಬಾಗಿಲಿಗೆ ಹೋಗುವ ಸಾಧ್ಯತೆ ಹೆಚ್ಚು. ಇಲ್ಲವಾದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ. ಈ ಕಾರಣಕ್ಕಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತಿಲ್ಲ. ಆದರೆ ಚುನಾವಣೆಯಲ್ಲಿ ಫ್ರೆಂಡ್ಲಿ ಫೈಟ್​ ಮಾಡುತ್ತೇವೆ. ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟ, ಒಂದು ವೇಳೆ ವರಿಷ್ಠರು ತೀರ್ಮಾನ ಮಾಡಿದ್ರೆ ಒಂದಾಗುತ್ತೇವೆ ಎಂದು ಸಾರಾ ಮಹೇಶ್ ಸ್ಪಷ್ಟಪಡಿಸಿದರು.

Minister Sa Ra Mahesh defended GT Devegowdas statement

ಮಣ್ಣಿನ ಮಕ್ಕಳು ಹೇಳಿಕೆ ವಿಚಾರದಲ್ಲಿ ಈಶ್ವರಪ್ಪ ಹೇಳಿಕೆಗೆ ಸಾ.ರಾ. ಮಹೇಶ್ ತಿರುಗೇಟು ನೀಡಿದ್ದಾರೆ. ರಾಜ್ಯದಲ್ಲಿ ಜನ ದೇವೇಗೌಡರ ಕುಟುಂಬವನ್ನು ಮಣ್ಣಿನ ಮಕ್ಕಳು ಎಂದು ಕರೆಯುತ್ತಾರೆ. ಅವರು ಬೇಕಿದ್ದರೆ ಕಮಲದ ಮಕ್ಕಳು ಅಂತ ಅಂದುಕೊಳ್ಳಲಿ. ಸರ್ಕಾರ ಬೀಳುತ್ತದೆ ಎಂಬ ವಿಚಾರವನ್ನು ಬಿಜೆಪಿ 10 ಬಾರಿ ಹೇಳಿದೆ.ಈಗ ಲೋಕಸಭಾ ಚುನಾವಣೆ ನಂತರ ಸರ್ಕಾರ ಬೀಳುತ್ತದೆ ಎನ್ನುತ್ತಾರೆ. ಆಪರೇಷನ್ ಕಮಲ ಮಾಡೊಲ್ಲ ಅನ್ನೋದಾದ್ರೆ ಸರ್ಕಾರ ಹೇಗೆ ಬೀಳುತ್ತದೆ ? ಎಂದು ಪ್ರಶ್ನಿಸಿದರು.

English summary
Sa Ra Mahesh defended Gt Devegowda's statement.Sa ra Mahesh said that alliance candidate in Mysuru will Win by a small margin. Nikhil will win in Mandya with a margin of over 1 lakh votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X