• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸುತ್ತೂರು ಮಠಕ್ಕೆ ಸಚಿವ ರಮೇಶ್ ಜಾರಕಿಹೊಳಿ ಭೇಟಿ

|

ಮೈಸೂರು, ಮೇ 28: ಸುತ್ತೂರು ಮಠಕ್ಕೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಭೇಟಿ ನೀಡಿ ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮಿಗಳ ಆಶೀರ್ವಾದ ಪಡೆದಿದ್ದಾರೆ.

   ಸತ್ತ ತಾಯಿಯನ್ನು ಎಬ್ಬಿಸಲು ಪ್ರಯತ್ನಿಸಿದ ಮಗು ವಿಡಿಯೋ ವೈರಲ್ | Oneindia Kannada

   ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಾರಕಿಹೊಳಿ, ಮರುಭೂಮಿ ಮಿಡತೆಗಳ ದಾಳಿ ಕರ್ನಾಟಕಕ್ಕೂ ಹಬ್ಬುತ್ತಿರುವ ಭೀತಿಯ ಹಿನ್ನಲೆಯಲ್ಲಿ ಕೃಷಿ ಇಲಾಖೆ ಮತ್ತು ಜಲ ಸಂಪನ್ಮೂಲ ಇಲಾಖೆ ಜಂಟಿಯಾಗಿ ತಡೆಗಟ್ಟುವ ಪ್ರಯತ್ನ ಮಾಡಲಿದೆ ಎಂದರು.

   ಮೈಸೂರು ವಿವಿಯಿಂದ ವಿದ್ಯಾರ್ಥಿಗಳನ್ನು ತವರಿಗೆ ಕಳಿಸಲು ಚೀನಾ ಮನವಿ

   ಕೃಷಿ ಬೆಳೆ ನಾಶ ಮಾಡುವ ಈ ಮಿಡತೆಗಳ ಬಗ್ಗೆ ಮಾಹಿತಿ ಇದೆ. ಕೃಷಿ ಇಲಾಖೆ ಹಾಗೂ ಜಲ ಸಂಪನ್ಮೂಲ ಇಲಾಖೆ ಸದ್ಯದಲ್ಲಿಯೇ ಒಟ್ಟಿಗೆ ಸಭೆ ನಡೆಸಲಿದೆ. ಬಳಿಕ ಮಿಡತೆಗಳನ್ನು ನಿಯಂತ್ರಣ ಮಾಡುವ ಬಗ್ಗೆ ರೂಪುರೇಷೆ ರೂಪಿಸಲಾಗುವುದು ಎಂದು ಮೈಸೂರಿನ ಸುತ್ತೂರು ಮಠದಲ್ಲಿ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.

   ಇದೇ ಸಂದರ್ಭದಲ್ಲಿ ಕೃಷಿಗೆ ನೀರು ಹರಿಸುವ ವಿಚಾರವಾಗಿ ಮಾತನಾಡಿದ ಅವರು, ಅಂತರ ರಾಜ್ಯ ಮಟ್ಟದಲ್ಲಿ ಸಭೆ ನಡೆದಿದ್ದು, ಶೀರ್ಘದಲ್ಲೇ ನೀರು ಬಿಡುಗಡೆಯಾಗಲಿದೆ ಎಂದು ಜಲಸಂಪನ್ಮೂಲ ಸಚಿವ ತಿಳಿಸಿದರು.

   ಕಾವೇರಿ, ಕಬಿನಿ ಜಲಾಶಯಗಳು ಅಂತರ ರಾಜ್ಯ ವಿವಾದ ಹೊಂದಿವೆ. ಈ ಜಲಾಶಯಗಳಿಂದ ನೀರು ಹರಿಸುವ ಅಧಿಕಾರ ನಮಗೆ ಇಲ್ಲ.

   ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರದ ಸಭೆ ನಡೆದಿದ್ದು, ಅಧಿಕಾರಿಗಳ ಸಭೆಯಲ್ಲಿ ಯಾವಾಗ ನೀರು ಬಿಡಬೇಕು ಎಂದು ಚರ್ಚೆಯಾಗಿದೆ.

   ಜಲಾಶಯಗಳ ಸ್ಥಿತಿಗತಿ ನೋಡಿಕೊಂಡು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

   English summary
   Minister Ramesh Jarakiiholi has been blessed with Sri Sivaratri Desi Kendra Swamy, Sutturu Math, Mysuru District. Minister Ramesh Jarakiiholi visited the Sutturu Math and received the blessings of Shivaratri Desikendra Swamy.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X