ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಿ ಟಿ ದೇವೇಗೌಡರ ಹೇಳಿಕೆಯನ್ನು ಅಲ್ಲಗಳೆದ ಸಚಿವ ಸಾ ರಾ ಮಹೇಶ್

|
Google Oneindia Kannada News

Recommended Video

ಮೈಸೂರು, ಕೊಡಗು ಫಲಿತಾಂಶದ ಬಗ್ಗೆ ಮಾತನಾಡಿದ್ದ ಜಿ.ಟಿ.ದೇವೇಗೌಡ

ಮೈಸೂರು, ಮೇ 4 : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿಗೆ ತಮ್ಮ ಮತ ಚಲಾಯಿಸಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ನೀಡಿರುವ ಹೇಳಿಕೆಯನ್ನು ಸಚಿವ ಸಾ.ರಾ. ಮಹೇಶ್ ಅಲ್ಲಗಳೆದಿದ್ದಾರೆ.

ಅಲ್ಲದೇ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿಗೆ ತಮ್ಮ ಮತ ಚಲಾವಣೆ ಮಾಡಿದ್ದಾರೆಂದು ಸ್ಪಷ್ಟಪಡಿಸಿದ್ದಾರೆ.

ಮಂಡ್ಯದಲ್ಲಿ ನಿಖಿಲ್ ಗೆಲ್ಲುತ್ತಾರೆ, ಆದರೆ ಅಂತರ ಕಡಿಮೆ:ಸಾ.ರಾ.ಮಹೇಶ್ ಮಂಡ್ಯದಲ್ಲಿ ನಿಖಿಲ್ ಗೆಲ್ಲುತ್ತಾರೆ, ಆದರೆ ಅಂತರ ಕಡಿಮೆ:ಸಾ.ರಾ.ಮಹೇಶ್

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಮೈತ್ರಿ ಧರ್ಮವನ್ನು ಪಾಲಿಸಿದ್ದಾರೆ. ಸಚಿವ ಜಿ.ಟಿ. ದೇವೇಗೌಡರು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ನನಗೆ ತಿಳಿದಿಲ್ಲ. ನನಗೆ ಗೊತ್ತಿರುವಂತೆ ಹಾಗೂ ಮಾಹಿತಿಯಂತೆ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎಂದು ತಿಳಿಸಿದರು.

Minister sa ra mahesh clarifies about G T Devegowda statement

ಐಟಿ ದಾಳಿಯಿಂದ ನಾವು ಕುಗ್ಗುವುದಿಲ್ಲ : ಸಚಿವ ಸಾ ರಾ ಮಹೇಶ್ ಐಟಿ ದಾಳಿಯಿಂದ ನಾವು ಕುಗ್ಗುವುದಿಲ್ಲ : ಸಚಿವ ಸಾ ರಾ ಮಹೇಶ್

ಈ ಹಿಂದೆಯೇ ಜಿ.ಟಿ.ದೇವೇಗೌಡರು ಮೈತ್ರಿಯನ್ನು ಬಹಳ ಬೇಗ ಮಾಡಿಕೊಂಡಿದ್ದರೆ, ಹೆಚ್ಚಿನ ಕಾಲಾವಕಾಶ ಚುನಾವಣಾ ಪ್ರಚಾರಕ್ಕೆ ಲಭ್ಯವಾಗುತ್ತಿತ್ತು. ಹಾಗಾಗಿ ಹೆಚ್ಚಿನ ಮತಗಳ ಅಂತರದಿಂದ ಮೈತ್ರಿ ಅಭ್ಯರ್ಥಿ ಗೆಲ್ಲಲು ಸಾಧ್ಯವಾಗುತ್ತಿತ್ತು ಎಂಬ ಅರ್ಥದಲ್ಲಿ ಹೇಳಿರಬಹುದು. ಮಂಡ್ಯ ಚುನಾವಣೆಯ ಮೇಲೆ ಮಾಧ್ಯಮಗಳು ಹೆಚ್ಚು ಗಮನಹರಿಸುತ್ತಿರುವ ಕಾರಣ ಅವರ ಗಮನವನ್ನು ಮೈಸೂರಿನತ್ತಲೂ ಸೆಳೆಯಲು ಜಿ.ಟಿ.ದೇವೇಗೌಡರು ಈ ರೀತಿಯ ಹೇಳಿಕೆಯನ್ನು ನೀಡಿರಬಹುದೇನೋ ಎಂದು ನಕ್ಕು ಸುಮ್ಮನಾದರು.

English summary
Minister sa ra mahesh clarifies about G T Devegowda statement about JDS party workers voted to BJP candidate in Mysuru- Kodagu constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X